Ticker

6/recent/ticker-posts

Ad Code

Responsive Advertisement

ಮಧುಗಿರಿ: "ವರುಣನ ಆರ್ಭಟ": "ಬೆಳೆಹಾನಿಯಲ್ಲಿ ತತ್ತರಿಸಿದ ರೈತ."

ಮಧುಗಿರಿ: ಮಳೆಗಾಲ ಇನ್ನೇನು ಮುಗಿಯುತ್ತ ಬಂದಿದೆ ಆದರೆ ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ವಾಯುಭಾರ ಕುಸಿತದಿಂದ ರಾಜ್ಯದ್ಯಂತ ಅಲ್ಲಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ ಇತ್ತೀಚೆಗೆ ನಮ್ಮ ಮಧುಗಿರಿ ತಾಲೂಕಿನಲ್ಲೂ ಸಹ ಕಳೆದ  ಕೆಲ ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯು ಕೆರೆ ಕುಂಟೆ ಕಟ್ಟೆಗಳನ್ನು ಭರ್ತಿಗೊಳಿಸುತ್ತಿದ್ದು ಕೆಲವೊಂದು ಕೆರೆಗಳು ತುಂಬಿ ಹರಿಯುತ್ತಿದೆ ಕೆರೆಗಳಿಗೆ ಬಾಗಿನ ಬಿಟ್ಟದ್ದು ಆಗಿದೆ ಆದರೆ ಈ ಮಳೆಯಿಂದಾಗಿ ತರಕಾರಿ ಹೂ ಹಣ್ಣುಗಳು ವ್ಯಾಪರದಲ್ಲಿ ಏರು ಪೇರಾಗುತ್ತಿದೆ. ವ್ಯಾಪಾರಿ ಕರು ಕಣ್ಣು ಬಾಯಿ ಬಿಡುವಂತಾಗಿದೆ

ನಮ್ಮ ಮಧುಗಿರಿ ಪಟ್ಟಣಕ್ಕೆ ನೀರು ಒದಗಿಸುವ ಕೆರೆಗಳ ಆದಂತಹ ಚೋಳೆನಹಳ್ಳಿ , ಸಿದ್ದಾಪುರ, ಹೊಸಕೆರೆ ಕೆರೆಗಳು ಕೋಡಿ ಹರಿದು ಮುನ್ನುಗ್ಗುತ್ತಿವೆ. ಇದು ಸಂತಸದ ವಿಷಯವೇ ಆದರೆ  ಪಟ್ಟಣದ ಚೋಳೆನಹಳ್ಳಿಯ ಕೆರೆಯ ಏರಿಯ ಮೇಲೆ ಸಣ್ಣ ಪ್ರಮಾಣದ ಗುಂಡಿ ನಿರ್ಮಾಣ ವಾಗಿದೆ ಹಾಗೂ ಸಿದ್ದಾಪುರದ ಕೆರೆ ಕೋಡಿ ಹರಿಯುವ ನೀರಿನ ಸಮೀಪ ಕಲ್ಲು ಬಂಡೆಯೊಂದು ಕಿತ್ತು ಹೋಗಿದ್ದು ಕೆರೆ ಕೋಡಿಯನ್ನು ನೋಡಲು ಹೋದ ಕೆಲವರು ಅಲ್ಲಿಯೇ ಇರುವ ಕಲ್ಲುಗುಂಡು ಗಳನ್ನು ತೆಗೆದುಕೊಂಡು ದುರಸ್ತಿ ನಡೆಸಿದ್ದಾರೆ ಹಾಗೂ ತುಂಬಿಹರಿಯುವ  ನೀರನ್ನು ನೋಡಲು ಬರುವ ಜನರು  ಸ್ಥಳೀಯವಾಗಿ ಸಂತಸ ಪಡುತ್ತಿರುವುದು ಹೆಮ್ಮೆಯ ಸಂಗತಿ, ಜೊತೆಜೊತೆಗೆ ಚೋಳೆನಹಳ್ಳಿಯ ಸಮೀಪದ ಕೋಡಿ ಬಳಿ ನೀರಿನಿಂದ ಹೊರ ಬಂದ ಮೀನುಗಳನ್ನು ಹಿಡಿದು ಕೊಳ್ಳುವುದರ ಜೊತೆಯಲ್ಲಿ ಕಲ್ಲಿನ ನಡುವೆ ಸಿಲುಕಿದ್ದ ಮೀನುಗಳನ್ನು ತೆಗೆದುಕೊಳ್ಳುವುದರೊಂದಿಗೆ ಕೋಡಿಯ ಕಲ್ಲುಗಳನ್ನು  ಸಡಿಲಗೊಳಿಸುತ್ತಿದ್ದ ದೃಶ್ಯ ವಳಿಗಳು ಕಂಡು ಬಂದವು ಸಾರ್ವಜನಿಕರು ಈ ರೀತಿ ಮಾಡದೆ ಇರುವುದು ಒಳಿತು .

