Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮೊದಲು ಕಾನೂನು ದಿನಾಚರಣೆ ನಡೆಯುತ್ತಿತ್ತು. 2015ರಲ್ಲಿ ಅದನ್ನು ಸಂವಿಧಾನ ಗೌರವ ದಿನ ಎಂದು ಕರೆದು ಅದನ್ನು ಬರೆದ ಡಾ. ಅಂಬೇಡ್ಕರ್ ಅವರಿಗೂ ಗೌರವ ಸಲ್ಲಿಸಲು ಪ್ರಧಾನ ಮೋದಿಜಿ ಮುಂದಾದರು. ಸಂಸತ್, ವಿಧಾನಸಭೆಗಳಲ್ಲೂ ಸಂವಿಧಾನದ ಕುರಿತು ಚರ್ಚೆಗೆ ಅವಕಾಶ ನೀಡಿದರು. ಅಂಬೇಡ್ಕರ್ ವಿರೋಧಿ ಯಾರೆಂದು ತೀರ್ಮಾನ ಆಗಬೇಕು. ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ಸೇ ಅಥವಾ ಅಂಬೇಡ್ಕರರ ಆಪ್ತ ಸಹಾಯಕರನ್ನು ಸೆಳೆದು 1952ಕ್ಕೆ ಮೊದಲು ಅಂಬೇಡ್ಕರರ ವಿರುದ್ಧ ಸ್ಪರ್ಧಿಸುವಂತೆ ಮಾಡಿ ಅಂಬೇಡ್ಕರರನ್ನು ಸೋಲಿಸಿದ್ದು ಯಾರು? ಇದೇ ಆಪ್ತ ಸಹಾಯಕರಿಗೆ ಬಳಿಕ ಪದ್ಮ ಭೂಷಣ ಪ್ರಶಸ್ತಿ ನೀಡಿದ್ದು ಯಾರು ಎಂದು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯ ಮೋದಿಜಿಯವರು ಸಂವಿಧಾನ ದಿನಾಚರಣೆಗೆ ಎಲ್ಲರನ್ನು ಆಹ್ವಾನಿಸಿದ್ದರು. ಕಾಂಗ್ರೆಸ್ ಸೇರಿ 16 ವಿರೋಧ ಪಕ್ಷಗಳು ಇದನ್ನು ಬಹಿಷ್ಕರಿಸಿದ್ದವು. ಆ ಬಳಿಕ ಬಿಜೆಪಿ ಸಂವಿಧಾನ ವಿರೋಧಿ ಎಂದು ಅವರು ಟೀಕಿಸಿದ್ದಾರೆ ಎಂದು ಆಕ್ಷೇಪಿಸಿದರು.

ಡಾ. ಅಂಬೇಡ್ಕರರಿಗೆ ಭಾರತರತ್ನ ಪ್ರಶಸ್ತಿ ಕೊಡಲು ವಿ.ಪಿ.ಸಿಂಗ್ ಅವರ ಸಹಕಾರ ಬೇಕಾಗಿತ್ತು. ವಾಜಪೇಯಿಯವರ ಬೆಂಬಲದೊಂದಿಗೆ ಅವರಿಗೆ ಪ್ರಶಸ್ತಿ ಕೊಡಲಾಗಿದೆ. ಕಾಂಗ್ರೆಸ್‍ನವರು ಅವರಿಗೆ ಕೊಟ್ಟ ಸಂಕಷ್ಟ ಎಷ್ಟು? ಅಂಬೇಡ್ಕರರ ಶಕ್ತಿ ಕಾಂಗ್ರೆಸ್‍ನವರಿಗೆ ಅರ್ಥವಾಗಿದೆಯೇ ಎಂದು ಕೇಳಿದರು.

ಸಂಸತ್ತಿನಲ್ಲಿ ಅನೇಕ ಕಾಂಗ್ರೆಸ್ ನಾಯಕರು 60 ದೇಶಗಳ ಸಂವಿಧಾನ ಅಧ್ಯಯನ ಮಾಡಿ ಸಂವಿಧಾನ ರಚಿಸಿದ್ದ ಅಂಬೇಡ್ಕರರನ್ನು ಅಪಮಾನಿಸಿದ್ದರು. ಅಂಬೇಡ್ಕರರಿಗೆ ಜೈಲುಭಾಗ್ಯದ ಬೆದರಿಕೆ ಹಾಕಿದ್ದರು. ಅವರು ಮಾಡಿದ್ದ ಅಪರಾಧವಾದರೂ ಏನು? ತಮ್ಮ ಅವಹೇಳಕ್ಕಾಗಿ ಡಾ. ಅಂಬೇಡ್ಕರರನ್ನು ಅಳುವಂತೆ ಮಾಡಿದ್ದು ಕಾಂಗ್ರೆಸ್ ಅಲ್ಲವೇ? ಕಾಂಗ್ರೆಸ್ ಸುಡುವ ಮನೆ. ಅಲ್ಲಿ ದಲಿತರು ಹೋಗದಿರಿ. ಒಂದೊಮ್ಮೆ ಹೋದರೆ ನಿಮ್ಮನ್ನು ನೀವೇ ಆತ್ಮಹತ್ಯಗೆ ಒಡ್ಡಿಕೊಂಡಂತೆ ಎಂದು ಅಂಬೇಡ್ಕರರೇ ತಿಳಿಸಿದ್ದರು ಎಂದು ನೆನಪಿಸಿದರು.

