Ticker

6/recent/ticker-posts

Ad Code

Responsive Advertisement

ಕೃಷಿ ಕಾಯ್ದೆ ಹಿಂಪಡೆಯಲು ಪ್ರಧಾನಿಗೆ ನೂತನ ಪಂಜಾಬ್ ಸಿಎಂ ಒತ್ತಾಯ.

ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆ ಹಿಂಪಡೆಯಲು ಪ್ರಧಾನಿ ಮೋದಿಗೆ ನೂತನ ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಒತ್ತಾಯ.

ಅಕ್ಟೋಬರ್ 01, ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಇಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದೆರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚರಣ್ ಜತ್ ಸಿಂಗ್ ಅವರು, ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯುವ ಬಗ್ಗೆ ಪ್ರಧಾನಿಯವರೊಂದಿಗೆ ಚರ್ಚಿಸಿದ್ದೇನೆ ಎಂದರು. ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆ ಹಿಂಪಡೆಯುವ0ತೆ ಆಗ್ರಹಿಸಿದ್ದೇನೆ ಎಂದರು. ಪ್ರತಿಭಟನಾ ನಿರತ ರೈತರೊಂದಿಗೆ ಸರ್ಕಾರ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ಭಾರತ-ಪಾಕಿಸ್ತಾನ ಕರ್ತಾರ್ಪುರ್ ಕಾರಿಡಾರ್ ದ್ವಾರವನ್ನು ಓಪನ್ ಮಾಡುವಂತೆ ಮನವಿ ಮಾಡಿದ್ದೇನೆ. ಕೊರೋನಾ ಹಿನ್ನೆಲೆಯಲ್ಲಿ ಕಾರಿಡಾರ್ ಮುಚ್ಚಲಾಗಿದ್ದು, ಇದನ್ನು ತೆರೆಯಬೇಕು ಎಂದು ಪ್ರಧಾನಿ ಮೋದಿಗೆಯವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಇದು ಸೌಜನ್ಯದ ಭೇಟಿಯಾಗಿದ್ದು, ನಾನು ಅವರೊಂದಿಗೆ 3 ಸಮಸ್ಯೆಗಳನ್ನು ಹಂಚಿಕೊAಡಿದ್ದೇನೆ. ಮೊದಲನೆಯದಾಗಿ, ಸಾಮಾನ್ಯವಾಗಿ ಪಂಜಾಬ್ನಲ್ಲಿ ಅಕ್ಟೋಬರ್ 1 ರಂದು ಖರೀದಿ ಸೀಸನ್ ಆರಂಭವಾಗುತ್ತದೆ. ಆದರೆ, ಈ ವರ್ಷ 10 ನೇ ತಾರೀಖಿನಂದು ಆರಂಭಿಸಲು ಕೇಂದ್ರ ನಿರ್ಧರಿಸಿದೆ. ಈಗಲೇ ಖರೀದಿ ಆರಂಭಿಸಲು ವಿನಂತಿಸಿದ್ದೇನೆ. ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚೆ ಪುನರಾರಂಭಿಸುವ0ತೆ ಮನವಿ ಮಾಡಿದ್ದು, ಮೂರು ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದೇನೆ ಎಂದರು ಹೇಳಿದರು.

Post a Comment

0 Comments

Ad Code

Responsive Advertisement