Ticker

6/recent/ticker-posts

Ad Code

Responsive Advertisement

ಮದುವೆ ಸಮಾರಂಭಗಳಲ್ಲಿ 500 ಜನಕ್ಕೆ ಮಾತ್ರ ಅವಕಾಶ

ಡಿಸೆಂಬರ್ 03. ಬೆಂಗಳೂರು: ಸಿ ಎಮ್ ಜೊತೆ ಸಭೆ ಬಳಿಕ ಸಚಿವ ಅಶೋಕ್ ಮಾಧ್ಯಮದವರೊಂದಿಗೆ ನೀಡಿದ ಮಾಹಿತಿ, ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ. ಅದೇ ರೀತಿಯಾಗಿ ಶಾಲಾ ಮಕ್ಕಳ ಪೋಷಕರಿಗೆ 2 ಡೋಸ್ ಕಡ್ಡಾಯ ಎಂದು ಸಚಿವ ಅಶೋಕ್ ಮಾಧ್ಯಮದವರಿಗೆ ತಿಳಿಸಿದರು.

ಶಾಲೆಗಳಲ್ಲಿ ಯಾವುದೇ ರೀತಿಯ ಸಭೆ ಸಮಾರಂಭ ನಡೆಸುವಂತಿಲ್ಲ ಎಂದು ತಿಳಿಸಿದರು. ಮದುವೆ ಸಮಾರಂಭಗಳಲ್ಲಿ 500 ಜನಕ್ಕೆ ಮಾತ್ರ ಅವಕಾಶ. ವಿದೇಶಗಳಿಂದ ವಿಮಾನ ನಿಲ್ದಾಣಕ್ಕೆ ಬರುವವರನ್ನು ತಕ್ಷಣ ಅವರವರ ಮನೆಗೆ ಕಳುಹಿಸುವುದಿಲ್ಲ, ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಮಾತ್ರ ಅವರವರ ಮನೆಗೆ ಕಳಿಸಿಕೊಡಲಾಗುವುದು ಎಂದು ಅಶೋಕ್ ಅವರು ಹೇಳಿದರು. ಆಶ್ಪತ್ರೆಗಳಲ್ಲಿ ಬೆಡ್ಗಳ ವ್ಯವಸ್ಥೆ ಮಾಡಲು ಕೂಡ ಈಗಾಗಲೆ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಮಿಕ್ರಾನ್ ಎದುರಿಸಲು ಎಲ್ಲಾ ರೀತಿಯ ಹೋರಾಟ ನಡೆಸಲು ಸಿದ್ಧ ಎಂದು ಸಚಿವರು ತಿಳಿಸಿದರು. ಅಂತರ್ ರಾಜ್ಯ ಪ್ರಯಾಣಿಕರಿಗೆ ಕೋವಿಡ್ ಟಸ್ಟ್ ಕಡ್ಡಾಯ ಎಂದರು.

Varthajala Daily, Bengaluru

Post a Comment

0 Comments

Ad Code

Responsive Advertisement