ಬಳ್ಳಾರಿ, ಅ 12: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ನಿರ್ಮಿಸಿದ Centre of excellence for Multidisciplinary Advanced Research facility ಕೆಂದ್ರವನ್ನು ದಿನಾಂಕ 12/10/2021 ರಂದು ವಿಶ್ವವಿದ್ಯಾಲಯದ ಎಲ್ಲಾ ಸಿಂಡಿಕೆಟ್ ಸದಸ್ಯರ ಉಪಸ್ಥಿತಿಯಲ್ಲಿ ಮಾನ್ಯ ಕುಲಪತಿಗಳು ಉದ್ಘಾಟಿಸಿದರು.
ಕೇಂದ್ರವನ್ನು ಉದ್ಘಾಟಿಸಿ ಮಾನ್ಯ ಕುಲಪತಿಗಳಾದ ಪ್ರೊ. ಸಿದ್ದು ಪಿ. ಆಲಗೂರ್ ಇವರು ಮಾತನಾಡುತ್ತ ಇದು ಸ್ನಾತಕೊತ್ತರವಿದ್ಯಾರ್ಥಿಗಳಿಗೆ, ಸಂಶೋಧನಾರ್ಥಿಗಳಿಗೆ ಸಂಶೋಧನೆಗೆ ಸಂಭ0ಧಿಸಿದ0ತೆ ರಾಷ್ಟಿçಯ ಮತ್ತು ಅಂತರಾಷ್ಟಿçಯ ಮಟ್ಟದ ಉತ್ಕçಷ್ಟ ಸಂಶೋಧನೆಯನ್ನು ಕೈಗೊಳ್ಳಲು ಉಪಯೋಗವಾಗಲಿದೆ. ಇತರರು ಕೂಡ ಈ ಕೇಂದ್ರದ ಸದುಪಯೂಗ/ಸಲಹಾ ಸೇವೆಗಳು (Consultancy services) ಪಡೆದುಕೋಳ್ಳಬಹುದು ಎಂದು ಹೇಳಿದರು. ಈ ಕೆಂದ್ರವು ನ್ಯಾಕ್ ಮೌಲ್ಯಾಂಕನಕ್ಕೆ ಹಾಗೂ ಅಮತರಾಷ್ಟಿಯ ಮಟ್ಟದ ಲೇಖನಗಳನ್ನು ಪ್ರಕಟಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸುಸಜ್ಜಿತ ಕೆಂದ್ರದ ಅನುಕೂಲ ಹಾಗೂ ಉಪಯೋಗಗಳ ಕುರಿತು ಡಾ. ಕೆ. ಎಸ್. ಲೋಕೆಶ್ ಪ್ರಾದ್ಯಾಪಕರು ಎಲ್ಲರನ್ನುದ್ದೆಶಿಸಿ ಮಾತನಾಡಿದರು. ಕೆಂದ್ರವು Elemental analyser (23 lakhs) ಮೊತ್ತದಉಪಕರಣವು ನೈಸರ್ಗಿಕ ವಸ್ತುಗಳಿಂದ ಹೊರತೆಗೆಯಲಾದ ಮತ್ತು ಸಂಶ್ಲೇಷಿತ ಪದಾರ್ಥಗಳಲ್ಲಿ ರಾಸಾಯನಿಕ ಸಂಯೋಜನೆಗಳ ಶೆಕಡಾವಾರು ಪ್ರಮಾಣವನ್ನು ಹಾಗೂ ಶುದ್ದತೆಯನ್ನು ವಿಶ್ಲೇಷಿಸಲು ಸಹಕಾರಿಯಾಗಲಿದೆ. Thermogravimetric analyser (21 lakhs) ಮೊತ್ತದ ಉಪಕರಣವು ನೈಸರ್ಗಿಕ ಹಾಗೂ ಸಂಶ್ಲೇಷಿತ ಪದಾರ್ಥಗಳ ಉಷ್ಣಸ್ಥಿರತೆ ಬಗ್ಗೆ ಮಾಹಿತಿ ನಿಡುತ್ತದೆ ಮತ್ತು ಹೆಚ್ಚಿನ ಉಷ್ಣಾಂಶದಲ್ಲಿ ಅಣುವಿನ ಮಾದರಿ ಅವನತಿ (degradation) ಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಈ ಎರಡು ಉಪಕರಣಗಳು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರಕಾರ, ಇವರ ಅನುದಾನದಡಿಯಲ್ಲಿ ಬಿಡುಗಡೆಗೋಂಡಿರುತ್ತವೆ. ವಿಶ್ವವಿದ್ಯಾಲಯದ ಅನುದಾನದಡಿಯಲ್ಲಿ UV–Visible Spectrophotometer (3.5 Lakhs) ಮೊತ್ತದ ಉಪಕರಣ ಅಣುಗಳಲ್ಲಿನ ಅತ್ಯಂತ ಕಡಿಮೆ ಪ್ರಮಾಣದ ಸಾಂದ್ರತೆಯನ್ನು ಕಂಡುಹಿಡಿಯುವುದು. ವಿಜಯನಗರ ಶ್ರೀ ಕೃಷ್ಣದೆವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಹಾಗೂ ಬಯೋಕಾನ ಸಂಸ್ಥೆ, ಬೆಂಗಳೂರು ಇವರ ಒಡಂಬಡಿಕೆಯಿ0ದ 02 HPLC (80 lakhs), GCMS (1.5 crore), LCMS (2 crore) ಮೊತ್ತದ ಉಪಕರಣಗಳು ದೇಣಿಗೆ ನಿಡಲು ಒಪ್ಪಿರುತಾರೆ. ಈ ಉಪಕರಣಗಳು ಅಣುಗಳನ್ನು ಪ್ರತ್ಯೆಕಿಸಲು, ಅವುಗಳ ಪರಿಶುದ್ದತೆಯನ್ನು ಅಳೆಯಲು ಮತ್ತು ಅವುಗಳನ್ನು ಏಕಕಾಲಕ್ಕೆ ಬಯಸಿದ ಅಥವಾ ಆಪೆಕ್ಷಿತ ಅಣುಗಳ ಗುರುತಿಸುವಿಕೆಯಲ್ಲೂ ಸಹಕಾರಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೋ. ಎಸ್. ಸಿ. ಪಾಟಿಲ, ಮೌಲ್ಯಮಾಪನ ಕುಲಸಚಿವರಾದ ಪ್ರೋ. ಶಶಿಕಾಂತ್ ಉಡಿಕೆರಿ,ನರಸಿಂಹ ರಾಯಚೂರ್, ಡಾ.ಅರುಣ್ ಕುಮಾರ್,ಮರ್ಚೆಡ್ ಮಲ್ಲಿಕಾರ್ಜುನ, ಪದ್ಮ ವಿಠಲ್ ಹಾಗೂ ವಿತ್ತಾಧಿಕಾರಿಗಳಾದ ಡಾ. ಕೆ ಸಿ. ಪ್ರಶಾಂತ ಹಾಗೂ ಎಲ್ಲಾ ನಿಕಾಯದ ಡಿನರು, ಮತ್ತು ವಿಭಾಗಗಳ ಮುಖ್ಯಸ್ಥರು ಸಂಶೋಧನಾರ್ಥಿಗಳು ಉಪಸ್ತಿತರಿದ್ದರು.
0 Comments