ರಾಜಧಾನಿಯಲ್ಲಿ ಮತ್ತೆ ವರುಣನ ಆರ್ಭಟ.
ಸಂಚಾರ ಅಸ್ತವ್ಯಸ್ತ
ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ ಮುಂದುವರೆದಿದ್ದು ಕೇವಲ 20 ನಿಮಿಷ ಬಿದ್ದ ಬಿರುಸಿನ ಮಳೆಗೆ ರಸ್ತೆ ಯ ಇಕ್ಕೆಲಗಳಲ್ಲಿ ನೀರು ಮ್ಮುನ್ನುಗ್ಗುತ್ತಿದ್ದು ಹೀಗೆ ಮುಂದುವರೆದಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ.
ಕಳೆದ 18 ಗಂಟೆಗಳಿಂದ ಮಳೆ ವಿರಾಮ ಘೋಷಿಸಿದ್ದ ಮಳೆರಾಯ ಇಂದು ಮತ್ತೆ ಮುನದುವರೆದಿದೆ. ಕೆಲಸ ಮುಗಿಸಿ ಎಲ್ಲರೂ ಬೇಗನೇ ಮನೆ ಸೇರುವ ಧಾವಂತ ದಲ್ಲಿದ್ದರೆ, ಇತ್ತ ಮಳೆರಾಯ ಎಡಬಿಡದೆ ಸುರಿಯುವ ಹಾಗೆ ಕಾಣುತ್ತಿದೆ. ಒಟ್ಟಾರೆ, ಸಂಜೆ ವೇಳೆಯ ಚಟುವಟಿಕೆ ಗಳಿಗೆ ವಿರಾಮ ಹೇಳಿದಂತೆಯೇ ಕಾಣುತ್ತಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು ವಿಧಾನಸೌಧ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತಿವೆ.
0 Comments