Ticker

6/recent/ticker-posts

Ad Code

Responsive Advertisement

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಕ್ರಮಗಳನ್ನು ಪೋಷಿಸುವ ಸಂಸ್ಥೆಯಾಗಿದೆ. ಸೌಲಭ್ಯ ಒದಗಿಸುವಲ್ಲಿ ತಾರತಮ್ಯ

ಬೆಂಗಳೂರು: ರಾಜ್ಯದಲ್ಲಿರುವ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿತವಾದ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಇಂದು ಅದರ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಅವರ ಹಲವಾರು ನಿರ್ಧಾರಗಳಿಂದ ಅಕ್ರಮಗಳನ್ನು ಪೋಷಿಸುವ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವುದು ಅತ್ಯಂತ ಖೇದದ ಸಂಗತಿ ಎಂದು ಎಕೆಬಿಎಂಎಸ್ ಸಂಘಟನಾ ಕಾರ್ಯದರ್ಶಿ ಜೆ.ಎಚ್. ಅನಿಲ್ ಕುಮಾರ್, ರವಿಶಂಕರ್, ಮಾಧ್ವ ಮಹಾಸಭಾ ರಾಜ್ಯಾಧ್ಯಕ್ಷ ಮುರಳೀಧರ್ ತಿಳಿಸಿದ್ದಾರೆ.

ಸಚ್ಚಿದಾನಂದ ಮೂರ್ತಿ ಅವರು ಕಳೆದ ಒಂದೂವರೆ ವರ್ಷಗಳಿಂದ ಮಂಡಳಿಯ ಅಧ್ಯಕ್ಷರಾಗಿ ಸಮುದಾಯದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದನ್ನು ಬಿಟ್ಟು ಬ್ರಾಹ್ಮಣರ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಇವರಿಗೆ ಸರ್ಕಾರಿ ಸವಲತ್ತುಗಳನ್ನು ಕೊಟ್ಟು ಸಮುದಾಯದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಹೇಳಲಾಗಿದೆಯೇ ಹೊರತು ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಲ್ಲ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು.

ಹಲವಾರು ಜಿಲ್ಲೆಗಳಲ್ಲಿ ಬ್ರಾಹ್ಮಣ ಮುಖಂಡರೊಂದಿಗೆ ಸಂವಾದ ಎಂಬ ಹೆಸರಿನಲ್ಲಿ ಎಕೆಬಿಎಂಎಸ್ ಸಂಸ್ಥೆಯ ಚುನಾವಣಾ ಅಭ್ಯರ್ಥಿಯೊಬ್ಬರನ್ನು ತಮಗೆ ಕೊಟ್ಟಿರುವ ಸರ್ಕಾರಿ ವಾಹನದಲ್ಲಿ ಕೂಡಿಸಿಕೊಂಡು ಹೋಗಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಒಂದೇ ಅಲ್ಲದೇ ನೈತಿಕವಾಗಿ ಕೂಡ ಅಕ್ಷಮ್ಯ. ನೀವು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುವುದು ಮಾತ್ರವಲದೇ
ತಮ್ಮ ಜೊತೆಯಲಿರುವ ಕೆಲವು ನಿಮ್ಮ ಹಿಂಬಾಲಕ ನಿರ್ದೇಶಕರುಗಳು ಕೂಡ ಕರ್ನಾಟಕ ಬ್ರಾಹ್ಮಣ ಮಂಡಳಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡು ಬಹಿರಂಗವಾಗಿ ಚುನಾವಣಾ ಪ್ರಚಾರ ನಡೆಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಿಷ್ಟೂ ಎಕೆಬಿಎಂಎಸ್ ಸಂಸ್ಥೆಯ ಚುನಾವಣಾ ವಿಷಯವಾದರೆ ಇನ್ನು ತಾವು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ನಡೆಸಿರುವ ಅವ್ಯವಹಾರಗಳ ಬಗ್ಗೆ ಸಾರ್ವಜನಿಕವಾಗಿ ಕೇಳಿಬರುತ್ತಿರುವ ಟೀಕೆಗಳಿಗೆ ತಮ್ಮಿಂದ ಇದುವರೆಗೂ ಸ್ಪಷ್ಟನೆ ನೀಡಿಲ್ಲ. ಅದೇ ಪ್ರಶ್ನೆಗಳನ್ನು ನಾವು ಇಂದು ಮತ್ತೊಮ್ಮೆ ಮಾಧ್ಯಮಗಳ ಮೂಲಕ ತಮ್ಮನ್ನು ಕೇಳಲು ಬಯಸುತ್ತೇವೆ. ದಯಮಾಡಿ ಇದಕ್ಕೆ ತಾವು ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ನಿಮ್ಮ ಒಂದು ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಮೂರು ಜನ ವ್ಯವಸ್ಥಾಪಕ ನಿರ್ದೇಶಕರು ಮಂಡಳಿಯಿಂದ ಹೊರ ನಡೆದಿದ್ದಾರೆ ಇದಕ್ಕೆ ಕಾರಣವೇನು ಚಾಣಕ್ಯ ಆಡಳಿತ ತರಬೇತಿ ಯೋಜನೆಗೆ 82 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಕಛೇರಿಯಿಂದ ಮಾಹಿತಿ ಕೊಡಲಾಗಿದೆ. ಆದರೆ ಇಲ್ಲಿಯವರೆಗೂ ಒಬ್ಬನೇ ಒಬ್ಬ ವಿದ್ಯಾರ್ಥಿ ಈ ಯೋಜನೆಯಲ್ಲಿ ಫಲಾನುಭವಿಯಾಗಿಲ್ಲ ಎಂದು ನಿಮ್ಮ ಮಂಡಳಿಯ ನಿರ್ದೇಶಕರುಗಳೇ ಹೇಳುತ್ತಿದ್ದಾರೆ. ಇದಕ್ಕೆ ತಮ್ಮ ಉತ್ತರವೇನು, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಹೆಸರಿನಲ್ಲಿ 20 ಲಕ್ಷ ವೆಚ್ಚ ತೋರಿಸಲಾಗಿದೆ. ಈ ಪುರಸ್ಕಾರವನ್ನು ಯಾರಿಗೆ ಕೊಡಲಾಗಿದೆ.  