1975ರಲ್ಲಿ ತುರ್ತು ಪರಿಸ್ಥಿತಿಯನ್ನು ಕಾಂಗ್ರೆಸ್‍ನ ಪ್ರಧಾನಿ ಇಂದಿರಾಗಾಂಧಿ ಅವರೇ ಹೇರಿದ್ದರು. ಆಗ ಅದನ್ನು ತೀವ್ರವಾಗಿ ಆಕ್ಷೇಪಿಸಿದ್ದ ಸಿದ್ದರಾಮಯ್ಯ ಅವರ ನಾಲಿಗೆ ತಿರುಚಲ್ಪಟ್ಟಿದೆ. ಇವತ್ತು ಕಾಂಗ್ರೆಸ್ ನಡೆಯನ್ನು ನೀವು ಒಪ್ಪುತ್ತೀರಾ? ಅಥವಾ ಟೀಕಿಸುತ್ತೀರಾ ಎಂದು ಜನರಿಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‍ನ ಅನಿಲ್ ಲಾಡ್ ಅವರು “ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಸಂವಿಧಾನ ಮಾಡಿದವರು” ಎಂದಿದ್ದಾರೆ. ಸಂವಿಧಾನ ಕುರಿತು ಸುಳ್ಳು ಹೇಳಿದ ಕಾಂಗ್ರೆಸ್‍ನ ಅನಿಲ್ ಲಾಡ್ ಅವರನ್ನು ತಕ್ಷಣ ಬಂಧಿಸಬೇಕು ಮತ್ತು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.

ಕಾಂಗ್ರೆಸ್‍ನ ದಲಿತ ಮುಖಂಡರು ಮೇಲಿನ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕುರಿತು ಸಿದ್ದರಾಮಯ್ಯ ಹೇಳಿದ್ದರು. ಇದನ್ನು ಸಮರ್ಥಿಸಿ ಪಕ್ಷದಿಂದ ಹೊರಗೆ ಬರುತ್ತೀರಾ ಎಂದು ಕೇಳಿದರು. ಭಾರತ ದೇಶದ ಅಸ್ಪøಶ್ಯ ಸಮಾಜದಲ್ಲಿ ಹುಟ್ಟಿದ ಡಾ. ಅಂಬೇಡ್ಕರ್ ಒಬ್ಬ ಮಹಾನ್ ಮೇಧಾವಿ ಎಂದು ವಿದೇಶಗಳ ಏಜೆನ್ಸಿಗಳೇ ಸಮೀಕ್ಷೆಯಲ್ಲಿ ಹೇಳಿವೆ. ನೆಹರೂ ಅವರು ಪಾಂಡಿತ್ಯ ಇಲ್ಲದೆ ಪಂಡಿತರಾದರೆ ಎಂದೂ ಪ್ರಶ್ನೆಯನ್ನು ಮುಂದಿಟ್ಟರು.

ಸಿದ್ದರಾಮಯ್ಯ ಸಮಯಸಾಧಕ, ಸುಳ್ಳುಗಾರ, ದಲಿತ ವಿರೋಧಿ. ಸಾಂದರ್ಭಿಕವಾಗಿ ನಾಲಿಗೆ ತಿರುಚುವವರು ಅವರು. ಇದಕ್ಕೆ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕೆಂದು ಒತ್ತಾಯಿಸಿದರು. ಸಾಮಾಜಿಕ ಮಾಧ್ಯಮ ಬಂದ ಬಳಿಕ ಕಾಂಗ್ರೆಸ್‍ನ ಅಸಲಿತನ, ನಿಜ ಬಣ್ಣ ಹೊರಕ್ಕೆ ಬರುತ್ತಿದೆ ಎಂದರು.

ಬಿಜೆಪಿ ಸಂವಿಧಾನ, ದಲಿತ ಸಮುದಾಯವನ್ನು ಗೌರವಿಸುತ್ತದೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಆಟ ಇನ್ನು ಮುಂದೆ ನಡೆಯದು ಎಂದ ಅವರು, ಅಂಬೇಡ್ಕರ್ ಅವರ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು. ಉತ್ತರ ನೀಡದೆ ಇದ್ದರೆ ಇವೆಲ್ಲವನ್ನೂ ನೀವು ಒಪ್ಪಿಕೊಂಡಂತೆ ಎಂದರು.


Post a Comment

0 Comments

Ad Code

Responsive Advertisement