ಅಪ್ಪ ಅಮ್ಮ ಪ್ರೀತಿ ವಿಶ್ವಾಸ ಮತ್ತು ವೃದ್ಧಾಪ್ಯದ ಬಗ್ಗೆ ಒಂದಷ್ಟು ತಿಳಿಯಬೇಕಾದರೆ ನೀವು ರಾಜಕುಮಾರ ಸಿನಿಮಾ ನೋಡಲೇ ಬೇಕು.ಅಂತೆ ಹಿಂದೆ ಬರೆದಿದ್ದೆ. ರಾಜಕುಮಾರ ಚಲನಚಿತ್ರ ಈಗಾಗಲೇ ನೋಡಿದ ಮಂದಿಗೆ ಆ ಚಿತ್ರದ ಅನಾಥಾಶ್ರಮ ಮತ್ತು ವೃದ್ಧಾಶ್ರಮ "ಕಸ್ತೂರಿ ನಿವಾಸ" ದ ಮೇಲ್ವಿಚಾರಕ ಕೃಷ್ಣ ಪಾತ್ರಧಾರಿ ಅಚ್ಯುತ್ ಕುಮಾರ್ ಅವರ ಅಮೋಘ ಅಭಿನಯ ಮರೆಯಲು.ಸಾಧ್ಯವೇ ? ಇನ್ನು ಅಪ್ಪು ಎಲ್ಲಾ ಕಟೌಟು ಚಾಲೆಂಜ್ ಮೀರಿದ ಕನ್ನಡದ ರಾಜರತ್ನ.ಪವರ್ ಸ್ಟಾರ್ ಪುನೀತ್ ನನಗೆ ಬಾಲ್ಯದಿಂದಲೂ ಇಷ್ಟ.ಆತ ಬಾಲನಟನಾಗುವ ಮೊದಲೇ ನಮ್ಮ ಪ್ರಾಥಮಿಕ ಶಾಲೆಗೆ ಬಂದಿದ್ದ ದಿನಗಳಿಂದ.ಬಾಲರಾಜ್ ಹೆಂಡತಿ ಯಶೋಧಾ ನಮ್ಮ ಶಾಲೆಯ ಸಹಪಾಠಿ ಅಪ್ಪುವನ್ನು ನಮಗೆ ಪರಿಚಯಿಸಿದ ಗೆಳತಿ.ಪ್ರಕಾಶ್ ರೈ ನನ್ನ ಚೆನೈ ವಿಶೇಷ ನಂಟು.ಇಡೀ ತಾರಾಗಣದ ಹಲವರು ನೇರ ಪರಿಚಯ.ಅಂದ ಹಾಗೆ ಚಿತ್ರದ ನಿರ್ದೇಶಕ ಇಪ್ಪತ್ತೊಂಬತ್ತು ವರ್ಷದ ಅದ್ಭುತ.ಇದೇ ಚಿತ್ರದ ಪಾತ್ರದಲ್ಲಿ ಕಾಣಿಸಿಕೊಳ್ಳುವ ನನ್ನ ಪ್ರೀತಿಯ ಹಿರಿಯ ಸ್ನೇಹಿತ ಮಂಡ್ಯಂ ಎಂ ಕೆ ಶ್ರೀಧರ್ ಅವರ ಭಾವನಾತ್ಮಕ ಮಗ.
ಇದೆಲ್ಲಾ ಬಿಡಿ ಅಪ್ಪ ಅಮ್ಮನ ವಿಚಾರದಲ್ಲಿ ಮಕ್ಕಳ ಕರ್ತವ್ಯ ಏನು ? ಹಿರಿಯ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರೀತಿಯ ಮಕ್ಕಳು ನೋಡಲೇ ಬೇಕಾದ ಸಿನಿಮಾ.ನಿನ್ನೆ ಕೇಳಿದ ಒಂದು ಪ್ರಶ್ನೆ" ಏನೇ ಆದ್ರೂ ನಾನು ಅಹಂಕಾರಿ ಅಲ್ವಾ" ಉತ್ತರ ನಾನೇ ಹೇಳ್ತೀನಿ. ಈ ರಾಜಕುಮಾರ ಚಿತ್ರದ ಅಪ್ಪು ಪಾತ್ರದ ಗುಣ ನನಗಿರುವುದು ನನ್ನ ಅಹಂಕಾರ.
ಇದು ಹುಟ್ಟುಗುಣ ಅದು ನನ್ನ ಅಹಂಕಾರ. ನನಗೆ ಬಹಳ ಸಂತೋಷವಿದೆ.ಅಂದ ಹಾಗೆ ನಿಜ ಜೀವನದಲ್ಲೂ ಒಂದಷ್ಟು ವೃದ್ಧಾಶ್ರಮ ಮತ್ತು ಸಮಾಜ ಸೇವೆ ಮಾಡಿಕೊಂಡಿದ್ದ 46 ವರ್ಷಗಳ ಪುನೀತ್ ರಾಜಕುಮಾರ್ ನಿಧನರಾಗಿರುವುದು ಬೇಸರದ ವಿಚಾರ ಅವರ ಆತ್ಮಕ್ಕೆ ಶಾಂತಿ ಕೋರೋಣ.
C.N.RAMESH
0 Comments