Ticker

6/recent/ticker-posts

Ad Code

Responsive Advertisement

ಉತ್ತರಪ್ರದೇಶ: ರೈತರ ಮೇಲೇ ಕಾರು ಹರಿಸಿರುವ ಘಟನೆಗೆ ಖಂಡನೆ

ಬಳ್ಳಾರಿ ಅ 05. ಅಕ್ಟೋಬರ್ 3, 2021ರಂದು ಉತ್ತರಪ್ರದೇಶದ ಲಕ್ಕೀಂಪುರ ಕೇರಿ ಎಂಬ ಜಾಗದಲ್ಲಿ ಕೇಂದ್ರ ಸರ್ಕಾರದ ರಾಜ್ಯ ಗೃಹ ಸಚಿವರಾದ ಅಜಯ್ ಮಿಶ್ರ, ಅವರ ಮಗ ಆಶಿಶ್ ಮಿಶ್ರ, ಅವರ ಮಾವ ಹಾಗೂ ಬಿಜೆಪಿ  ಗುಂಡಾಗಳು ಹೋರಾಟ ಮಾಡುತ್ತಿದ್ದ ರೈತರ ಮೇಲೆ ಕಾರು ಹರಿಸಿ ಕನಿಷ್ಠ 8 ರೈತರ ಬಲಿ ತೆಗೆದುಕೊಂಡಿರುವುದನ್ನು  ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಅಖಿಲ ಭಾರತ ಸಮಿತಿ  ಅತಿ ಉಗ್ರವಾಗಿ ಖಂಡಿಸುತ್ತದೆ. 

ಈ ಘೋರ ಘಟನೆಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ವಿಧಿಸಿ, ಸಂತ್ರಸ್ತ ಕುಟುಂಬದವರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಎಐಎಂಎಸ್ಎಸ್ ಅಖಿಲಭಾರತ ಸಮಿತಿಯು ಆಗ್ರಹಿಸುತ್ತದೆ, ಹಾಗೂ ಕೇಂದ್ರ ಸರ್ಕಾರ ಹೇರಿರುವ 3 ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರೊಂದಿಗೆ ,ಮಹಿಳೆಯರನ್ನೊಳಗೊಂಡು ಇಡೀ ಜನಸಮೂಹ ಅವರ ಜೊತೆ ಕೈಜೋಡಿಸಬೇಕೆಂದು ಕರೆ ನೀಡುತ್ತದೆ ಎಂದುAIMSS ರಾಜ್ಯಾಧ್ಯಕ್ಷೆ ಅಪರ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VARTHAJALA, BELLARY

Post a Comment

0 Comments

Ad Code

Responsive Advertisement