Ticker

6/recent/ticker-posts

Ad Code

Responsive Advertisement

ನ. 26: ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬಂದ್

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಇದೇ ತಿಂಗಳ 26ನೇ ತಾರೀಖಿನಂದು ರಾಷ್ಟ್ರೀಯ ಹೆದ್ದಾರಿ ಬಂದ್ ಅನ್ನು ಮಾಡಲಾಗುವುದು ರೈತಪರ ಸಂಘಟನೆಗಳು ತಿಳಿಸಿದವು.   

 ಮಧುಗಿರಿ : ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ರೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ ಶಂಕರಪ್ಪ ಮಾತನಾಡಿ: ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಿಸಿ ರೈತರಿಗೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಣೆ ಮಾಡಬೇಕು ಎಂದರು.      ‌



 ತಾವು ಬೆಳೆದ ಬೆಳೆಗಳಿಗೆ ಒಂದು ಉತ್ತಮ ರೀತಿಯ ನಿಗದಿತ ಬೆಲೆ ನೀಡಬೇಕೆಂದು ಹೇಳಿದರು.    

ಹೆಚ್ಚಿನ ಬೆಲೆಯನ್ನು ನಿರೀಕ್ಷಿಸುವುದಿಲ್ಲ. ಬೆಳೆಗೆ ಒಂದು ಒಳ್ಳೆಯ ಬೆಲೆ ನಿಗದಿ ಮಾಡಿ ಎಂದು ಸರ್ಕಾರಕ್ಕೆ ಈ ಮೂಲಕ  ಹೇಳಿದರು.

ಹಾಗೆಯೇ ಎಪಿಎಂಸಿ ಕಾಯ್ದೆಗಳನ್ನು ಬದಲಾಯಿಸಬೇಕು ಮತ್ತು ವಿದ್ಯುತ್ ದರದ ಮಂಡನೆ ಕುರಿತು ಹೇಳಿದರು. 

ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಪ್ರಧಾನಿಗಳು ರೈತರನ್ನು ಸಭೆ ಕರೆದು ಕುಂದುಕೊರತೆಗಳನ್ನು ಹಾಗೂ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿದರು .

ಈ ಒಂದು ರಾಷ್ಟ್ರೀಯ ಹೆದ್ದಾರಿ ಬಂದ್ ನಲ್ಲಿ ಇನ್ನಿತರ ಸಂಘಟನೆಗಳಾದ ಖಾಸಗಿ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಸಿಪಿಐ, ಸಿಪಿಎಂ, ಮುಂತಾದ ಸಂಘಟನೆಗಳು ಸಹ ರೈತರ ಪರವಾಗಿ ಕೈಜೋಡಿಸಿ ಬಂದು ಯಸಸ್ವಿ ಯಾಗಲು ಸಹಕರಿಸಬೇಕೆಂದು ಮಾತನಾಡಿದರು.          

 ಇದರೊಂದಿಗೆ ರೈತ ಹೋರಾಟದಲ್ಲಿ ಮೃತರಾದ ಸುಮಾರು 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ ಒಂದೊಂದು ಕುಟುಂಬಕ್ಕೂ 50 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು.  

ಹಾಗೆಯೇ ರೈತನ ಹಲವು ಬಗೆಯ ಕುಂದುಕೊರತೆಗಳು ಮತ್ತು ವ್ಯವಸಾಯಕ್ಕೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳು ದೊರೆಯಬೇಕಾಗಿದೆ, 

ಕುಟುಂಬಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯವಸಾಯಕ್ಕೆ ಸಂಬಂಧಿಸಿದ ಸಹಾಯವಾಗುವಂತೆ ಬೆಳೆದ ಬೆಳೆಗೆ ನಿಗದಿತ ಬೆಲೆ ಮತ್ತು ಸಮಾಜದಲ್ಲಿ ಒಂದು ಉತ್ತಮ ಸ್ಥಿತಿ ಸೃಷ್ಟಿಯಾಗುವ ವರೆಗೂ ಸರ್ಕಾರ ಮಧ್ಯಪ್ರವೇಶಿಸಿ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡರು. 

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡ ಮಾಳಯ್ಯ, ತಾಲೂಕು ಅಧ್ಯಕ್ಷರಾದ ಎಂ.ಡಿ ಚಿಕ್ಕಣ್ಣ, ತಾಲೂಕಿನ ಉಪಾಧ್ಯಕ್ಷರಾದ ಹನುಮಂತರಾಯಪ್ಪ, ತಾಲೂಕಿನ ವರಿಷ್ಠರು ರಾಮೇಗೌಡರು, ಹಾಗೂ ಹೋಬಳಿ ಅಧ್ಯಕ್ಷರು ಹಾಗೂ ಮುಖಂಡರುಗಳಾದ ನರಸಿಂಹಮೂರ್ತಿ, ಹೆಚ್, ತಿಮ್ಮಯ್ಯ, ವನರಾಜ, ಲಕ್ಷ್ಮಿಪತಿ, ರಮೇಶ್,   ಶೂದ್ರ ಸೇನೆಯ ದಿಲೀಪ್, ಕಟ್ಟಡ ಕಾರ್ಮಿಕರ ತಾಲೂಕು ಸಂಚಾಲಕರಾದ ದೊಡ್ಡೇರಿ ಮಹಾಲಿಂಗಯ್ಯ, ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕರಾದ ಮಂಜುನಾಥ, ಮತ್ತಿತರರಿದ್ದರು.

Post a Comment

0 Comments

Ad Code

Responsive Advertisement