ರಾಜ್ಯದ ೩೦ ಜಿಲ್ಲೆಗಳು ಹಾಗೂ ಗಡಿ ರಾಜ್ಯಗಳು, ಹೊರರಾಜ್ಯಗಳು ಮತ್ತು ಹೊರದೇಶದ ಮತದಾರರು ಮತ ಚಲಾಯಿಸಿ, ಕೇಂದ್ರ ಪರಿಷತ್ತಿನ ಅಧ್ಯಕ್ಷರು, ೩೦ ಜಿಲ್ಲಾಧ್ಯಕ್ಷರು ಹಾಗೂ ೫ ಗಡಿ ರಾಜ್ಯಗಳ ಅಧ್ಯಕ್ಷರು - ಹೀಗೆ ಒಟ್ಟು ೩೬ ಸ್ಥಾನಗಳಿಗೆ ಅಧ್ಯಕ್ಷರುಗಳನ್ನು ಆಯ್ಕೆ ಮಾಡುತ್ತಾರೆ. ಈ ಸಂಬAಧ ಜಿಲ್ಲಾ ಕೇಂದ್ರ ತಹಸೀಲ್ದಾರರನ್ನು ಜಿಲ್ಲಾ ಕ.ಸಾ.ಪ. ಚುನಾವಣಾಧಿಕಾರಿಯಾಗಿ, ತಾಲ್ಲೂಕು ಕೇಂದ್ರದ ತಹಸೀಲ್ದಾರರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಉಪ ವಿಭಾಗಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಚುನಾವಣಾ ಮೇಲ್ವಿಚಾರಕರಾಗಿಯೂ ಜಿಲ್ಲಾಧಿಕಾರಿಗಳು ಚುನಾವಣೆ ಉಸ್ತುವಾರಿಗಳಾಗಿಯೂ ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ೨೦೨೧ರ ಅಧಿಸೂಚನೆಯನ್ನು ದಿನಾಂಕ ೮-೨-೨೦೨೧ ರಂದು ಹೊರಡಿಸಿ, ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿತ್ತು. ಕೋವಿಡ್-೧೯ರ ಹಿನ್ನೆಲೆಯಲ್ಲಿ ದಿನಾಂಕ ೨೬-೪-೨೦೨೧ ರ ಸರ್ಕಾರದ ಆದೇಶದನ್ವಯ ಈ ಚುನಾವಣೆಯನ್ನು ಮುಂದೂಡಲಾಗಿತ್ತು. ದಿನಾಂಕ ೧೨-೧೦-೨೦೨೧ರ ಸರ್ಕಾರಿ ಆದೇಶದಲ್ಲಿ ಸದರಿ ಚುನಾವಣೆಯನ್ನು ಪೂರ್ಣಗೊಳಿಸಲು ಅನುಮತಿ ನೀಡಿದ್ದರಿಂದ, ಕ.ಸಾ.ಪ. ಚುನಾವಣೆಯ ಪರಿಷ್ಕೃತ ವೇಳಾಪಟ್ಟಿಯಂತೆ ದಿನಾಂಕ ೨೧-೧೧-೨೦೨೧ ರಂದು ಬೆಳಿಗ್ಗೆ ೮ ರಿಂದ ಸಂಜೆ ೪ ಗಂಟೆಯವರೆಗೆ ರಾಜ್ಯದ ಎಲ್ಲಾ ತಾಲ್ಲೂಕುಗಳು ಹಾಗೂ ಕೆಲವು ಹೋಬಳಿ ಕೇಂದ್ರಗಳು, ಬೆಂಗಳೂರು ನಗರ ಜಿಲ್ಲೆಯ ೨೮ ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು ೪೨೦ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ನಡೆಸಲಾಗಿದೆ.
ಯಾದಗಿರಿ ಜಿಲ್ಲಾ ಅಧ್ಯಕ್ಷರ ಹಾಗೂ ತಮಿಳುನಾಡು ಗಡಿನಾಡ ಘಟಕ ಅಧ್ಯಕ್ಷರ ಸ್ಥಾನಕ್ಕೆ ತಲಾ ಒಬ್ಬ ಅಭ್ಯರ್ಥಿ ಅಂತಿಮವಾಗಿ ಕಣದಲ್ಲಿದ್ದ ಕಾರಣ ಹಾಗೂ ಗೋವಾ ಗಡಿನಾಡ ಘಟಕ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೇ ಇದ್ದುದ್ದರಿಂದ ಇಲ್ಲಿ ಚುನಾವಣೆಯನ್ನು ನಡೆಸಿರುವುದಿಲ್ಲ. ಉಳಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ, ೨೯ ಜಿಲ್ಲಾ ಘಟಕಗಳ ಅಧ್ಯಕ್ಷರ ಹಾಗೂ ಕೇರಳ ಮಹಾರಾಷ್ಟç, ಆಂಧ್ರಪ್ರದೇಶ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ನಡೆಸಲಾಗಿದೆ.
೨೦೨೧ರ ಚುನಾವಣೆಯಲ್ಲಿ ಹೊಸದಾಗಿ ಅನುಸರಿಸಿದ ಕ್ರಮಗಳು
ಮತದಾರರ ಅನುಕೂಲಕ್ಕಾಗಿ, ಮತದಾನದ ಪ್ರಮಾಣ ಹೆಚ್ಚಳವಾಗಬೇಕೆಂಬ ಸದುದ್ದೇಶದಿಂದ ಕ.ಸಾ.ಪ. ಇತಿಹಾಸದಲ್ಲಿ ಮೊದಲನೆಯ ಬಾರಿಗೆ ಮೊಬೈಲ್ ಆ್ಯಪ್ ಇಟeಛಿಣioಟಿ ಏಚಿsಚಿಠಿಚಿ ೨೦೨೧ ರೂಪಿಸಲಾಗಿತ್ತು. ಇದರಿಂದಾಗಿ ಮತದಾರರು ಹಾಗೂ ಅಭ್ಯರ್ಥಿಗಳು ಮತದಾರರ ವಿಳಾಸ / ಮತಗಟ್ಟೆ ವಿವರಗಳನ್ನು ಸುಲಭವಾಗಿ ಹುಡಕುವಂತಾಯಿತು ಹಾಗೂ ಕಸಾಪದ ಅಧಿಕೃತ ವೆಬ್‌ಸೈಟ್ ತಿತಿತಿ.ಞಚಿsಚಿಠಿಚಿ.iಟಿ ನಲ್ಲಿಯೂ ಹುಡುಕು ಆಯ್ಕೆ (ಸರ್ಚಿಂಗ್) ರೂಪಿಸಿದ್ದು, ವಿವರಗಳನ್ನು ಸುಲಭವಾಗಿ ದೊರಕುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೇ ಮೊದಲ ಬಾರಿಗೆ ಮತದಾರರ ಪಟ್ಟಿಯನ್ನು ಸಹ ಕನ್ನಡ ವರ್ಣಮಾಲೆಯ ಅಕ್ಷರಗಳಿಗನುಗುಣವಾಗಿ ಮುದ್ರಿಸಿ ಚುನಾವಣೆಯನ್ನು ನಡೆಸಲಾಗಿದೆ.
ಜಿಲ್ಲಾಘಟಕದ ಅಧ್ಯಕ್ಷರ ಚುನಾವಣಾ ಫಲಿತಾಂಶವನ್ನು ಆಯಾ ಜಿಲ್ಲಾ ಕ.ಸಾ.ಪ. ಚುನಾವಣಾಧಿಕಾರಿಗಳು ಅಂದೇ ಅಧಿಕೃತವಾಗಿ ಘೋಷಿಸಿದ್ದಾರೆ. (ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿದೆ.) ಅಂದೇ ಕೇಂದ್ರ ಅಧ್ಯಕ್ಷರ ಚುನಾವಣಾ ಎಣಿಕೆ ಫಲಿತಾಂಶದ ವಿವರಗಳನ್ನು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಚುನಾವಣಾಧಿಕಾರಿಗಳಿಗೆ ಒಪ್ಪಿಸಿದ್ದರು.
೩೧೦೧೫೩ ಅರ್ಹ ಮತದಾರರಲ್ಲಿ ರಾಜ್ಯ, ಗಡಿರಾಜ್ಯ, ಹೊರರಾಜ್ಯ ಸೇರಿದಂತೆ ಒಟ್ಟು ೧೬೨೪೮೬ ಮತದಾರರು ಮತ ಚಲಾಯಿಸಿದ್ದು, ೬೯೪೩೧ ಮತಗಳನ್ನು ಪಡೆದ ನಾಡೋಜ ಡಾ. ಮಹೇಶ ಜೋಶಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
0 Comments