ಬಳ್ಳಾರಿ ಡಿ ೦೯: ಬಳ್ಳಾರಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ೨೦ ಸಾವಿರ ಒಂದು ಬೆಳ್ಳಿ ಕಾಯಿನ್ ಕೊಟ್ಟಿದ್ದು, ಹೆಸರು ಹೇಳಲು ಸಾಧ್ಯವಾಗದೇ ಇರುವ ಗ್ರಾವi ಪಂಚಾಯಿತಿ ಸದಸ್ಯರುಗಳು ತಿಳಿಸಿದ್ದಾರೆ. ಕೊಂಡಯ್ಯನವರ ಗೆಲುವು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ, ಬಿಜೆಪಿಯವರು ೪೦ಸಾವಿರ ಕೊಟ್ಟರೂ ಮತ ಕೊಂಡಯ್ಯನವರಿಗೇ ಮತದಾರರ ಅಭಿಪ್ರಾಯ.!!!
ಬಿಜೆಪಿಯ ಅಭ್ಯರ್ಥಿ ಜನ ಪರಿಚಯ ಇಲ್ಲದೆ ಇರುವ ಲಿಂಗಾಯತ ಸಮುದಾಯದ ನೂತನ ಅಭ್ಯರ್ಥಿಯನ್ನು ಪಕ್ಷ ಪರಿಚಯ ಮಾಡಿದ್ದು, ಅವರ ಸಮಾಜದಲ್ಲಿ ಕೂಡಾ ಕೆಲವರುಗೆ ಅಸಮಾಧಾನ ಅಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ವಿದ್ಯಮಾನಗಳ0ಲ್ಲಿ ಬಿಜೆಪಿ ಅವರು ೪೦ ಸಾವಿರ ಕೊಡಬೇಕು ಅನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ ಅನ್ನುವ ಮಾಹಿತಿ ಹಳ್ಳಿ ಕಟ್ಟೆಗಳಲ್ಲಿ ಕೇಳಿ ಬರುತ್ತಾ ಇದೆ.ಬಿಜೆಪಿ ಅವರು ಮೊನ್ನೆ ಒಂದು ಸೀರೆ ಒಂದು ಬೆಳ್ಳಿ ಕಾಯಿನ್ ಕೊಟ್ಟಿದ್ದು ಕೇಳಿ ಬಂದಿದೆ.ಈ ಬಾರಿ ಬಿಜೆಪಿ ಪಕ್ಷ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡ0ತೆ ಕಾಣುತ್ತದೆ.
ಈಹಿಂದೆ ಇದೇ ಪಕ್ಷದ ಅಭ್ಯರ್ಥಿ ಇದೆ ಸಮುದಾಯದ ಚನ್ನಬಸವನಗೌಡ ಸ್ಪರ್ಧೆ ಮಾಡಿದ್ದು,ಬಿಜೆಪಿ ನಾಯಕರುಗಳು ಯಾರು ಅವರಿಗೆ ಸಹಕಾರ ನೀಡಲಿಲ್ಲ. ಈಬಾರಿ ಮತ್ತೆ ಇದೆ ಪಕ್ಷದಿಂದ ಅದೇ ಸಮುದಾಯದ ವ್ಯಕ್ತಿ ನಿಂತಿದ್ದಾರೆ ಈಗ ಏನಾಗುತ್ತದೆಯೋ ಕಾದು ನೋಡಬೇಕಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇತರೆ ಸಮುದಾಯದ ಮತಗಳು ಇದ್ದಾವೆ. ಈಗಾಗಲೆ ಕೊಂಡಯ್ಯ ಅಭಿವೃದ್ಧಿ ಕೆಲಸಗಳು, ಪರಿಚಯ ಇರುವ ವ್ಯಕ್ತಿ ಆಗಿದ್ದು ನೂರಕ್ಕೂ ನೂರು ಕಾಂಗ್ರೆಸ್ ಅಭ್ಯರ್ಥಿ ಕೊಂಡಯ್ಯಗೆ ಗೆಲುವು ಆಗುತ್ತದೆ ಎಂದು ಮರ್ಮದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅವರ ಅಭ್ಯರ್ಥಿ ೨೦ ಸಾವಿರಗಳು, ಸಚಿವರು ಸೇರಿಕೊಂಡು ೨೦.ಸಾವಿರಗಳು ಅನ್ನುವ ಲೆಕ್ಕಾಚಾರದಲ್ಲಿ ಒಟ್ಟಾರೆ ೪೦.ಸಾವಿರ ಕೊಡುವ ನಿರೀಕ್ಷೆಯಲ್ಲಿ ಇದ್ದಾರೆ ಅನ್ನುವ ಗುಸು ಗುಸು ಕೇಳಿಬರುತ್ತಿದೆ.ಬಿಜೆಪಿಗೆ ಈಬಾರಿ ಮತ ನೀಡುವುದು ಇಲ್ಲ ದೇಶದ ಜನತೆ, ರೈತರ,ಸಮಸ್ಯೆಗಳನ್ನು ನೋಡಿ, ನೋಡಿ, ಗ್ರಾಮ ಮಟ್ಟದಲ್ಲಿ ರೈತ ಸಮುದಾಯದ ಮಂದಿಗಳು ಇದ್ದಿವಿ ನಾವು ಮತ ಹಾಕಿದರೆ ಜನರು ನಮ್ಮನ್ನು ಏನು ಅನು ಬಹುದು?. ಬೆಳೆಗಳು ನಷ್ಟ ವಾಗಿವೆ. ಪರಿಹಾರ ಕೇಳುವ ಸಮಯದಲ್ಲಿ ನಾವು ಧ್ವನಿ ಎತ್ತ ಬೇಕು,ಬಿಜೆಪಿಗೆ ಮತ ಹಾಕಿ ನಾವು ಧ್ವನಿ ಎತ್ತಲು ಸಾಧ್ಯವಿಲ್ಲ ಎನ್ನುತಿದ್ದಾರೆ ಮತದಾರರರು.
೪೦ ಸಾವಿರದಿಂದ ನಮಗೆ ಏನು ಆಗಲ್ಲ ನ್ಯಾಯಯುತವಾಗಿ ಕೊಂಡಯ್ಯಗೆ ಮತ ಹಾಕಲಾಗುತ್ತದೆ ಎಂದು ತೀರ್ಮಾನ ಮಾಡಿದ್ದೀವಿ ಅನ್ನುವ ಸುಳಿವು ಹೊರಗೆ ಹಾಕಿದ್ದಾರೆ ಮತದಾರ ಬಾಂಧವರು.
Varthajala Daily, Bengaluru
0 Comments