ಕಳೆದ ನಾಲ್ಕೈದು ದಿನಗಳಿಂದ ಮಳೆ ಮತ್ತು ಚಳಿಗೆ ಸೂರ್ಯನ ಮುಖವನ್ನೇ ನೋಡದ ಜನರು ಇಂದು ಬೆಳಗಿನಿಂದ ಮಧ್ಯಾಹ್ನದವರೆಗೆ ಸೂರ್ಯನ ಬೆಳಕು ಕಂಡು  ನಿಟ್ಟುಸಿರು ಬಿಟ್ಟರೆ ಮತ್ತೆ ಈ ಮಳೆ ಇನ್ನೂ ಒಂದು ವಾರದ ಕಾಲ ಬಾಧಿಸಲಿದೆ ಎಂಬ ಮಾತುಗಳು ಹರಿದಾಡುತ್ತಿದೆ ಹಾಗೂ ಈ ಮಳೆಯು ಸರಿಯಾದ ಫಸಲಿನ ವೇಳೆಗೆ ಬರದೆ ಈಗ ಬರುತ್ತಿರುವುದರಿಂದ  ಜಮೀನುಗಳಲ್ಲಿ ಹಾಕಿದ್ದ ಬೆಳೆಯು ಕೊಳೆಯಲಾರಂಭಿಸುವಂತೆ ಮಾಡುತ್ತಿದೆ ಇದರಿಂದ ರೈತರು ಚಿಂತೆಗೀಡಾಗಿದ್ದಾರೆ 

ಜನಜೀವನಕ್ಕೆ ತರಕಾರಿಗಳು ಮತ್ತು ದಿನಸಿಗಳ ಅಗತ್ಯವಿದ್ದು ಪಟ್ಟಣದ ಮಾರುಕಟ್ಟೆಯಲ್ಲಿ ಹೂ ಹಣ್ಣು ತರಕಾರಿಗಳು ಸಕಾಲಕ್ಕೆ ತಲುಪಲು ಸಹ ಮಳೆ ಅಡ್ಡಿಯುಂಟು ಮಾಡುತ್ತಿದೆ ಮಳೆ ಕಾರಣದಿಂದಾಗಿ ಮಾರ್ಗ ಮಧ್ಯೆ ವಾಹನಗಳು ರಸ್ತೆಯಲ್ಲಿನ ಗುಂಡಿಗಳಲ್ಲಿ ಸಿಲುಕಿಕೊಳ್ಳುತ್ತಿವೆ ಮತ್ತೊಂದು ಅದೇ ಮಾರ್ಗಗಳಲ್ಲಿ ಓಡಾಡುವ ಜನರು ವಾಹನಗಳ ಸಂಚಾರದಿಂದಾಗಿ ಅದರಿಂದ ತಗಲುವ ಕೆಸರಿನಿಂದಾಗಿ ತಮ್ಮ ಬಟ್ಟೆಗಳ ಬಣ್ಣವನ್ನು ಬಲವಂತವಾಗಿ ಬದಲಿಸಿಕೊಂಡು ಹೋಗುವಂತಹ ವಾತವರಣ ಕಂಡು ಬರುತ್ತಿದೆ. ಇದು ಮಳೆರಾಯನ ಆರ್ಭಟಕ್ಕೆ ಸಾಕ್ಷಿಯಾಗಿದೆ

ನಮ್ಮ ಮಧುಗಿರಿ  ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯು ಮಂದಗತಿಯಿಂದ ಸಾಗಿದ್ದು ರಸ್ತೆ ಯಲ್ಲಿ ಯಥೇಚ್ಚವಾಗಿ ಗುಂಡಿಗಳು ನಿರ್ಮಾಣವಾಗಿ ರಸ್ತೆಯಲ್ಲೆಲ್ಲಾ ನೀರು ನಿಂತುಕೊಂಡರೆ ವಾಹನ ಸವಾರರು ಗುಂಡಿಯೊಳಗೆ ಸಿಲುಕಿ ಕೊಂಡು ಬೀಳುವ ಸ್ಥಿತಿ ಏರ್ಪಟ್ಟಿದೆ ಇದರಿಂದ ದ್ವಿಚಕ್ರವಾಹನ ಮತ್ತು ಬಹು ಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಆದ್ದರಿಂದ ಇದರ ನಿರ್ವಹಣೆಯ ಅಧಿಕಾರಿಗಳನ್ನು ಪ್ರಯಾಣಿಕರು ಮನೊಸೋ ಇಚ್ಚೆ ದೂಷಿಸುತ್ತಾ ಸಾಗಿದ್ದಾರೆ.

 ನೀರಿನೊಂದಿಗೆ ಕಿರಿಯರಿಂದ ಹಿರಿಯರವರೆಗೆ ಆಟವಾಡುತ್ತಿದ್ದು ಅವರ ಖುಷಿಯ ವಾತಾವರಣವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಜಾಲ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತೆ ಕೆಲವರು ಮಳೆಯನ್ನು ಲೆಕ್ಕಿಸದೆ ಇಂತಹ ಚುಮು ಚುಮು ಚಳಿಯಲ್ಲೂ ಕೆರೆಯ ನೀರಿನಲ್ಲಿ ಈಜಾಡುತ್ತಿದ್ದಾರೆ.ಒಟ್ಟಿನಲ್ಲಿ ಏನೇ ಆಗಲಿ ಈ ಮಳೆಯಿಂದಾಗಿ ರೈತ ಬೆಳೆದ ಬೆಳೆ ಕೈ ಸೇರಲಿಲ್ಲ, ಜನಪ್ರತಿನಿಧಿಗಳು ಅಧಿಕಾರಿಗಳು ಕೆರೆ ಕಟ್ಟೆಗಳನ್ನು ಸರಿಪಡಿಸಲಿಲ್ಲಾ.ಬೇಡವೆಂದರೂ ಮಳೆ ಮಾತ್ರ ಬಿಡುತ್ತಿಲ್ಲ ಎಂಬಾಂತಾಗಿದೆ ಈ ಮಳೆರಾಯನ ಆಟ. ಈ ಮಳೆಯ ಪರಿಣಾಮದಿಂದಾಗಿ ಸಾರ್ವಜನಿಕರು ಪರದಾಡುವುದು ರೊಂದಿಗೆ ರೈತ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾನೆ ಮಳೆರಾಯ ಕೃಪೆ ತೋರು.

ವರದಿ:ನಾಗೇಶ್ ಜೀವಾ ಮಧುಗಿರಿ 


Post a Comment

0 Comments

Ad Code

Responsive Advertisement