ಬೆಂಗಳೂರು, ಡಿ, 4; ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳ ಕುರಿತಂತೆ ವಾಹನ ಮಾಲೀಕರಿಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡುವ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಎಫ್ ಟಿವಿಆರ್ ಉಪಕರಣಗಳ ಮೂಲಕ ಪೊಲೀಸ್ ಸಿಬ್ಬಂದಿಗಳು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ನೋಟಿಸ್ ಸಿದ್ಧಪಡಿಸುತ್ತಿದ್ದು, ಅದನ್ನು ಅಂಚೆ ಮೂಲಕ ಕಳುಹಿಸಲಾಗುತ್ತಿದೆ. ಮುದ್ರಣ, ಸ್ಟಾಂಪ್ ವೆಚ್ಚ ಸೇರಿದಂತೆ ಪ್ರತಿ ನೋಟಿಸ್ ಗೆ 4 ರೂಪಾಯಿ 50 ಪೈಸೆ ವೆಚ್ಚವಾಗುತ್ತಿದೆ.
ವಾಹನ ಮಾಲೀಕರು ವಿಳಾಸ ಬದಲಾವಣೆ ಮಾಡಿದರೆ, ನೋಟಿಸ್ ತಲುಪದೇ ಸಿಬ್ಬಂದಿಗಳ ಶ್ರಮ ಅಪವ್ಯಯವಾಗುತ್ತಿದೆ. ಇದನ್ನು ತಪ್ಪಿಸಲು ಇನ್ನು ಮುಂದೆ ಎಸ್ ಎಂಎಸ್ ಮೂಲಕವೇ ನೋಟಿಸ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
0 Comments