Ticker

6/recent/ticker-posts

Ad Code

Responsive Advertisement

ಗ್ರಾಮ ಪಂಚಾಯಿತಿಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ: ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್. ಆರ್

ಡಿಸೆಂಬರ್ 1, ಬೀದರ್: ಮುಂದಿನ ವರ್ಷ 2022ರ ಮರ್ಚ್ಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಕಾರಣಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾಧ್ಯಮದವರಿಗೆ ತಿಳಿಸಿದರು.

ಹುಲಸೂರು ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳ ಒಟ್ಟು 52 ಸದಸ್ಯ ಸ್ಥಾನಗಳ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳ 29 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿ.13ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಡಿ.17 ಕೊನೆಯ ದಿನವಾಗಿದೆ. 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿ.20 ಕೊನೆಯ ದಿನವಾಗಿದೆ. 27ರಂದು ಬೆಳಿಗ್ಗೆ 7 ಗಂಟೆಯಿ0ದ ಸಾಯಂಕಾಲ 5 ಗಂಟೆ ವರೆಗೆ ಮತದಾನ ನಡೆಯಲಿದೆ, 30ರಂದು ಮತಗಳ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಹುಲಸೂರಿನ 12, ಗರ್ಟಾದ 6 ಮತ್ತು ತೊಗಲೂರಿನ 4 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮತದಾರರು 18 ಕ್ಷೇತ್ರಗಳಲ್ಲಿ 52 ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.

ಬೀದರ್ ತಾಲ್ಲೂಕಿನ 5 ಗ್ರಾಪಂಗಳ 5 ಕ್ಷೇತ್ರಗಳ 5 ಸ್ಥಾನ, ಔರಾದ್ ತಾಲ್ಲೂಕಿನ 2 ಗ್ರಾಪಂಗಳ 2 ಕ್ಷೇತ್ರಗಳ 5 ಸ್ಥಾನ, ಕಮಲನಗರ ತಾಲ್ಲೂಕಿನ 1 ಗ್ರಾಮ ಪಂಚಾಯಿತಿಯ 1 ಕ್ಷೇತ್ರ, ಬಸವಕಲ್ಯಾಣ ತಾಲ್ಲೂಕಿನ 4 ಗ್ರಾಪಂಗಳ 4 ಕ್ಷೇತ್ರಗಳಿಗೆ, ಹುಮನಾಬಾದ್ ತಾಲ್ಲೂಕಿನ 2 ಗ್ರಾಮ ಪಂಚಾಯಿತಿಗಳ 3 ಕ್ಷೇತ್ರಗಳ 8 ಸ್ಥಾನ, ಚಿಟಗುಪ್ಪ ತಾಲ್ಲೂಕಿನ ಎರಡು ಗ್ರಾಪಂಗಳ 2 ಕ್ಷೇತ್ರ ಹಾಗೂ ಭಾಲ್ಕಿ ತಾಲ್ಲೂಕಿನ 3 ಗ್ರಾಮ ಪಂಚಾಯಿತಿಗಳ 4 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಿದರು.

'ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಈ ಚುನಾವಣೆಯಲ್ಲಿ ನೋಟಾಗೆ ಅವಕಾಶ ಇಲ್ಲ. ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುವುದು' ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕರ್ಯನರ್ವಹಣಾಧಿಕಾರಿ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಇದ್ದರು.

Varthajala Daily, Bengaluru


Post a Comment

0 Comments

Ad Code

Responsive Advertisement