ಕಲಾವಿದನ ಚಿತ್ರಪಟ್ಟದಲ್ಲಿ ಚರಿತ್ರೆ ಅಡಕ - ನಾಗತಿಹಳ್ಳಿ ಚಂದ್ರಶೇಖರ್.
ಡಿ. 5 ರವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಎಕ್ಸ್ ಪ್ಲೋರಿಯಾ ಚಿತ್ರ ಪ್ರದರ್ಶನ.
ಬೆಂಗಳೂರು: ಯಾವುದೇ ಚಿತ್ರಕಲೆ ಕಲಾವಿದನಿಗೆ ಚರಿತ್ರೆ, ವರ್ತಮಾನ, ಭವಿಷ್ಯದಲ್ಲಿ ಮತ್ತು ಸಮಕಾಲೀನ ವಿದ್ಯಮಾನಗಳನ್ನು ಏಕಕಾಲದಲ್ಲಿ ಬೇರೆ ಬೇರೆ ನೆಲೆಯಲ್ಲಿ ಹೇಳುವ ಶಕ್ತಿ ಇದೆ ಎಂದು ಚಿತ್ರ ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿಂದು ಡಿಸೆಂಬರ್ 5 ರವರೆಗೆ ನಡೆಯಲಿರುವ ವಿವಿಧ ವೃತ್ತಿಯಲ್ಲಿರುವ ನುರಿತ ಹವ್ಯಾಸಿ ಕಲಾವಿದರ ಎಕ್ಸ್ ಎಕ್ಸ್ ಪ್ಲೋರಿಯಾ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಚಿತ್ರ ಕಲಾವಿದನನ್ನು ಪ್ರತಿ ಬ್ರಹ್ಮ ಎಂದು ಕರೆಯುತ್ತೆವೆ. ಇಂತಹ ಕಲೆಯ ಮೂಲಕ ಪ್ರಕೃತಿ, ಹೂವು, ಬೆಟ್ಟ, ಪರ್ವತಗಳನ್ನು ಶಾಶ್ವತವಾಗಿ ಇಡುತ್ತಾರೆ. ಒಬ್ಬ ಕಲಾವಿದನ ಚಿತ್ರಪಟ್ಟದ ಮೂಲಕ ಇಡೀ ಸಮಾಜ, ದೇಶ ಏನೆಂಬುದನ್ನು ಅರ್ಥಮಾಡಿಕೊಳ್ಳಬಹುದೆಂದು ಹೇಳಿದರು.
ಯಾವುದೇ ಕಲಾವಿದ ಬೇರೆ ಬೇರೆ ಹಿನ್ನಲೆಯಲ್ಲಿ ಬಂದರೆ ಆಯಾ ತಮ್ಮ ಕ್ಷೇತ್ರದ ಮಹತ್ವವನ್ನು ತಮ್ಮ ಕುಂಚ ಕಲೆಯ ಮೂಲಕ ಅಭಿವ್ಯಕ್ತ ಪಡಿಸುತ್ತಾರೆ. ಎಕ್ಸ್ ಪೆÇ್ಲೀರಿಯಾ ಚಿತ್ರ ಪ್ರದರ್ಶನದಲ್ಲಿ ವೈದ್ಯಕೀಯ ಕ್ಷೇತ್ರದ ಡಾ. ರುದ್ರಪ್ರಸಾದ್, ಸಾಪ್ಟವೇರ್ ಕ್ಷೇತ್ರದ ಶಾಲಿನಿ, ಉದ್ಯಮ ಕ್ಷೇತ್ರದ ಪ್ರಕಾಶ್ ನಾರಾಯಣ್ ತಮ್ಮದೇ ಚಿಂತನೆಗಳನ್ನು ತಮ್ಮ ಚಿತ್ರಕಲೆಯಲ್ಲಿ ಬಿಂಬಿಸಿದ್ದಾರೆ. ವೃತ್ತಿಯ ಜತೆಗೆ ತಮ್ಮ ಹವ್ಯಾಸವನ್ನು ಪ್ರಬಲಗೊಳಿಸಿದ್ದಾರೆ ಎಂದರು.
ಇಂದಿರಾ ಗಾಂದಿ ಇನ್ ಸ್ಟಿಟ್ಯೂಟ್ ಆಫ್ ಚೈಲ್ಡ್ ಆಸ್ಪತ್ರೆಯ ಮೂಳೆ ಚಿಕಿತ್ಸೆ ತಜ್ಞ ವೈದ್ಯ ಡಾ. ರುದ್ರಪ್ರಸಾದ್ ವೈದ್ಯಕೀಯ ಕ್ಷೇತ್ರದಿಂದ ಬಂದಿದ್ದರಿಂದ ಅಲ್ಲಿಯ ಅನುಭವಗಳನ್ನು ಯಥಾವತ್ತಾಗಿ ಚಿತ್ರಗಳ ಮೂಲಕ ಅದ್ಭುತವಾಗಿ ಬಿಂಬಿಸಿದ್ದಾರೆ ಹಾಗಾಗಿಯೇ ಕಲಾವಿದ ಬೇರೆ, ಬೇರೆ ಹಿನ್ನಲೆಯ ಕ್ಷೇತ್ರದಿಂದ ಬಂದರೆ ಅನುಕೂಲ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳ ವೃತ್ತಿಯಲ್ಲಿರುವ ಆರು ಮಂದಿ ಕಲಾವಿದರಾದ ವೈದ್ಯಕೀಯ ಕ್ಷೇತ್ರದ ಡಾ. ರುದ್ರ ಪ್ರಸಾದ್, ಕೆ. ಮಾನೋ, ಉದ್ಯಮಿ ಡಾ.ಪ್ರಕಾಶ್ ನಾರಾಯಣ್, ಡಾ. ಶಾಂತಾಲ, ಶಾಲಿನಿ, ಎ. ಗೋಪಿ ಅವರ ಚಿತ್ರಕಲೆಗಳು ಪ್ರೇಕ್ಷಕರ ಮನಸೂರೆಗೊಳುತ್ತಿವೆ.
ಇಂದಿರಾ ಗಾಂದಿ ಇನ್ ಸ್ಟಿಟ್ಯೂಟ್ ಆಫ್ ಚೈಲ್ಡ್ ಆಸ್ಪತ್ರೆಯ ಮೂಳೆ ಚಿಕಿತ್ಸೆ ತಜ್ಞ ವೈದ್ಯ ಡಾ. ರುದ್ರ ಪ್ರಸಾದ್ ಅವರು ಮಾತನಾಡಿ ಎಕ್ಸ್ ಪ್ಲೋರಿಯಾ ಪ್ರದರ್ಶನದಲ್ಲಿ ತಮ್ಮ ಚಿತ್ರಪಟ್ಟಗಳ ಮಾರಾಟದಿಂದ ಬಂದ ಹಣವನ್ನು ಸರೂವ್ ಟುಗೆದರ್ ಫೌಂಡೇಷನ್ ಸಂಸ್ಥೆಯ ಬಡ, ದುರ್ಬಲ, ಅಸಹಾಯಕರ ಸೇವೆಗಳಿಗೆ ನೀಡಲಾಗುವುದು ಎಂದರು.
0 Comments