Ticker

6/recent/ticker-posts

Ad Code

Responsive Advertisement

ರುದ್ರಭೂಮಿ: ರಸ್ತೆ ಅಡಚಣೆ ನಿವಾರಿಸಲು ಕೋರಿ ಆರ್ಯ ವೈಶ್ಯ ಮಂಡಲಿ ಮನವಿ

 ಮಧುಗಿರಿ:- ಹಿಂದೂ ರುದ್ರಭೂಮಿಗೆ (ಸುಡುವ ಪದ್ದತಿ)ಪಾರ್ಥಿವ ಶರೀರಗಳನ್ನು ಕೊಂಡೊಯ್ಯಲು ಆಗಿರುವ ರಸ್ತೆ ಅಡಚಣೆ ನಿವಾರಿಸುವಂತೆ  ತಹಶಿಲ್ದಾರರಿಗೆ ಆರ್ಯ ವೈಶ್ಯ   ಮಂಡಲಿವತಿಯಿಂದ ಮನವಿ ಸಲ್ಲಿಸಿದೆ. 


ಪಟ್ಟಣದ  ಪುರಸಭೆ ವ್ಯಾಪ್ತಿಯಲ್ಲಿ ರುವ ಹಿಂದೂ ರುದ್ರಭೂಮಿ ಸುಡುವ ಪದ್ಧತಿ ಜಾಗಕ್ಕೆ ಶವಗಳನ್ನು ಹೊತ್ತೊಯ್ಯುವ ಮಾರ್ಗದ ಮಧ್ಯೆ ಆಗಸರ ಹೊಳೆ ಸೇತುವೆ ದುರಸ್ಥಿಯಾಗಿದ್ದು ಸಂಪರ್ಕ ಕಡಿತಗೊಂಡಿದೆ . ರಾಘವೇಂದ್ರ ಕಾಲೋನಿಯಿಂದ ಬೇತಾಳ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಛತ್ರ ಭಾವಿ ಸಮೀಪವಿರುವ ರುದ್ರಭೂಮಿಗೆ ಶವಗಳನ್ನು ತೆಗೆದುಕೊಂಡು ಹೋಗಲು ಈಗ ಕಷ್ಟಕರವಾಗಿದೆ . ಇಲ್ಲಿ ಸ ಸೇತುವೆ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಚೋಳೇನಹಳ್ಳಿ ಕೆರೆ ನೀರು ಕೋಡಿ ತುಂಬಿ ಹರಿಯುತ್ತಿರುವ ಸಂಪೂರ್ಣ ದುರಸ್ತಿಯಾಗಿದ್ದು , ಮೇಲ್ವೇತುವೆ ನಿರ್ಮಾಣವಾಗಬೇಕಾಗಿದೆ . ಇದಲ್ಲದೆ ಸಂಪರ್ಕ ರಸ್ತೆ ಸಂ ಹಾಳಾಗಿದ್ದು , ಇಲ್ಲಿ ಜನರು ಓಡಾಡಲು ಕಷ್ಟಕರವಾಗಿದೆ . ರೈತರು ಜಮೀನುಗಳಿಗೆ ಹೋಗಲು ಕಷ್ಟಕರ ದಯಮಾಡಿ ತಾವು ಕೂಡಲೇ ಕ್ರಮ ಕೈಗೊಂಡು ಈ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು . ತಾವುಗಳು ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಡಿ . ಜಿ .ಶಂಕರನಾರಾಯಣಶೆಟ್ಟಿ ಮಾತನಾಡಿ, ಈ ರುದ್ರಭೂಮಿ ಸುಡುವ ಪದ್ದತಿಗೆ ಆರ್ಯವೈಶ್ಯ , ಬ್ರಾಹ್ಮಣರು, ಸೋಮವಂಶ ಆರ್ಯಕ್ಷತ್ರಿಯ ರವರು ವಿಶ್ವಕರ್ಮ  ಹಾಗೂ ಸುಡುವ ಪದ್ಧತಿ ಉಳ್ಳವರು ಈ ರುದ್ರಭೂಮಿಯಲ್ಲಿ ಉಪಯೋಗಿಸುತ್ತಿದ್ದು ಈಗ ಮಾರ್ಗಮಧ್ಯದಲ್ಲಿ ಶವವನ್ನು ತರಲು ಕಷ್ಟಕರವಾಗಿದ್ದು ಸಂಬಂಧಪಟ್ಟವರು ಕೂಡಲೇ ಸರಿಪಡಿಸಬೇಕಾಗಿ ಮನವಿ ಮಾಡಿದರು. 

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ವೈ .ರವಿ, ಸ್ಥಳ ಪರಿಶೀಲನೆ ಮಾಡಿ ಇಂತಹ ಅವ್ಯವಸ್ಥೆಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರವು ಅದ್ಯತೆ ನೀಡುವಂತೆ ಸೂಚಿಸಿದೆ, ಸಂಬಂಧಪಟ್ಟ ಇಲಾಖೆ ,ಪುರಸಭೆ  ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. 

ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಹಾಗೂ ಪದಾಧಿಕಾರಿಗಳು ಮತ್ತು ಮಹಿಳೆಯರು ಹಾಜರಿದ್ದರು..

Post a Comment

0 Comments

Ad Code

Responsive Advertisement