Ticker

6/recent/ticker-posts

Ad Code

Responsive Advertisement

ಸುಟ್ಟ ಗಾಯಗಳಿಗೆ ಪರಿಣಾಮಕಾರಿ ಚಿಕಿತ್ಸೆ : ಜಾವೆದ್ ಅಖ್ತರ್

ಸುಟ್ಟ ಗಾಯಗಳಿಂದ ಜೀವನ್ಮರಣಾವಸ್ಥೆಲ್ಲಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರಕ್ರಿಯಾ ಆಸ್ಪತ್ರೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹಿರಿಯ ಐಎಎಸ್ ಅಧಿಕಾರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ, ಪರಿಸರ ಮತ್ತು ಪರಿಸರ) ಜಾವೆದ್  ಅಖ್ತರ್ ಹೇಳಿದರು.   ಮಂಗಳವಾರ ಪ್ರಕ್ರಿಯಾ ಆಸ್ಪತ್ರೆಯಲ್ಲಿ ಸುಧಾರಿತ ಸುಟ್ಟಗಾಯಗಳ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೀವ್ರ ಸುಟ್ಟಗಾಯಗಳ ಆರೈಕೆ ಸೌಲಭ್ಯಗಳನ್ನು ದಕ್ಷಿಣ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಈ ಹೊಸ ಸೌಲಭ್ಯವು ಸುಟ್ಟ ಗಾಯಗಳಿಂದ ನರಳುತ್ತಿರುವವರಿಗೆ ಅತ್ಯುಪಯುಕ್ತವಾಗಿದ್ದು ಶೀಘ್ರ ಚಿಕಿತ್ಸೆಗೆ ನೆರವಾಗುತ್ತದೆ. ಉತ್ತರ ಬೆಂಗಳೂರಿನವರು ಮತ್ತು ಬೆಂಗಳೂರಿನ ಗಡಿಭಾಗದ ಜಿಲ್ಲೆಗಳ ರೋಗಿಗಳೂ ಸಹ ಪ್ರಕ್ರಿಯಾ ಆಸ್ಪತ್ರೆಯ ಈ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು. "ಪ್ರಕ್ರಿಯಾ ಆಸ್ಪತ್ರೆಯ ಸಿಇಒ ಡಾ ಶ್ರೀನಿವಾಸ್ ಚಿರುಕುರಿ ಮತ್ತು ತಂಡ ಈ ನಿಟ್ಟಿನಲ್ಲಿ ಜನಸ್ನೇಹಿ ಸೇವೆ ನೀಡಲಿ ಎಂದು ಕರೆ ನೀಡಿದರು.  

ಆಸ್ಪತ್ರೆ ಸಿಇಒ ಡಾ.ಶ್ರೀನಿವಾಸ್ ಚಿರುಕುರಿ ಮಾತನಾಡಿ, ಈ ಸುಟ್ಟಗಾಯಗಳ ಆರೈಕೆ ಕೇಂದ್ರವನ್ನು ಸಾರ್ವಜನಿಕರಿಗಾಗಿ ಸಮರ್ಪಿಸುತ್ತಿರುವುದಾಗಿ ತಿಳಿಸಿದರು. "ನಾವು ಸುಧಾರಿತ ಸೌಲಭ್ಯವನ್ನು ಹೊಂದಿದ್ದೇವೆ ಮತ್ತು ಎಲ್ಲಾ ರೀತಿಯ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಬಲ್ಲೆವು. ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್‌ಗಳೊಂದಿಗೆ ಅತ್ಯುತ್ತಮವಾದ ಐಸಿಯು ಸೌಲಭ್ಯವನ್ನು ಸಹ ಒದಗಿಸಿದ್ದೇವೆ.ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಆಸ್ಪತ್ರೆಯ ಹಾಸಿಗೆಯ ಸಾಮರ್ಥ್ಯವನ್ನು ಸಹ ಹೆಚ್ಚಿಸಲು ಚಿಂತನೆ ನಡೆಸಿದ್ದೇವೆ. ಈಗಾಗಲೇ ರೋಗಿಗಳಿಗೆ ನಾವು ಕೈಗೆಟುಕುವ ದರದಲ್ಲಿ ವಿವಿಧ ಪ್ಯಾಕೇಜ್‌ಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು. 
 
ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಮಾತನಾಡಿ, ತೀವ್ರ ತರದ ಸುಟ್ಟ ಗಾಯಗಳ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಸೌಲಭ್ಯವಿರುವ ಕೆಲವೇ ಕೆಲವು ಆಸ್ಪತ್ರೆಗಳನ್ನು ಆಶ್ರಯಿಸುವ ಅನಿವಾರ್ಯತೆ ಇತ್ತು. ಇದೀಗ  ಕೈಗಾರಿಕಾ ಪ್ರದೇಶದ ಸಮೀಪ ಪ್ರಕ್ರಿಯಾ ಆಸ್ಪತ್ರೆ ಇರುವ ಕಾರಣ  ಸುಟ್ಟ ಗಾಯಕ್ಕೊಳಗಾದ ವ್ಯಕ್ತಿಯ ಗೋಲ್ಡನ್ ಹವರ್ ಕಾಲಮಿತಿಯೊಳಗೆ ಚಿಕಿತ್ಸೆ ಕೊಡಿಸಲು ಅವಕಾಶ ದೊರೆತಂತಾಗಿದೆ.  ಉತ್ತರ ಬೆಂಗಳೂರಿನ ಲಕ್ಷಾಂತರ ರೋಗಿಗಳಿಗೆ ಈ ಸೌಲಭ್ಯದಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 
 
ಹಿರಿಯ ಪ್ಲಾಸ್ಟಿಕ್ ಸರ್ಜನ್ ಡಾ ದೀವಿಶ್ ಎನ್‌ಡಿ ಮಾತನಾಡಿ,  ಸುಟ್ಟ ಗಾಯಗಳ ರೋಗಿಗಳ ದೇಹದಲ್ಲಿ ದ್ರವಾಂಶ ಪುನರುತ್ಪತ್ತಿಯ ಆರಂಭದ ಕೆಲವು ಗಂಟೆಗಳ ಸಮಯ ಬಹಳ ಮುಖ್ಯ.  ಇದು ರೋಗಿಯು ಬದುಕಿ ಉಳಿಯುವ ಸಾಧ್ಯತೆಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ನಂತರ ರೋಗಿಯ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಶಿಷ್ಟಾಚಾರದ ಅಗತ್ಯವಿದೆ. ಬೆಂಗಳೂರಿನ ಕೆಲವೇ ಕೆಲವು ಖಾಸಗಿ ಆಸ್ಪತ್ರೆಗಳು ಮೀಸಲಾದ ಸುಟ್ಟಗಾಯಗಳ ಘಟಕವನ್ನು ಹೊಂದಿವೆ. ಪ್ರಕ್ರಿಯಾದಲ್ಲಿ, ನಾವು ಪ್ರತ್ಯೇಕ ರೋಗಿಗಳ ಕೊಠಡಿಗಳು ಮತ್ತು ಸುಸಜ್ಜಿತವಾದ ICU ನೊಂದಿಗೆ ಸುಟ್ಟಗಾಯಗಳ ಎಲ್ಲಾ ತೀವ್ರತೆಯನ್ನು ನಿರ್ವಹಿಸಲು ಪ್ರತ್ಯೇಕ ಬರ್ನ್ ಘಟಕವನ್ನು ಸ್ಥಾಪಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. 

Post a Comment

0 Comments

Ad Code

Responsive Advertisement