ನವದೆಹಲಿ, ಡಿ 21: ರೈತರ ಖಾತೆಗೆ ಎರಡು ಸಾವಿರ ರೂಗಳು ಜಮಾ, ಹಣ ಬರದಿದ್ರೆ ಏನು ಮಾಡಬೇಕು? ಎಲ್ಲಿ ದೂರು ಕೊಡಬೇಕು?
ದೇಶದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ೧೦ನೇ ಕಂತಿನ ಹಣದ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದ್ದು, ಅರ್ಹ ರೈತರ ಬ್ಯಾಂಕ್ ಖಾತೆಗೆ ೨,೦೦೦ರೂ. ಜಮಾ ಮಾಡಲಾಗುವುದು.
ನೀವು ೨,೦೦೦ ರೂಪಾಯಿಗಳ ೧೦ನೇ ಕಂತಿಗಾಗಿ ಕಾಯುತ್ತಿದ್ದರೆ, ಈ ತಿಂಗಳ ಅಂತ್ಯದವರೆಗು ಯಾವುದೇ ಸಮಯದಲ್ಲಿ ನಿಮ್ಮ ಖಾತೆಗೆ ಹಣವು ಬರುವ ಸಾಧ್ಯತೆಯಿದೆ.
ಆದರೆ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೊ ಎಂಬುದನ್ನು ಗಮನಿಸಿ.
ಪಿಎಂ ಕಿಸಾನ್ನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು, ಮೊದಲು ನೀವು ಮಾಡಬೇಕ್ಕಾದ್ದು, ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ https://pmkisan.gov.in ಗೆ ಭೇಟಿ ನೀಡಬೇಕು. ಇಲ್ಲಿ ನೀವು ರೈತರ ಕಾರ್ನರ್ ಆಯ್ಕೆ ಮಾಡಿ. ರೈತರ ಕಾರ್ನರ್ ವಿಭಾಗದಲ್ಲಿ ಫಲಾನುಭವಿಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನೀವು ಪಟ್ಟಿಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆಯ್ಕೆ ಮಾಡಬೇಕು. ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಲಾಗುವುದು.
ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ಚಿಂತಿಸಬೇಡಿ. ನೀವು PM ಕಿಸಾನ್ ಸಮ್ಮಾನ್ ಸಹಾಯವಾಣಿ ೦೧೧-೨೪೩೦೦೬೦೬ (011-24300606) ಗೆ ಕರೆ ಮಾಡಿ ಹಚ್ಚಿನ ಮಾಹಿತಿಯನ್ನು ಪಡಯಬಹುದು ಹಾಗು ದೂರು ದಾಖಲಿಸಬಹುದು.
ಒಂದು ಹಣಕಾಸು ವರ್ಷದಲ್ಲಿ PM ಕಿಸಾನ್ ಕಂತು ಮೂರು ಬಾರಿ ಕ್ರೆಡಿಟ್ ಆಗುತ್ತದೆ. ಅವಧಿ ೧ ರಿಂದ ಏಪ್ರಿಲ್-ಜುಲೈ, ಅವಧಿ ೨ ಆಗಸ್ಟ್ ನಿಂದ ನವೆಂಬರ್ ವರೆಗೆ, ಅವಧಿ ೩ ಡಿಸೆಂಬರ್ ನಿಂದ ಮಾರ್ಚ್ ವರೆಗೆ.
0 Comments