ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಪುರವರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಸ್ಮಶಾನಕ್ಕೆ ಜಾಗವಿಲ್ಲದಿರುವ ಬಗ್ಗೆ ವಿಶ್ವ ಮಾನವ ಹಕ್ಕುಗಳ ಸೇವಾಕೇಂದ್ರದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಗೌಡ ರವರಿಗೆ ಪುರವರ ಗ್ರಾಮಸ್ಥರು ಮನವಿ ಮಾಡಲಾಗಿ ಶ್ರೀ ಸಿದ್ದಲಿಂಗೇಗೌಡ ಮನವಿ ಮಾಡಲಾಗಿತ್ತು,
ಈ ಮನವಿಗೆ ಸ್ಪಂದಿಸಿದ ಮಧುಗಿರಿ ತಹಶೀಲ್ದಾರ್ ವೈ.ರವಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ ಭೇಟಿ ನೀಡಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಶೀಘ್ರವಾಗಿ ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆ ಗೊಳಿಸುವಂತೆ ಗ್ರಾಮ ಪಂಚಾಯಿತಿ ಪಿ.ಡಿ.ಓ. ಪುಂಡಲಿಕ ರವರಿಗೆ ಆದೇಶಿಸಲಾಗಿತ್ತು.
ಸದಾ ಎಷ್ಟೋ ಗ್ರಾಮಗಳ ಗ್ರಾಮಸ್ಥರ ಮನವಿಗಳಿಗೆ ಸ್ಪಂದಿಸುತ್ತಿರುವ ಮತ್ತು ಮಾನವ ಹಕ್ಕುಗಳ ಸಂರಕ್ಷಣೆ ಮಾಡುತ್ತಿರುವ ಮಾನ್ಯ ಶ್ರೀ ಸಿದ್ದಲಿಂಗೇಗೌಡ ರವರಿಗೆ ಪುರವರ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಕೂಡ ಸಲ್ಲಿಸಲಾಗಿತ್ತು ಇಂದು ಈ ಸ್ಮಶಾನ ಜಾಗಕ್ಕೆ ಒಂದು ಹೊಸ ರೂಪ ಬಂದಂತಾಗಿದೆ. ಪುರವರ ಹೋಬಳಿಯ ಪುರವರ ಗ್ರಾಮಕ್ಕೆ ಸ್ಮಶಾನ ಮಂಜೂರಾಗಿದ್ದ ಜಾಗವನ್ನು ಇಂದು ಸ್ವಚ್ಛಗೊಳಿಸಲಾಗಿತ್ತು
ಈ ಹೋರಾಟಕ್ಕೆ ಕಾರಣರಾದ ವಿಶ್ವ ಮಾನವ ಹಕ್ಕುಗಳ ಸೇವಾಕೇಂದ್ರದ ಪ್ರಧಾನ ಕಾರ್ಯದರ್ಶಿ ಎಂ.ಎಸ್ ದರ್ಶನ್ ಭೇಟಿ ನೀಡಿದರು. ಜೊತೆಗೆ ಪಿಡಿಓ ಪುಂಡಲಿಕ, ಗ್ರಾ.ಪಂ. ಅಧ್ಯಕ್ಷೆ ಅಂಬಿಕ ರಾಮಾಂಜಿನಿ, ಸದಸ್ಯರಾದ ನರಸಿಂಹಮೂರ್ತಿ, ರವೀಂದ್ರಕುಮಾರ್ ಸಂಸ್ಥೆಯ ತಾಲೂಕು ಸದಸ್ಯರಾದ ನವೀನ್, ರಾಮಚಂದ್ರಪ್ಪ, ಪ್ರಸನ್ನಕುಮಾರ್, ಹಾಗೂ ಇತರರಿದ್ದರು.
0 Comments