ಬೆಂಗಳೂರು : ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಂದೇಶ್ ಯುವ ವೇದಿಕೆಯ 29 ನೇ ವಾರ್ಷಿಕೋತ್ಸವದ ಅಂಗವಾಗಿ ಸಮಾಜ ಸೇವಕರಿಗೆ, ಸಾಹಿತಿಗಳಿಗೆ, ದಕ್ಷ ಅಧಿಕಾರಿಗಳಿಗೆ ಹಾಗೂ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಕೊಳದ ಮಠದ ಮಹಾಸಂಸ್ಥಾನದ ಪೂಜ್ಯರಾದ ಡಾ. ಶ್ರೀ ಶ್ರೀ ಶ್ರೀ ಶಾಂತವೀರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಯೋಗ ಗುರುಗಳಾದ ಯೋಗಶ್ರೀ ಆರ್. ನಾಗರಾಜ್, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಶಂಕರ ಭಟ್, ಗಾಯಕ ಡಾ. ಶಶಿಧರ್ ಕೋಟೆ, ಪ್ರಕೃತಿ ಚಿಕಿತ್ಸಾ ಪ್ರಚಾರಕ ಡಾ. ಕೆ.ಎಸ್. ಜಗದೀಶ್, ಸಾಹಿತಿ ವೈ.ಬಿ.ಎಚ್.ಜಯದೇವ್, ಎಸ್.ಎಸ್.ಕೆ. ಸಂಘದ ಅಧ್ಯಕ್ಷ ರಾಜೇಂದ್ರ ವಿ.ಜಿ., ನಿರ್ದೇಶಕರುಗಳಾದ ಎಂ.ಎನ್.ರಾಮ್, ಡಿ.ಎನ್.ಶ್ರೀನಿವಾಸ್, ಕರೋನ ವಾರಿಯರ್ಸ್ ಗಳಾದ ಡಾ.ನಂದಾಕುಮಾರ, ವೈದ್ಯಾಧಿಕಾರಿ ಸುರೇಖಾ, ಶುಶ್ರೂಷಕಿ ಶಿವಮ್ಮ, ಶುಶ್ರೂಷಕಿ ಗೀತಾ, ಆಶಾ ಕಾರ್ಯಕರ್ತೆ ಕವಿತಾ ಮುಂತಾದವರ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ವೇದಿಕೆ ಅಧ್ಯಕ್ಷ ಕೆ.ಸೋಮಶೇಖರ, ಕಾರ್ಯದರ್ಶಿಗಳಾದ ಎಲ್. ವೇಣುಗೋಪಾಲ್ ಹಾಗೂ ಎಸ್. ಪ್ರೇಮ್ ಕುಮಾರ್ ರವರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕಗಳು ಜೊತೆಗೆ ಹಿರಿಯ ನಾಗರೀಕರಿಗೆ ವಸ್ತಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Comments