*ಸುಬ್ರಹ್ಮಣ್ಯನಗರ ವಾರ್ಡ್‌ನಲ್ಲಿ "ಜನ ಸೇವಕ" ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ*
ಬೆಂಗಳೂರು : ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್ ನಂ.66, ಸುಬ್ರಮಣ್ಯ ನಗರದ ಸಂಗೊಳ್ಳಿ ರಾಯಣ್ಣ ಉದ್ಯಾನವನದ ಆವರಣದಲ್ಲಿ ಸ್ಥಳೀಯ ಶಾಸಕರು ಹಾಗೂ ಉನ್ನತ ಶಿಕ್ಷಣ, ಐಟಿ-ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವಥನಾರಾಯಣ ರವರು "ಜನ ಸೇವಕ" ಯೋಜನೆಯಡಿ ನಾಗರೀಕರ ಮನೆ ಬಾಗಿಲಿಗೆ 9 ಇಲಾಖೆಗಳ 79 ಸೇವೆಗಳನ್ನು ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರುಗಳಾದ ಯೋಗೇಶ್, ಡಾ.ಜಿ.ಎಸ್.ಚೌಧರಿ, ಎನ್.ನಾಗರಾಜು, ರವಿ ಕೆ.ಎಂ.ಎಫ್., ಪ್ರಕಾಶ್, ಸರಸ್ವತಿ ಬಿ.ಕೆ. ಮುಂತಾದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Comments