Ticker

6/recent/ticker-posts

Ad Code

Responsive Advertisement

ಸಿಸಿಬಿ ಯನ್ನು ಮುಚ್ಚುತ್ತೇನೆ ಎಂದ ಕೆಜಿಎಫ್ ಬಾಬು !!


ನವಂಬರ್ 26, ಬೆಂಗಳೂರು: ಚುನಾವಣೆಯಲ್ಲಿ ಗೆದ್ದರೆ ಭಾರತೀಯ ದಂಡ ಸಂಹಿತೆಯನ್ನೇ ರದ್ದು ಮಾಡುತ್ತೇನೆಂದು ಹೇಳಬಹುದು, ಡಿಕೆಶಿ ಅವರೇ ಎಷ್ಟು ಕೋಟಿಗೆ ಸೀಟ್ ಡೀಲ್ ಮಾಡಿಕೊಂಡಿದ್ದೀರಿ? ಅಸಭ್ಯ ವರ್ತನೆ ತೋರಿದ್ದಕ್ಕಾಗಿ ತಮ್ಮನ್ನು ಬಂಧಿಸಿದ ಸಿಸಿಬಿ ಕಚೇರಿಯನ್ನೇ ಮುಚ್ಚಿಸುತ್ತೇನೆ ಎಂದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಸಂದರ್ಶನವೊAದರಲ್ಲಿ ಹೇಳಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ.

ಡಿಕೆಶಿಯವರೇ ನಿಮ್ಮ ನೆಚ್ಚಿನ ಅಭ್ಯರ್ಥಿಯ ಅರ್ಹತೆ ನೋಡಿ. ಒಂದೊಮ್ಮೆ ಚುನಾವಣೆಯಲ್ಲಿ ಗೆದ್ದರೆ ವಿಧಾನ ಪರಿಷತ್ತಿನಲ್ಲಿ ಅಕ್ಷರಭ್ಯಾಸ ಮಾಡಿಸುತ್ತೀರಾ ಎಂದು ಬಿಜೆಪಿ ಪ್ರಶ್ನೆ, ಖರ್ಚು ಮಾಡುವ ಸಾಮರ್ಥ್ಯ ಇರುವವರಿಗೆ ಮಾತ್ರ ಟಿಕೆಟ್ ಎಂದು ನೀವು ಘೋಷಿಸಿದ ಮೇಲೆ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಎಲ್ಲಿ ಸಿಗುತ್ತದೆ ಎಂದು ಬಿಜೆಪಿ ಕೇಳಿದೆ.

ಕೆಜಿಎಫ್ ಬಾಬು ಅವರು ಅಫಿಡವಿಟ್ ನಲ್ಲಿ ಘೋಷಿಸಿದ್ದು 1700 ಕೋಟಿ, ಟಿವಿ ಮಾಧ್ಯಮಗಳಲ್ಲಿ ಘೋಷಣೆ ಮಾಡಿದ್ದು 4000 ಕೋಟಿ, ಖರ್ಚು ಮಾಡುವವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ಎಂದು ಡಿಕೆಶಿ ಘೋಷಿಸಿದ್ದಾರೆ. ಡಿಕೆಶಿಯವರೇ ಹಾಗಾದರೆ 224 ಕ್ಷೇತ್ರಗಳಿಗೂ ನಿಮ್ಮಂತೆ ಅಕ್ರಮದಿಂದ ಕುಬೇರರಾದವರನ್ನೇ ಅಭ್ಯರ್ಥಿಗಳನ್ನಾಗಿ ಮಾಡುತ್ತೀರಾ ಎಂದು ಬಿಜೆಪಿ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದೆ.

VARTHAJALA

Post a Comment

0 Comments

Ad Code

Responsive Advertisement