Ticker

6/recent/ticker-posts

Ad Code

Responsive Advertisement

ಸಮಗ್ರ ಕನ್ನಡ ಭಾಷಾ ಮಸೂದೆ ಇಂದಿನ ಅಗತ್ಯ: ಶ್ರೀ ಟಿ. ಎಸ್‌. ನಾಗಾಭರಣ


      ಕರ್ನಾಟಕ ಸರ್ಕಾರವು (ಅಂದಿನ ಮೈಸೂರು ಸರ್ಕಾರ) ಕನ್ನಡವನ್ನು ಆಡಳಿತ ಭಾಷೆಯನ್ನಾಗಿ  ೧೯೬೩ರಲ್ಲಿ ‘ಕರ್ನಾಟಕ ರಾಜ್ಯಾಭಾಷಾ ಅಧಿನಿಯಮ’ವನ್ನು ರೂಪಿಸಿತು. ಅಂದಿನಿಂದ ಇಂದಿನವರೆಗೆ ಕನ್ನಡ ಆಡಳಿತ ಭಾಷೆ ಅನುಷ್ಠಾನ ಗೊಳಿಸಲು ೩೦೦ಕ್ಕೂ ಹೆಚ್ಚು ಆದೇಶಗಳನ್ನು ಹೊರಡಿಸಿರುವುದು ಸರ್ಕಾರದ ಕಾಳಜಿಗೆ ಪುರಾವೆಯಾಗಿದೆ. ಶಿಕ್ಷಣ, ನ್ಯಾಯಲಯ, ಸಾರ್ವಜನಿಕ ವಲಯ ಎಲ್ಲ ರಂಗÀಗಳಲ್ಲಿ ಕನ್ನಡ ಕೇಳುವಂತೆ-ಕಾಣುವಂತೆ ಮಾಡಲು ಸರ್ಕಾರ ಪ್ರಯತ್ನಸಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ದೊರಿಕಿಸಿ ಕೊಡುವ ಸಂಬಂಧ ಮಹಿಷಿ ವರದಿಯಿದೆ. ಈ ಎಲ್ಲ ಆದೇಶಗಳ ಅನುಷ್ಠಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಇದೆ. ಇಂತಹ ಪ್ರಾಧಿಕಾರವನ್ನು ಮೊದಲಿಗೆ ಸ್ಥಾಪಿಸಿದ್ದು ಕರ್ನಾಟಕ. ಸರ್ಕಾವು ಕನ್ನಡದ ಏಳ್ಗೆಗೆ ಇಷ್ಟೆಲ್ಲಾ ಉಪಕ್ರಮ ಅನುಸರಿಸಿದ್ದರೂ ಇಂದಿಗೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ದೊರೆತಿಲ್ಲ. ಅದಕ್ಕೆ ಕಾರಣ ಈ ಅದೇಶಗಳ ಅನುಷ್ಠಾನದ ಹೊಣೆಗಾರಿಕೆ ವಿವಿಧ ಇಲಾಖೆಗಳಡಿಯಿದ್ದು, ಸಮನ್ವಯ ಇಲ್ಲದೆ ಕನ್ನಡ ಅನುಷ್ಠಾನದಲ್ಲಿ ಗೊಂದಲವಿದೆ. ನಾಮಫಲಕಗಲ್ಲಿ ಕನ್ನಡ ಬಳಿಕೆ ಕಡ್ಡಾಯಗೊಳಿಸಿರುವ  ಅದೇಶದ ಅನುಷ್ಠಾನ ಕಾರ್ಮಿಕ ಇಲಾಖೆಯದು. ನಾಮಫಲಕದ ಆದೇಶವು ಕಾರ್ಮಿಕ ಕಾಯಿದೆಯ ಸೇವಾ ನಿಯಮದಡಿ ರೂಪಿತವಾಗಿದೆ. ಕಾರ್ಮಿಕ ಸೇವಾ ನಿಯಮದಡಿ ರೂಪಿತವಾಗಿರುವ ಈ ಆದೇಶವನ್ನು ತಾಂತ್ರಿಕ ಕಾರಣ ನೀಡಿ ನ್ಯಾಯಾಲಯ ೨೦೧೦ರಲ್ಲಿ ರದ್ದು ಮಾಡಿ, ಪ್ರತ್ಯೇಕ ಕಾಯಿದೆ ರೂಪಿಸಬಹುದು ಎಂದಿದೆ. ಇಂದಿಗೂ ಕನ್ನಡ ನಾಮಫಲಕ ಕಾಯಿದೆ ರೂಪಿತವಾಗಿಲ್ಲ.      ಕನ್ನಡಿಗರಿಗೆ ಉದ್ಯೋಗ ಒದಗಿಸುವ ‘ಡಾ. ಸರೋಜಿನಿ ಮಹಿಷಿ ವರದಿ’ಯ ಅನುಷ್ಠಾನ ‘ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಇಲಾಖೆಯಡಿಯಿದೆ. ಶಿಕ್ಷಣದಲ್ಲಿ ಕನ್ನಡ ಕಲಿಕೆಯು ಶಿಕ್ಷಣ ಇಲಾಖೆಯಡಿಯಿದೆ. ಈ ಸಂಗತಿಗಳನ್ನು ಗಮನಿಸದಾಗ ಕರ್ನಾಟಕ ಸರ್ಕಾರಗಳು ಕನ್ನಡವನ್ನು ಎಲ್ಲ ರಂಗಗಳಲ್ಲಿ ಬಳಕೆ ತರಲು ಪ್ರಯತ್ನಸಿರುವ ಸ್ಪÀಷ್ಟ ವಾಗುತ್ತದೆ. ಆದರೆ, ಸಮನ್ವಯದ ಕೊರತೆಯಿಂದ ಗೊಂದಲ ಸೃಷ್ಟಿಯಾಗಿ ಕನ್ನಡ ಕಾಳಜಿಯ ಆದೇಶಗಳು ಅನುಷ್ಠಾನ ಗೊಂಡಿಲ್ಲ. ಬೇರೆ ರಾಜ್ಯಗಳಲ್ಲೂ ಇಂತಹದೇ ಸ್ಥಿತಿ ಉದ್ಭವಿಸಿದಾಗ ಅದಕ್ಕೆ ಪರಿಹಾರವಾಗಿ ಭಾಷಾ ಬಳಕೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಒಟ್ಟುಗೂಡಿಸಿ ‘ಸಮಗ್ರ ಭಾಷಾ ಬಳಕೆ’ ಕಾಯಿದೆ ರೂಪಿಸಿವೆ. 

