ಮಧುಗಿರಿ – ಜನತೆ ಕೊಟ್ಟ ಅಧಿಕಾರವನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ತಿಳಿಸಿದರು.
ತಾಲೂಕಿನ ಚನ್ನಸಾಗರ ಗ್ರಾಮದ ಬಳಿ ಜಯಮಂಗಲಿ ನದಿಗೆ ನಿರ್ಮಿಸಿದ್ದ ಚೆಕ್ ಡ್ಯಾಂ ತುಂಬಿರುವ ಹಿನ್ನಲೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದ ಶಾಸಕನಾಗಿದ್ದರೂ ಸಹ ಪುರವರ ಹೋಬಳಿಯಲ್ಲಿ ನೀರಾವರಿ ಯೋಜನೆಗಳಿಗೆ ೧೦ ಕೋಟಿ ರೂ ಅನುದಾನ ತಂದು ಅನೇಕ ಚೆಕ್ ಡ್ಯಾಂಗಳನ್ನು ನಿರ್ಮಿಸಿ ರೈತರಿಗೆ ಅನುಕೂಲವಾಗಲು ಮೊದಲ ಆದ್ಯತೆ ನೀಡಿದ್ದೇನೆ.
ಕ್ಷೇತ್ರದ ಕೆರೆಗಳಿಗೆ ನೀರನ್ನು ಹರಿಸಲು ಮತ್ತು ಹೊಸದಾಗಿ ಕೆರೆಗಳನ್ನು ಕಟ್ಟಿಸುವ ಮೂಲಕ ರೈತರ ಋಣವನ್ನು ಸ್ವಲ್ಪ ಮಟ್ಟಿಗೆ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು. ನಮ್ಮ ದೇಶ ಕೃಷಿ ಪ್ರಧಾನವಾಗಿದ್ದರೂ ಪಠ್ಯ ಪುಸ್ತಕಗಳಲ್ಲಿ ಪ್ರಕೃತಿ, ಮಳೆ, ಬಿತ್ತನೆ ಹಾಗೂ ಮೋಡದ ರಚನೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಒಂದು ಪಾಠವಾದರೂ ಇಲ್ಲದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿಯಾಗಿ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ಅನ್ನು ಬೈರಗೊಂಡ್ಲು ಬಳಿ ನಿರ್ಮಿಸುವಂತೆ ಮನವಿ ಮಾಡಲಾಗಿದೆ.
ಈ ವಿಷಯದಲ್ಲಿ ಕ್ಷೇತ್ರದ ರೈತರು ಗೊಂದಲಕ್ಕೆ ಒಳಗಾಗಬಾರದು ಎಂದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋವರ್ಧನ್, ಮುಖಂಡರಾದ ಕಾಂತರಾಜು, ವೇಣುಗೋಪಾಲ್, ರಮೇಶ್, ಸತೀಶ್, ಕಾಂತಣ್ಣ, ಲಿಂಗರಾಜು, ಗೋಪಿನಾಥ್, ಎಲೆ ಗೋವಿಂದಪ್ಪ, ಮುದ್ದ ಹರಿಯಪ್ಪ, ಜಯರಾಮಣ್ಣ, ರಂಗರಾಯಪ್ಪ, ಚೌಡಪ್ಪ, ಸಂತೋಷ್, ಮೈಲಾರಪ್ಪ, ಪಂಕಜ, ಸರೋಜ, ರೂಪಾ ಹೆಂಜಾರಪ್ಪ, ನಾಗರಾಜಪ್ಪ, ಗೋಪಾಲಪ್ಪ, ಹನುಮಂತರಾಜು, ಕುಮಾರ್, ರಂಗಯ್ಯ, ನಾಗರೆಡ್ಡಿ, ಪಿಡಿಒ ಅಲ್ಮಾಸ್ ಕಂಪ್ಯೂಟರ್ ನಾಗರಾಜು ಹಾಗೂ ಮತ್ತಿತರರು ಇದ್ದರು.
0 Comments