ಮಧುಗಿರಿ : ತುಮಕೂರು ಜಿಲ್ಲೆಯ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರು ಸುರೇಶ್ ಆರ್ ಮಧುಗಿರಿ ಉಪ ವಿಭಾಗದ ಅಧಿಕಾರಿ ನಾಗರಾಜು ಹೆಚ್.ಕೆ,ನಾಗಲಿಂಗಚಾರ ಡಿ,ರಾಮಮೂರ್ತಿ ಅವರ ನೇತೃತ್ವದಲ್ಲಿ ಮಧುಗಿರಿ ಟೌನ್ ವ್ಯಾಪ್ತಿಯಲ್ಲಿ ಗಾಂಜ ಇದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮಧ್ಯಾಹ್ನ 12:15 ರ ಸಮಯದಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಟೌನ್ ನಿವಾಸಿಯಾದ ಕಲೀಂ ಬಿನ್ ಲೆಟ್ ಶೇಖ್ ಆದಮ್ ರವರ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದಾಗ ಸುಮಾರು 620 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.ಇದಕ್ಕೆ ಸಂಬಂಧ ಕಲೀಂ ಎನ್ನುವ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಎನ್ ಡಿ ಪಿ ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಉಪ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಮಹಾಂತೇಶ್.ಕೆ ಪಿ, ಜಗದೀಶ್, ಶ್ರೀ ಶೈಲ್ ಪೂಜಾರ್, ಯೋಗಾನಂದ, ಕೊಂಡರಾಜು, ರಮೇಶ್, ಕುಮಾರ್, ಪ್ರತಾಪ್, ಹನುಮಂತ ರೆಡ್ಡಿ, ನಿಂಗಣ್ಣ, ಶರಣಪ್ಪ, ತೋಷಿಫ್ ಖಾನ್, ನಾಗೇಶ್ ಸಿಬ್ಬಂದಿಯವರು ಈ ದಾಳಿಗೆ ಸಹಕಾರ ನೀಡಿದರು.
0 Comments