         ಕರ್ನಾಟಕ ಸಕಾರವು ಕಾನೂನು ರಚನೆ, ಭಾಷಾ ಬಳಕೆ, ಶಿಕ್ಷಣ ಮತ್ತು ಸಂಶೋಧನೆ, ಉದ್ಯೋಗ, ನ್ಯಾಯಾಲಯ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕವಾಗಿ ಎಲ್ಲ ಸ್ತರಗಳಲ್ಲಿ (ನಾಮಫಲಕ, ಜಾಹಿರಾತು ಫಲಕ ಇ.ಇ.) ಕನ್ನಡದ ಬಳಕೆ ಮಾಡಲು ಪ್ರತ್ಯೇಕವಾಗಿ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿ  ‘ಸಮಗ್ರ ಕನ್ನಡ ಭಾಷಾ (ಪ್ರಸಾರ ಮತ್ತು ವ್ಯಾಪಕ ಬಳಕೆ)  ಮಸೂದೆ’ಯನ್ನು ವಿಧಾನ ಸಭಾ ಅಧಿವೇಶನದಲ್ಲಿ ಮಂಡಿಸಿ ಕನ್ನಡ ಬಳಕೆಗೆ ಅಧಿಕೃತ ಮಾನ್ಯತೆ ತಂದು ಕೊಡಬೇಕು.  ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದೆ ಬಂದು ಕನ್ನಡ ಪರ ಚಿಂತಕರು, ಕಾನೂನು ಸಲಹೆಗಾಗರರು, ಸಾಹಿತಿಗಳು, ಹೋರಾಟಗಾರರು, ಕನ್ನಡ ಮತ್ತು ಸಂಸ್ಕೃತಿ ಚಿಂತಕರು, ವಾಣಿಜ್ಯ ಮತ್ತು ಕೈಗಾರಿಕಾ ತಜ್ಞರು, ಭಾಷಾ ವಿಜ್ಞಾನಿಗಳ ಸಮಿತಿ ರಚಿಸಲು ತೀರ್ಮಾನಿಸಿದೆ. ಈ ಕುರಿತು ಚರ್ಚಿಸಿ, ಚರ್ಚಿತ ಅಂಶಗಳನ್ನು ಕ್ರೋಢೀಕರಿಸಿ ಕ್ರಮ ಕೈಗೊಳ್ಳಲು ಮೊದಲ ಪೂರಕ ಸಭೆ ನಡೆಸಲಾಯಿತು.

       ಸದರಿ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ. ಟಿ. ಎಸ್‌. ನಾಗಾಭರಣ ಅಧ್ಯಕ್ಷತೆ ವಹಿಸಿದ್ದು, ಮಾನ್ಯ ರಾಜ್ಯಸಭಾ ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಆದ ಡಾ. ಎಲ್‌. ಹನುಮಂತಯ್ಯ, ಸಕಾರದ ನಿವೃತ್ತ  ಮುಖ್ಯ ಕಾರ್ಯದರ್ಶಿಗಳಾದ ಶ್ರೀ ತ. ಮ. ವಿಜಯ ಭಾಸ್ಕರ್‌, ಮುಖ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವಡಗಿ ಪರವಾಗಿ, ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಸುಬ್ರಮಣ್ಯ, ಖ್ಯಾತ ಸಾಹಿತಿ ಪದ್ಮಶ್ರೀ. ಡಾ. ದೊಡ್ಡರಂಗೇಗೌಡರು, ಸಾಮಾಜಿಕ ಕಾರ್ಯಕರ್ತೆ, ಸಂಸ್ಕೃತಿ ಚಿಂತಕರಾದ ಶ್ರೀಮತಿ ಮಾಳವಿಕ ಅವಿನಾಶ್‌,  ಸಂಸಂದೀಯ ವ್ಯವಹಾರಗಳ ಇಲಾಖೆಯ ನಿವೃತ್ತ ಕಾರ್ಯದರ್ಶಿ, ಶ್ರೀ ದ್ವಾರಕನಾಥ ಬಾಬು, ಕನ್ನಡಪರ ಹೋರಾಟಗಾರರಾದ, ಶ್ರೀ ರಾ. ನಂ. ಚಂದ್ರಶೇಖರ್‌ ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement