ನನ್ನ ಪರಮಪೂಜ್ಯ ಸರ್ವ ಮಹಾ ಸ್ವಾಮಿಜಿಗಳವರಿಗೆ ಮತ್ತು ಗುರುವೃಂದಕ್ಕೆ
ಆತ್ಮೀಯ ಸ್ನೇಹಿತರು, ಹಿತೈಷಿಗಳು, ಕಲಾವಿದರು ಹಾಗೂ ಸಾಹಿತಿ ಬಂಧು ಗಳಿಗೆ ವಿಜಯದಶಮಿಯ ಹಾರ್ದಿಕ ಶುಭಾಷಯಗಳು
ಕೋವಿಡ್ ಕಾರಣದಿಂದ ಮುಂದೂಡಲಾಗಿದ್ದ ಕ. ಸಾ. ಪ ಚುನಾವಣೆಯು ದಿ:21-11-2021 ರಂದು ರವಿವಾರ ನಿಗದಿಯಾಗಿದೆ.
ನಾನು ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಬಂದಾಗ ತಾವೆಲ್ಲ 106 ವರ್ಷಗಳ ನಂತರ ಬಂದ ಏಕೈಕ ಮಹಿಳೆ ಸಾಹಿತಿ ಕಲಾವಿದೆ ಎಂದೆಲ್ಲಾ ಹೇಳಿ ಅಭಿಮಾನ ಗೌರವ ಬೆಂಬಲ ಬದ್ದತೆ ತೋರಿದ ತಮಗೆಲ್ಲ ಋಣಿಯಾಗಿ ವಂದಿಸುತ್ತೇನೆ
ಕನ್ನಡಿಗರು ಸ್ತ್ರೀ ಲೋಕವನ್ನು ಗೌರವಿಸುವ ಹೃದಯವಂತರು. ತಮ್ಮೆಲ್ಲರ ಬೆಂಬಲವೇ ನನಗೆ ಶ್ರೀ ರಕ್ಷೆ.
ತಮ್ಮ ಅಮೂಲ್ಯ ಮತದಿಂದ ಈ ಸಹೋದರಿಯ ಮಡಿಲು ತುಂಬಿ ಕನ್ನಡಮ್ಮನ ಸೇವೆ ಮಾಡಲು ಅವಕಾಶ ನೀಡಲು ಮನವಿ.
ಶತಮಾನದ ನಂತರ ಬಂದ ಮಹಿಳೆಯೊಬ್ಬಳನ್ನು ಗೆಲ್ಲಿಸಿದ ಕೀರ್ತಿ ಹಾಗೂ ಹೊಸ ಚರಿತ್ರೆಗೆ ನಾಂದಿ ಹಾಡಿದ ಅಗ್ಗಳಿಕೆ ತಮ್ಮದಾಗಲಿ.
ತುಂಬು ಹೃದಯದ ನಮನಗಳು, ಮನು ಕುಲಕ್ಕೆ ಶುಭವಾಗಲಿ,ಜೈ ಚಾಮುಂಡೇಶ್ವರಿ,ಜೈ ಕನ್ನಡಾಂಬೆ ಕನ್ನಡ ಸಾಹಿತ್ಯಕ್ಕೆ ಜಯವಾಗಲಿ.
ಡಾ. ಸರಸ್ವತಿ ಶಿವಪ್ಪ ಚಿಮ್ಮಲಗಿ.
ರಾಜ್ಯಾಧ್ಯಕ್ಷ ಸ್ಥಾನದ ಏಕೈಕ ಮಹಿಳಾ ಅಭ್ಯರ್ಥಿ.ವಿಜಯಪುರ/ ಕಲಬುರಗಿ "9886030378
0 Comments