ಸಾಂದೀಪಿನಿ ಶಿಷ್ಯ ವೇತನ ಯೋಜನೆಗೆ 1 ಕೋಟಿ 20 ಲಕ್ಷ ಖರ್ಚು ಮಾಡಿ ಇದರ ಉಪಯೋಗ ಪಡೆದುಕೊಂಡಿರುವವರೆಷ್ಟು ವಿದ್ಯಾರ್ಥಿಗಳು, 5. ದೇವತಾರ್ಚನ ಶಿಬಿರಕ್ಕೆ 40 ಲಕ್ಷ ರೂಪಾಯಿಗಳನ್ನು ತೋರಿಸಿದ್ದೀರಿ. ಶಿಬಿರದಲ್ಲಿ ಭಾಗವಹಿಸಿದ್ದ ಹಲವಾರು ವಿದ್ಯಾರ್ಥಿಗಳು ನನ್ನ ಬಳಿಯೇ ಬಂದು ಹೇಳಿದ್ದಾರೆ, ಯಾವುದೇ ಹಣ ಮಂಡಳಿಯಿಂದ ನಮಗೆ ಬಂದಿಲ್ಲ ಎಂದು ಹಾಗೂ ಕೇವಲ 15 ಜಿಲ್ಲಗಳಲ್ಲಿ ಶಿಬಿರ ನಡೆಸಿ ಉಳಿದ ಜಿಲ್ಲೆಗಳಲ್ಲಿ ನೆಡಸಿಲ್ಲ  ಇದಕ್ಕೆ ಕಾರಣವೇನು, ಕಛೇರಿ ನವೀಕರಣ, ಬಾಡಿಗೆ ಇನ್ನಿತರ ವೆಚ್ಚಗಳಿಗೆ 2.84 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದೆ.

ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ಮಂಡಳಿಗೆ ಅದೇ ಇಲಾಖೆಯ ಯಾವುದಾದರೊಂದು ಕಟ್ಟಡದಲ್ಲಿ ಕಛೇರಿ ಮಾಡಬಹುದಾಗಿತ್ತು. ಅದನ್ನು ಬಿಟ್ಟು ಬಾಡಿಗೆ ಕಟಕಡವನ್ನು ಪಡೆದು ಕಛೇರಿ ನಡೆಸುವ ಅವಶ್ಯಕತೆಯೇನಿತ್ತು. ಇದರ ಹಿಂದೆ ಭ್ರಷ್ಠಾಚಾರದ ವಾಸನೆ ಬರುತ್ತಿಲ್ಲವೇ ಎಂದು ಪ್ರಶ್ನಿಸಿರುವ ಅವರು ಈ ಪ್ರಶ್ನೆಗಳಿಗೆ ಉತ್ತರಿಸುತ್ತೀರೆಂದು ಭಾವಿಸುತ್ತೇವೆ. ಕಛೇರಿ ವಾಹನವನ್ನು ಚುನಾವಣಾ ಕಾರ್ಯಗಳಿಗೆ ಬಳಸಬಾರದು ಎಂದು ಆಗ್ರಹಿಸುದ್ದಾರೆ.

ಹೆಚ್ಚಿನ ಮಾಹಿತಿಗಾಗಿ : ಅನಿಲ್ ಕುಮಾರ್ ಮೊ: 9449821156

Post a Comment

0 Comments

Ad Code

Responsive Advertisement