Ticker

6/recent/ticker-posts

Ad Code

Responsive Advertisement

ಸಂಸದ ಡಿ.ಕೆ.ಸುರೇಶ್ ರವರ ಹುಟ್ಟು ಹಬ್ಬದ ಸಲುವಾಗಿ ತುಳಸಿ ಸಸಿ ವಿತರಣೆ

ಬೆಂಗಳೂರು :  ನಗರದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 17 ರ ಜೆ.ಪಿ.ಪಾರ್ಕ್ ನ ಮುಂಭಾಗದಲ್ಲಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಿ.ಕೆ.ಸುರೇಶ್ ರವರ ಹುಟ್ಟುಹಬ್ಬದ ಅಂಗವಾಗಿ, ಸದರಿ ವಾರ್ಡಿಗೆ ನಂ.1 ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡಿರುವ ಆಕಾಶ್ ಮಣಿರವರು ಅಭಿಮಾನಪೂರ್ವಕವಾಗಿ ಯಶವಂತಪುರ ಬ್ಲಾಕ್ ನ ಅಭಿಮಾನಿಗಳ ಬಳಗದ ವತಿಯಿಂದ ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.  

ಮುಖ್ಯ ಅತಿಥಿಗಳಾಗಿ ಆರ್.ಆರ್.ನಗರದ ಕಾಂಗ್ರೆಸ್ ಪಕ್ಷದ ವೀಕ್ಷಕರಾದ ಜೈಪೌಲ್ ರವರೊಂದಿಗೆ ಬೆಂಗಳೂರು  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಆರ್.ಆರ್.ನಗರದ ಕಾರ್ಮಿಕ ಘಟಕದ ಉಸ್ತುವಾರಿಗಳಾದ ಮಂಜುನಾಥ್ ರವರು  ಭಾಗವಹಿಸಿದ್ದರು. ಈ ವೇಳೆ  ಕೇಕ್ ಕತ್ತರಿಸಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಸದರಿಗೆ ಶುಭ ಕೋರಲಾಯಿತು. 

ಆಕಾಶ್ ಮಣಿಯವರ ಉಸ್ತುವಾರಿಯಲ್ಲಿ 250 ತುಳಸಿ ಗಿಡದ ಸಸಿಗಳನ್ನು ಸಾರ್ವಜನಿಕರಿಗೆ ಇದೇ ವೇಳೆ  ಹಂಚಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷೆ ನಳಿನಿ ಕೃಷ್ಣಪ್ಪ, ಜಯಲಕ್ಷ್ಮಿ ಮುಂತಾದ ಕಾಂಗ್ರೆಸ್ ನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement