ಬೆಂಗಳೂರು : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಲ್ಲೇಶ್ವರ ಉಪ ಸಮಿತಿ (ಬೆಂಗಳೂರು ಜಿಲ್ಲಾ) ಸರ್ವ ಸದಸ್ಯರ ಸಾಮಾನ್ಯ ಸಭೆಯು ಕರೋನಾ ಕಾರಣದಿಂದಾಗಿ ಎರಡು ವರ್ಷದ ನಂತರ ಮಾಸಿಕ ಸಭೆಯನ್ನು ಅಧ್ಯಕ್ಷರಾದ ಟಿ.ಎಂ.ರವಿಶಂಕರ್ ರವರ ನೇತೃತ್ವದಲ್ಲಿ ಮಲ್ಲೇಶ್ವರ ಕ್ಲಬ್‌ನಲ್ಲಿ ಆಯೋಜಿಸಲಾಗಿತ್ತು.
ಸದರಿ ಸಭೆಯಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು ಎಸ್. ಚಂದ್ರಶೇಖರ್ ರವರ ಉಪಸ್ಥಿತಿಯಲ್ಲಿ ಉಪಾಧ್ಯಕ್ಷ ಬಿ.ಪಿ.ಪ್ರಭಾಕರ್, ಕಾರ್ಯದರ್ಶಿ ಶಿವಣ್ಣ, ಖಜಾಂಚಿ ಹೆಚ್.ರವಿಕುಮಾರ್ ರವರುಗಳು ಭಾಗವಹಿಸಿದ್ದ ಈ ಸಭೆಯಲ್ಲಿ , ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸುವುದರೊಂದಿಗೆ, ಸದಸ್ಯರು ತಮ್ಮ ಹಾಗೂ ತಮ್ಮ ಸಹ ಗುತ್ತಿಗೆದಾರ ಬಾಂಧವರ ಸಮಸ್ಯೆಗಳನ್ನು ಹಾಗೂ ಅವುಗಳ ಪರಿಹಾರಕ್ಕೆ ಸೂಕ್ತವಾಗುವಂತಹ ಸಲಹೆ ಸೂಚನೆಗಳನ್ನು ಈ ಸಭೆಯಲ್ಲಿ ಚರ್ಚಿಸಲಾಯಿತು.
0 Comments