ವರನಟ ಡಾ. ರಾಜ್‌ಕುಮಾರ್‌ರವರ ಪುತ್ರ ಹಾಗೂ ಖ್ಯಾತ ನಟ ಪುನೀತ್ ರಾಜ್‌ಕುಮಾರ್‌ರವರ ಅಕಾಲಿಕ ನಿಧನಕ್ಕೆ ಆಮ್ ಆದ್ಮಿ ಪಾರ್ಟಿ ಶ್ರದ್ಧಾಂಜಲಿ ಕೋರಿದ್ದು, ಇದು ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ತುಂಬಲಾರದ ನಷ್ಟವೆಂದು ಅಭಿಪ್ರಾಯಪಟ್ಟಿದೆ.
“ನಟನೆಯ ಜೊತೆಗೆ ಹಾಡುಗಾರಿಕೆ ಕಲೆಯೂ ಪುನೀತ್ ರಾಜ್‌ಕುಮಾರ್‌ರವರಿಗೆ ಒಲಿದಿತ್ತು. ಅವರ ಸುಮಧುರ ಕಂಠದ ಅನೇಕ ಹಾಡುಗಳು ಸಂಗೀತಪ್ರಿಯರ ಮನಗೆದ್ದಿವೆ. ಕಿರುತರೆಯ ರಿಯಾಲಿಟಿ ಶೋಗಳನ್ನೂ ಯಶಸ್ವಿಯಾಗಿ ನಡೆಸಿಕೊಟ್ಟ ಅವರು ಬಹುಮುಖ ಪ್ರತಿಭೆ. ಎಲ್ಲಕ್ಕಿಂತ ಮುಖ್ಯವಾಗಿ, ಅಷ್ಟು ದೊಡ್ಡ ಕುಟುಂಬದಲ್ಲಿ ಜನಿಸಿದ್ದರೂ, ಮುಗಿಲೆತ್ತರದ ಕೀರ್ತಿ ಗಳಿಸಿದ್ದರೂ, ಕಿಂಚಿತ್ತೂ ಅಹಂಕಾರವಿಲ್ಲದೇ, ಎಂದೂ ಹೆಸರು ಕೆಡಿಸಿಕೊಳ್ಳದೇ ಸದಾ ನಗುಮೊಗದಿಂದ ಬದುಕಿದ್ದರು. ಅವರ ಈ ಸ್ವಭಾವವು ಸರ್ವರಿಗೂ ಮಾದರಿಯಾಗಬೇಕಿದೆ” ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್‌ಕುಮಾರ್‌ರವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಘಟಕ ಭಾಗಿಯಾಗುತ್ತಿದೆ. ಅಪ್ಪು ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪೃಥ್ವಿ ರೆಡ್ಡಿಯವರು ಹೇಳಿದ್ದಾರೆ.
0 Comments