ಶ್ರೀ ಲಕ್ಷ್ಮೀ ನರಸಿಂಹ ಸಹಿತ ಶ್ರೀ ಯಂತ್ರೋಧ್ದಾರಕ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಗಳ ಮಠ ಬಳ್ಳಾರಿ
16-12-2021 ಗುರುವಾರ ರಂದು ನಡೆಯಲಿರುವ ಶ್ರೀ ಹನುಮದ್ ವ್ರತ ಅಂಗವಾಗಿ ಯಂತ್ರೋಧ್ದಾರಕ ಸ್ತೋತ್ರ ವನ್ನು ಪ್ರತಿ ವರುಷ ದಂತೆ ಈ ವರುಷ ಸಹ ಶ್ರೀಯಂತ್ರೋಧ್ದಾರಕ ಸ್ತೋತ್ರ ವನ್ನು ಹತ್ತು ಲಕ್ಷ ಜಪ ಮಾಡ ಬೇಕೆಂದು ಶ್ರೀ ಹರಿ ವಾಯು ಗುರು ಗಳ ಪ್ರೇರಣಾನು ಸಾರ ದಿಂದ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಈ ಜಪದ ಯಜ್ಙದಲ್ಲಿ ಪಾಲ್ಗೊಂಡು ಶ್ರೀ ಯಂತ್ರೋಧ್ದಾರಕ ಸ್ವಾಮಿ ಯ ಅನುಗ್ರಹ ಕ್ಕೆ ಪಾತ್ರರಾಗಬೇಕಾಗಿ ವಿನಂತಿ. ಈ ಜಪ ವನ್ನು ಪ್ರತಿ ದಿನ ಒಬ್ಬರು 13 ಸಾರಿ 42 ದಿನ ಮಾಡಬೇಕು. ಕೇವಲ 15 ನಿಮಿಷಗಳು ತಾವು ವಾಯು ದೇವರ ಅನುಗ್ರಹಕ್ಕಾಗಿ ಜಪ ಮಾಡಬೇಕಾಗಿ ವಿನಂತಿ . ಈ ಪ್ರಕಾರ ನೀವು ಜಪ ಮಾಡಿರಿ. 5-11-2021 ಶುಕ್ರವಾರ ಬಲಿಪಾಡ್ಯ ಆಗುತ್ತದೆ. ಆವತ್ತಿನಿಂದ ಶ್ರೀ ಹನುಮತ್ ವ್ರತ 42 ದಿನಗಳಾಗುತ್ತದೆ. ಆವತ್ತಿನ ದಿನ ಸಂಕಲ್ಪ ಪೂರ್ವಕ ವಾಗಿ ಪ್ರಾರಂಭ ಮಾಡಬೇಕು. ತಮ್ಮ ಬಂಧು ಬಳಗ ದವರ ಜತೆ ಯಲ್ಲಿ ಜಪ ಮಾಡಿಸಿ ವಿಶೇಷ ಫಲವನ್ನು ಪಡೆಯಬೇಕಾಗಿ ವಿನಂತಿ. ಈ ಜಪ ಯಜ್ಞ ದಲ್ಲಿ ಪಾಲ್ಗೊಳ್ಳುವವರು ಯಾವ ರೀತಿಯ ಕಾಣಿಕೆ ಸಲ್ಲಸ ಬೇಕಿಲ್ಲ . ಜಪ ಮಾಡಿದರೇ ಸಾಕು. ಈ ಜಪ ಯಜ್ಞ ದಲ್ಲಿ ಭಾಗವಹಿಸಿ ದವರು ತಮ್ಮ ಹೆಸರು ಗಳನ್ನು ಕೆಳಗಿನ ದೂರವಾಣಿ ಸಂಖ್ಯೆಗೆ ನೊಂದಾಯಿಸಿ ಕೊಳ್ಳಬೇಕು. ಜಪ ಮಾಡುವವರಿಗೆ ಸಂಕಲ್ಪ ಮತ್ತು ಅಂಗನ್ಯಾಸ ,ಕರನ್ಯಾಸ , ಮಾಡುವ ವಿಧಾನ ಗಳನ್ನು ತಿಳಿಸ ಲಾಗುತ್ತದೆ. ಹಾಗೂ ಅವರ ಹೆಸರಲ್ಲಿ 16-12-2021 ರಂದು ನಡೆಯಲಿರುವ ಹೋಮ ದಲ್ಲಿ ಸಂಕಲ್ಪ ಮಾಡಲಾಗುತ್ತದೆ. ಈ ಮೆಸೇಜು ತಮ್ಮ ಗೆ ತಿಳದ ಗುಂಪುಗಳಲ್ಲಿ ಸರಬರಾಜು ಮಾಡಿರಿ.
ವಿವರಗಳಿಗೆ ಸಂಪರ್ಕಿಸಿ.
ಬಲರಾಮಾಚಾರ್ಯ. 9880090198.
0 Comments