Ticker

6/recent/ticker-posts

Ad Code

Responsive Advertisement

ಐಐಹೆಚ್ ಎಂ ಆರ್ ನ 17ನೇ ಸಂಸ್ಥಾಪನಾ ದಿನಾಚರಣೆ

ಭಾರತದ ಮಹಿಳೆಯರಿಗೆ ಇಂಟರ್ ನ್ಯಾಷನಲ್‌ ರೋಟರಿ ಪೌಂಡೇಶನ್ ನಿಂದ ಸ್ಯಾನಿಟರ್ ಪ್ಯಾಡ್ ಒದಗಿಸುವ ಬೃಹತ್ ಯೋಜನೆ  ಜಾರಿ-  ಅಮೇರಿಕದ ವೈದ್ಯ ಕೃಷ್ಣ.ಸಿ.ಮೂರ್ತಿ ಎಂ.ಡಿ.  ತಿಳಿಸಿದ್ದಾರೆ.


ಬೆಂಗಳೂರು : ಉತ್ತಮ ಸ್ವಚ್ಚ  ಪರಿಸರ ಹಾಗೂ ನೈರ್ಮಲಿಕರಣ ಉದ್ದೇಶದಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ  ಅಂತರಾಷ್ಟ್ರೀಯ ರೋಟರಿ ಪೌಂಡೇಶನ್ ನಿಂದ  ಸ್ಯಾನಿಟರ್ ಪ್ಯಾಡ್ ಒದಗಿಸುವ ಬೃಹತ್ ಯೋಜನೆಯನ್ನು ಹೊಂದಲಾಗಿದೆ ಎಂದು ಎಂದು ಅಮೆರಿಕದ  ರೋಟರಿ ಕ್ಲಬ್ ಆಪ್ ಪೋರ್ಟ್ ಕೊಲಿಯನ್ಸ್ ನ ರೋಟಿರಿಯನ್, ಅಮೇರಿಕದ ವೈದ್ಯ ಕೃಷ್ಣ.ಸಿ.ಮೂರ್ತಿ ಎಂ.ಡಿ.  ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ  ಇನ್ಸ್ಟಿಟ್ಯೂಟ್ ಆಪ್  ಹೆಲ್ತ್ ಮ್ಯಾನೇಜ್‌ಮೆಂಟ್  ರಿಸರ್ಚ್ ಸಂಸ್ಥೆಯ 17ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,   ಗ್ರಾಮೀಣ ಪ್ರದೇಶದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಸ್ಯಾನಿಟರ್ ಪ್ಯಾಡ್ ತಯಾರಿಸುವ ಯೋಜನೆಯನ್ನು ಜಾರಿ ತರಲಾಗುತ್ತದೆ. ಪ್ಯಾಡ್ ತಯಾರಿಕೆಗೆ ಹೆಚ್ಚಿನ ಒತ್ತು ನೀಡವುದು, ಮಹಿಳೆಯರನ್ನು ಅರ್ಥಿಕವಾಗಿ ಸಬಲಗೊಳಿಸುವುದು ನಮ್ಮ ಉದ್ದೇಶವಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಧಾರಾವಾಡ, ಮಂಡ್ಯದಲ್ಲಿ ಈಗಾಗಲೇ ಜಾರಿ ತರಲಾಗಿದೆ. ಅಂತರಾಷ್ಟ್ರೀಯ ಮಟ್ಟದ ರೋಟರಿ ಕ್ಲಬ್ ಆಪ್ ಕೋಲಿನ್ಸ್, ಬರ್ನಾರ್ಡೋ, ಸೇರಿದಂತೆ ವಿವಿಧ ಅಂತರಾಷ್ಟ್ರೀಯ ರೋಟರಿ ಸಂಸ್ಥೆಗಳು 40, ಸಾವಿರ 12 ರೂಪಾಯಿ ಡಾಲರ್ ಹೂಡಿಕೆ ಮಾಡಲಾಗಿದ್ದು. ಒಟ್ಟು 2 ಕೋಟಿ 92 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸ್ಯಾನಿಟಿವೇರ್ ಹೆಲ್ತ್ ಕೇರ್ ಸಲೂಷನ್ಸ್ ನ ಕೋ ಸಂಸ್ಥಾಪಕ ಮಿಥುನ್ ವಖರಿಯಾ ಮಾತನಾಡಿ,  ಜಾಗತಿಕವಾಗಿ ಇನ್ಸ್ಟಿಟ್ಯೂಟ್ ಆಪ್ ಹಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್  ಸಂಸ್ಥೆ ಉತ್ತಮ ಹೆಸರು ಮಾಡಿದ್ದು , ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಸಂಸ್ಥೆಯ ಟ್ರಸ್ಟಿ ಡಾ.ಎಸ್.ಡಿ ಗುಪ್ತಾ, ಸಂಸ್ಥೆಯ ನಿರ್ದೇಶಕಿ ಡಾ.ಉಷಾ ಮಂಜುನಾಥ್ ಸೇರಿದಂತೆ ಅನೇಕರು ಹಾಜರಿದ್ದರು

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕಿ ಪ್ರೋ ಡಾ.ಉಷಾ ಮಂಜುನಾಥ್, ಇನ್ಸ್ಟಿಟ್ಯೂಟ್ ಆಪ್ ಹೆಲ್ತ್ ಮ್ಯಾನೇಜ್‌ಮೆಂಟ್ ಸ್ಥಾಪನೆಯಾಗಿ 17 ವರ್ಷ ಕಳೆದಿದ್ದು, ಕೇವಲ ಆಸ್ಪತ್ರೆಗಳ ನಿರ್ವಹಣೆ ಅಲ್ಲದೇ ಸಾಮಾನ್ಯ ಕೋರ್ಸ್ ಗಳನ್ನು ಸ್ಥಾಪಿಸಿದ್ದು ,  ಅನೇಕ ರಾಷ್ಟ್ರೀಯ ಪ್ರಶಸ್ತಿ ಪಡೆದು ಕೊಂಡಿದೆ. ರಾಜ್ಯದ ತುಮಕೂರು ಜಿಲ್ಲೆ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶಗಳಲ್ಲಿ  ಉಚಿತ ಆರೋಗ್ಯ ಶಿಭಿರಗಳನ್ನು ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಬಡಜನರಿಗೆ ಅಗತ್ಯವಾದ ರೇಶನ್ ಗಳನ್ನು ವಿತರಿಸಲಾಗಿದೆ,ಐಐಎಂ ಅಲ್ಲದೆ 50 ಬಿ-ಶಾಲೆಗಳಲ್ಲಿ ಐಐಎಚ್‌ಎಂಆರ್‌ಗೆ 19ನೇ ರ್ಯಾಂಕ್ ನೀಡಲಾಗಿದೆ ಎಂದು  ತಿಳಿಸಿದರು.

ಸಂಸ್ಥೆಯ ಟ್ರಸ್ಟಿ ಡಾ.ಎಸ್.ಡಿ ಗುಪ್ತಾ, ಸಲಹೆಗಾರ, ನಿವೃತ್ತ ಐಎ ಎಸ್ ಅಧಿಕಾರಿ ಡಾ.ಸಿ.ಎಸ್.ಕೇದಾರ್ ಮತ್ತಿತರರು ಹಾಜರಿದ್ದರು.

Post a Comment

0 Comments

Ad Code

Responsive Advertisement