Ticker

6/recent/ticker-posts

Ad Code

Responsive Advertisement

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಇಂಡಿಯನ್‌ ಮೂವಮೇಂಟ್‌ ಪಾರ್ಟಿ


ಬೆಂಗಳೂರು,ನ.03- ದೀಪಾವಳಿ ಹಬ್ಬದ ಶುಭಾಶಯಗಳನ್ನು ರಾಜ್ಯದ ಜನತೆಗೆ ಪ್ರಾದೇಶಿಕ ಪಕ್ಷವಾಗಿರುವ ಶಾಂತಿ,  ಪ್ರಗತಿ, ಸಮೃದ್ಧಿ ಪ್ರತಿಯೊಬ್ಬ ಭಾರತೀಯನಿಗೂ ಎಂಬ ಧ್ಯೇಯವಾಕ್ಯ ಹೊಂದಿರುವ ಇಂಡಿಯನ್‌ ಮೂವಮೇಂಟ್‌ ಪಾರ್ಟಿಯ ರಾಷ್ಟಾಧ್ಯಕ್ಷ  ಡಾ.ಅಬ್ದುಲ್‌ ಸುಬಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಪರವಾಗಿ ಸುಲೇಮಾನ್‌ ಸಿದ್ದೀಕಿ, ಜಾವೇದಖಾನ್‌ ಜಿ.ಗೋರಿ, ಮುಶ್ತಾಕ್‌ ಜಮಖಂಡಿ, ಮದಾರ್‌ ಮಕಾನದಾರ್‌, ಅಶ್ಪಕ್ ಮಿಶ್ರಿಕೋಟಿ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ಪಕ್ಷದ ಹಿನ್ನೆಲೆ:
73 ವರ್ಷಗಳಿಂದ ಅಧಿಕಾರಶಾಹಿ ಆಡಳಿತಕ್ಕೆ, ದಬ್ಬಾಳಿಕೆಗೆ, ಅರಾಜಕತೆಗೆ, ಬಂಡವಾಳಶಾಹಿಗಳ ತುಳಿತಕ್ಕೆ ಒಳಗಾಗಿ ನಲುಗಿರುವ ಭಾರತ ದೇಶಕ್ಕೆ, ದೇಶದ ಜನತೆಗೆ ನೆಮ್ಮದಿ, ಶಾಂತಿ, ಸ್ವಾವಲಂಬನೆ ಹಾಗೂ ಆರ್ಥಿಕ ಪ್ರಗತಿ ತರುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದ್ದೇವೆ. ಈ ಪ್ರಯತ್ನ, ಹೋರಾಟ, ಕ್ರಾಂತಿ ಇನ್ನೂ ದೊಡ್ಡದಾಗಿ ಬೆಳೆದು, ಹೆಮ್ಮರವಾಗಿ ದೇಶದ ಎಲ್ಲ ಮೂಲೆಗಳನ್ನು ತಲುಪಬೇಕೆಂಬ ಹಂಬಲ ಇದೀಗ ಹಿರಿದಾಗಿದೆ.
ಎಲ್ಲ ಸಮುದಾಯದ ಜನರಿಗೆ, ಬಡವರು, ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕೆಳ ವರ್ಗದ ನಾಗರಿಕರಿಗೆ ಸಾಮಾಜಿಕ ನ್ಯಾಯ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣದ ಯೋಜನೆಗಳನ್ನು ರೂಪಿಸಿ, ದಕ್ಷತೆ ಹಾಗೂ ಪಾರದರ್ಶಕತೆಯೊಂದಿಗೆ ದೇಶ ಹಾಗೂ ರಾಜ್ಯ ಮಟ್ಟದಲ್ಲಿ ಕಾರ್ಯರೂಪಕ್ಕೆ ತರಲು ಒಂದು ಮುಕ್ತವಾದ ರಾಜಕೀಯ ಪಕ್ಷವನ್ನು ಎಲ್ಲರೊಟ್ಟಿಗೆ ಕಟ್ಟುವ ಪ್ರಾಮಾಣಿಕ ಪ್ರಯತ್ನ ಇದೀಗ ಶುರುವಾಗಿದೆ. ಇಂಡಿಯನ್‌ ಮೂವ್‌ ಮೆಂಟ್‌ ಪಾರ್ಟಿ ಸಫಲವಾಗಿ ದೊಡ್ಡ ಹೆಮ್ಮರವಾಗಿ ಬೆಳೆಯಬೇಕೆಂದರೆ ಎಲ್ಲರ ತನು,ಮನ,ಧನ, ಆಲೋಚನೆ, ಸಲಹೆ, ಸೂಚನೆ ಮತ್ತು ಪೂರ್ವಭಾವಿ ಭಾಗವಹಿಸುವಿಕೆ ಅತ್ಯವಶ್ಯವಾಗಿದೆ.
ಎಲ್ಲರೂ ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಇಂಡಿಯನ್‌ ಮೂವಮೆಂಟ್‌ ಪಾರ್ಟಿಯ ಹೋರಾಟದ ಜೊತೆ ಕೈ ಜೋಡಿಸಲು ಮುಕ್ತ ಆಹ್ವಾನವಿದೆ.
ನಮ್ಮ ಪಕ್ಷದೊಂದಿಗೆ ಕೈ ಜೋಡಿಸಿ ನವ ಭಾರತದ ನಿರ್ಮಾಣಕ್ಕೆ ಮುಂದಾಗೋಣ. ಇದು ಕೇವಲ ನಮ್ಮ ಪೀಳಿಗೆಗಾಗಿ ಅಲ್ಲ. ನಮ್ಮ ಮುಂಬರುವ ಪೀಳಿಗೆಗೆ, ಭಾರತದ ಭವ್ಯ ಬುನಾದಿಗೆ ನಾವಿಡಲಿರುವ ಮೊದಲ ಹೆಜ್ಜೆಯಾಗಲಿದೆ.

Post a Comment

0 Comments

Ad Code

Responsive Advertisement