ಬೆಂಗಳೂರು : ಮತ್ತೀಕೆರೆಯ ಬಳಿ ಎಂ.ಎಸ್.ರಾಮಯ್ಯ ಕಾಲೇಜ್ ಬಸ್ ಸ್ಟಾಪ್ ನ ಸಮೀಪ ಮಟನ್ ಹಾಗೂ ಚಿಕನ್ ದೊನ್ನೆ ಬಿರಿಯಾನಿ ಹಾಗೂ ವಿಶೇಷವಾದ ಕ್ಷತ್ರಿಯಾ ಖಾದ್ಯಕ್ಕೆ ಹೆಸರುವಾಸಿಯಾಗಿರುವ "ದೊನ್ನೆ ಬಿರಿಯಾನಿ ಅಂಗಡಿ ಮನೆ"ಯ ಮೂರನೇ ಶಾಖೆಯನ್ನು ಬಿಜೆಪಿ ಬೆಂಗಳೂರು ಉತ್ತರ ಮಂಡಳದ ಉಪಾಧ್ಯಕ್ಷ ಡಾ.ಆರ್.ವಾಸುದೇವ್, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಜಯಪ್ರಕಾಶ್ ಎಂ.ಸಿ. ಹಾಗೂ ಎನ್.ಜೈಪಾಲ್ ರವರುಗಳು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಲೀಕರಾದ ಆರ್. ಉದಯಕುಮಾರ್ ರವರು 2013 ರಲ್ಲಿ ಸದಾಶಿವ ನಗರದಲ್ಲಿ ಪ್ರಾರಂಭಗೊಂಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರವಲ್ಲದೆ ಬೆಂಗಳೂರಿನ ಸುತ್ತಮುತ್ತಲಿನಲ್ಲಿ, ಇಲ್ಲಿ ತಯಾರಿಸಲಾಗುವ ವಿಶಿಷ್ಟವಾದ ಸ್ವಾದಭರಿತ ದೊನ್ನೆ ಬಿರಿಯಾನಿಗೆ ಜನರಿಂದ ಬಹಳ ಮೆಚ್ಚುಗೆ ಹಾಗೂ ಬೇಡಿಕೆ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಜನರ ಬೇಡಿಕೆಯ ಮೇರೆಗೆ ಟಿ.ದಾಸರಹಳ್ಳಿಯ 8 ನೇ ಮೈಲಿ ಬಳಿ ಎರಡನೇ ಶಾಖೆಯೂ ಕಾರ್ಯ ನಿರ್ವಹಿಸುತ್ತಿದ್ದು, ಆ ಭಾಗದಲ್ಲೂ ಜನಪ್ರಿಯತೆ ಗಳಿಸಿದೆ. ಇದೀಗ ಮತ್ತೀಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರ ಬೇಡಿಕೆಯ ಮೇರೆಗೆ ಈ ಶಾಖೆಯನ್ನು ಪ್ರಾರಂಭ ಮಾಡಲಾಗಿದ್ದು, ಸದ್ಯದಲ್ಲೇ ಮಲ್ಲೇಶ್ವರಂ 8 ನೇ ಕ್ರಾಸ್ ಬಳಿಯೂ ಮತ್ತೊಂದು ನೂತನ ಶಾಖೆ ಪ್ರಾರಂಭಕ್ಕೆ ತಯಾರಿ ನಡೆಯುತ್ತಿದ್ದು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಶುಚಿ ರುಚಿ ಹಾಗೂ ಗುಣಮಟ್ಟದ ಸೇವೆಯನ್ನು ನೀಡುವ ಈ ಅಂಗಡಿ ಮನೆ ಯಶಸ್ವಿಯಾಗಲಿ, ಅಪಾರ ಸಂಖ್ಯೆಯಲ್ಲಿ ಇರುವ ಮಾಂಸಾಹಾರ ಪ್ರಿಯರಿಗೆ ಈ ಶಾಖೆಗಳು ಅವರ ಮನಮೆಚ್ಚಿನ ರುಚಿಕಟ್ಟಾದ ಖಾದ್ಯಗಳನ್ನು ಉಣಬಡಿಸಿ ಇನ್ನೂ ಹೆಚ್ಚು ಜನಪ್ರಿಯತೆ ಗಳಿಸಲಿ ಎಂದು ನಾವು ಹಾರೈಸುತ್ತೇವೆ.
-VARTHAJALA, MALLESWARAM, 9448119247
0 Comments