ಬಳ್ಳಾರಿ ಅ 05.ನಗರದ ಆದಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅ07 ರಿಂದ 15 ರ ವರಗೆ ದಸರ ಮಹೋತ್ಸವದ ಕಾರ್ಯಕ್ರಮಗಳು ನಡೆಯುತ್ತವೇ ಎಂದು ಶ್ರೀಕನಕ ದುರ್ಗಮ್ಮ ಪ್ರಧಾನ ಧರ್ಮಕರ್ತರು ಗಾದೆಪ್ಪನವರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪನವರು ಆಯೋಜಿಸಿರುವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಿನಾಂಕ ಅ 07ರಿಂದ 15 ರವರೆಗೆ 9 ದಿನಗಳ ಕಾಲ ರಾತ್ರಿ ಪುರಾಣ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಭಜನೆ ಕಾರ್ಯಕ್ರಮ ಜರುಗುತ್ತದೆ. ದಿನಾಂಕ 11 ರಿಂದ 16 ರ ವರಗೆ ದೇವಿಗೆ ಬಂಗಾರದ ಆಭರಣಗಳ ಅಲಂಕಾರ ಮಾಡಲಾಗುತ್ತದೆ. ದಿನಾಂಕ 12-10-2021 ದುರ್ಗಾಷ್ಟಮಿ, ಇರುತ್ತದೆ. ದಿನಾಂಕ 07-10-2021 ರಿಂದ 15-10-2021 ರವರೆಗೆ ದೇವಸ್ಥಾನದಲ್ಲಿ ದೇವಿಯ 18 ಶಕ್ತಿ ಪೀಠಗಳಲ್ಲಿ 9 ಶಕ್ತಿ ಪೀಠ ದೇವಿಗಳ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಮತ್ತು ಕೋನೆಯ ದಿನದಂದು ನಿಮಜ್ಜನೆ ಮಾಡಲಾಗುವುದು.
ದಿನಾಂಕ 15-10-2021 ರಂದು ಪಲ್ಲಕಿ ಉತ್ಸವ ಮಾಡಲಾಗುವುದು ಈ ಸಮಯದಲ್ಲಿ ಲಂಕದಹನ ಮಾಡುವ ಕಾರ್ಯಕ್ರಮ ಇರುತ್ತದೆ. ದಸರಾ ಮಹೋತ್ಸವ ಅಂಗವಾಗಿ ದಿನಾಂಕ 07-10-2021 ರಿಂದ 15-10-2021 ರವರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಹೋಮ ಹವನ ಮತ್ತು ಪ್ರತಿನಿತ್ಯ ಜರುಗುವ ಸೇವೇಗಳು ಜರುಗುತ್ತದೆ.
ಭಕ್ತರಿಗೆ ಸರಾಗವಾಗಿ ಬರಲು ಆಗಮನ ಮತ್ತು ನಿರ್ಗಮನದ ಕ್ಯೂಲೈನ್ ವ್ಯವಸ್ಥೆ ಮಾಡಲಾಗುವುದು. ಬೆಳಗಿನ ಜಾವದಲ್ಲಿ ದೀಪ ಹಚ್ಚಲು ಬರುವ ಬಕ್ತರಿಗೆ ದೀಪದ ಕಟ್ಟೆ ಮತ್ತು ಬನ್ನಿ ಮಂಟಪ ಮಾಡಲಾಗಿರುತ್ತದೆ.ಅದೇ ಜಾಗದಲ್ಲಿ ಭಕ್ತರು ದೀಪ ಹಚ್ಚಲು ವಿನಂತಿಸಲಾಗಿದೆ ಎಂದು ತಿಳಿಸಿದರು. ಈಸಂಧರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಆನಂದ್, ಲಕ್ಷö್ಮಣ, ದಿವಾಕರ್, ಚ0ದ್ರಕಳಾ, ಶಿವು, ಕೌಶಿಕ್ ಇನ್ನಿತರರು ಉಪಸ್ಥಿತರಿದ್ದರು.
VARTHAJALA, BELLARY
0 Comments