Ticker

6/recent/ticker-posts

Ad Code

Responsive Advertisement

ನಗರ ನಿರಾಶ್ರಿತರ ಉಪಯೋಗಕ್ಕಾಗಿ ನೂತನವಾಗಿ ಆಂಬ್ಯುಲೆನ್ಸ್ ಸೇವೆ ಆರಂಭ

ಬೆಂಗಳೂರು : ಇಂಫ್ಯಾಕ್ಟ್ ಇಂಡಿಯಾ ಕನ್ಸೋರ್ಟಿಯಂ ಮತ್ತು ಕರ್ಡ್ಸ ಸಂಸ್ಥೆಯ  ಸಹಯೋಗದೊಂದಿಗೆ ನಗರ ನಿರಾಶ್ರಿತರಿಗೆ ತುರ್ತು ಸನ್ನಿವೇಶಗಳಲ್ಲಿ ಬಳಸಿಕೊಳ್ಳುವ ಸಲುವಾಗಿ, ನೂತನವಾಗಿ  ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗಿದ್ದು, ಆಂಬುಲೆನ್ಸ್ ಸೇವೆಯ ಉದ್ಘಾಟನಾ ಕಾರ್ಯಕ್ರಮವನ್ನು ನಗರದ ನಂದಿದುರ್ಗಾ ರಸ್ತೆಯಲ್ಲಿರುವ ಕಛೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 


ಐ.ಐ.ಸಿ. ಯೋಜನಾ ವ್ಯವಸ್ಥಾಪಕರಾದ ಡಾ.ರಾಮಚಂದ್ರಪ್ಪ ಹೆಚ್.ಟಿ. ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ   ಮುಖ್ಯ ಅಥಿತಿಗಳಾಗಿ  ಶೇಷಾದ್ರಿಪುರಂ ಬಿಬಿಎಂಪಿ ಪಿ.ಹೆಚ್.ಸಿ. ನ ವೈದ್ಯಾಧಿಕಾರಿ ಡಾ. ಶೈನಿ ಗಣೇಶ್, ಎ.ಹೆಚ್.ಎಫ್.ಎಲ್. ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಶಿ ಆನಂದ್, ಎ.ವಿ,ಪಿ ಹೆಚ್.ಆರ್ ಮತ್ತು ಸಿ.ಎಸ್.ಆರ್ ಎ.ಹೆಚ್.ಎಫ್.ಎಲ್. ನ ಶ್ರೀಮತಿ ಅರ್ಚನಾ ಕೋಲಿ, ಪ್ರಾದೇಶಿಕ ವ್ಯಾಪಾರ ಮುಖ್ಯಸ್ಥರು, ಎ.ಹೆಚ್.ಎಫ್.ಎಲ್. ಕರ್ನಾಟಕದ ಗಿರೀಶ್ ಭಟ್, ಎ.ಹೆಚ್.ಎಫ್.ಎಲ್ ಕರ್ನಾಟಕ ಹೆಚ್.ಆರ್. ಬ್ಯುಸಿನೆಸ್ ಪಾರ್ಟ್ನರ್ ಪ್ರವೀಣ್ ನಾಯ್ಕ್,  ವೈಳಡಿ ಫೌಂಡೇಷನ್ ನ ಸಾಗರ್ ಮಾಂನ್ಕರ್, ಇಂಪ್ಯಾಕ್ಟ್ ಇಂಡಿಯಾ ಕಂನ್ಸೋರ್ಟಿಯಂ ಅಧ್ಯಕ್ಷ ಫಾಧರ್ ಎಡ್ವರ್ಡ್ ಥಾಮಸ್, ,ಇಂಪ್ಯಾಕ್ಟ್ ಇಂಡಿಯಾ ಕಂನ್ಸೋರ್ಟಿಯಂ ಸಂಚಾಲಕ ಡಾ. ಸಂಪತ್ ಟಿ.ಡಿ., ಬಿಬಿಎಂಪಿ ಕಲ್ಯಾಣ ವಿಭಾಗದ ಸಮುದಾಯ ಸಂಘಟಕರುಗಳಾದ ಎಂ.ಬಿ. ಸತ್ಯನಾರಾಯಣ, ಎಂ.ಕೃಷ್ಣಪ್ಪ, ಫಿರ‍್ಡ್-ಕೆ  ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರಾದ ಆಂಜನೇಯ ರೆಡ್ಡಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ 

 ರಿಶಿ ಆನಂದ್ ರವರು ಮಾತನಾಡುತ್ತಾ, ಇಂಪ್ಯಾಕ್ಟ್ ಇಂಡಿಯಾ ಕಂನ್ಸೋರ್ಟಿಯಂ  ನಗರ ನಿರಾಶ್ರಿತರಿಗೊಸ್ಕರ  ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ನಿರಾಶ್ರಿತರನ್ನು ರಸ್ತೆ ಬದಿಗಳಲ್ಲಿ, ಫ್ಲೈ ಓವರ್ ಕೆಳಗಡೆ, ಬಸ್  ನಿಲ್ದಾಣಗಳಲ್ಲಿ, ರೈಲ್ವೆ ಸ್ಟೇಷನ್ ಗಳಲ್ಲಿ ತಮ್ಮ ಜೀವನವನ್ನು  ಕಳೆಯುತ್ತಿರುವವರನ್ನು ರಕ್ಷಣೆ ಮಾಡಿ, ಅವರನ್ನು ಬಿ.ಬಿ.ಎಂ.ಪಿ  ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಂಗುದಾಣಗಳಲ್ಲಿ ಪುನರ್ ವಸತಿ ಕಲ್ಪಿಸಿ, ಅವರು ಘನತೆಯುಕ್ತ ಜೀವನ ನೆಡೆಸಲು  ಕೆಲಸಮಾಡುತ್ತಿದೆ. ಇನ್ನೂ ಹೆಚ್ಚಿನ ಜನರನ್ನು ರಕ್ಷಣೆ ಮಾಡಿ ಬೀದಿಯಲ್ಲಿ ಮಲಗುವವರ ಜೀವನ ಹಸನಾಗಿಸಲು ಇನ್ನೂ ಹೆಚ್ಚಿನ ಕಾರ್ಯಕ್ರಮ ಮಾಡಲು ಆಶಿಸುತ್ತೇವೆ ಮತ್ತು ನಾವು ನಿಮ್ಮೊಟ್ಟಿಗೆ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು. ಯೋಜನಾ ವ್ಯವಸ್ಥಾಪಕರಾದ ಡಾ. ರಾಮಚಂದ್ರಪ್ಪ ಎಚ್.ಟಿ. ರವರ ಅಚ್ಚುಕಟ್ಟಾದ ನಿರೂಪಣೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ಡ್ಸ್ ನ ಜೆ.ಜೆ.ಎಂ ಟೀಮ್ ಲೀಡರ್  ಶ್ರೀಮತಿ ಪಲ್ಲವಿ ರವರು  ಕಾರ್ಯಕ್ರಮಕ್ಕೆ ಆಗಮಿಸಿದ  ಎಲ್ಲರಿಗೂ ವಂದನಾರ್ಪಣೆ ಮಾಡಿದರು.

Post a Comment

0 Comments

Ad Code

Responsive Advertisement