ಹೊಸಪೇಟೆ (ವಿಜಯನಗರ) ಅ 18 : ಕೊಪ್ಪಳ, ಬಳ್ಳಾರಿ ಹಾಗು ವಿಜಯಗರ ಜಿಲ್ಲಾ ವ್ಯಾಪ್ತಿಯ ಐದು ಸಾಧಕರು ಅನ್ಮೋಲ್ ರತ್ನ 2021 ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅ.21ಕ್ಕೆ ಮೆಹಬೂಬ್ ನಗರದ ಅನ್ಮೋಲ್ ಸೂಪರ್ ಮಾರ್ಕೆಟ್ ಬಳಿ ಬೆಳಗ್ಗೆ 10 ಗಂಟೆಗೆ ಜರುಗುವ ಅದ್ಧೂರಿ ಅನ್ಮೋಲ್ ಉತ್ಸವ 2021 ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅನ್ಮೋಲ್ ಜೀಯ ಟ್ರಸ್ಟ್ನ ಅಧ್ಯಕ್ಷರಾದ ಎಂ.ಎ.ವಲಿಸಾಬ್ (ಹಕೀಂಸಾಬ್) ತಿಳಿಸಿದ್ದಾರೆ.
ಗಂಗಾವತಿಯ ಕವಿತ ಪ್ರಹ್ಲಾದ್ ದಿಗ್ಗಾವಿ (ಶಿಕ್ಷಣ), ಅರುಣಾ ನರೇಂದ್ರ ಕೊಪ್ಪಳ (ಸಾಹಿತ್ಯ) ಗುಂಡಿ ರಮೇಶ್ ಹೊಸಪೇಟೆ (ಬಹು ಕ್ಷೇತ್ರ ಸಾಧನೆ), ಬಾವಿ ಶಂಕ್ರಪ್ಪ ಕಟ್ಟೆಪ್ಪ ಮಾವಿನಹಳ್ಳಿ ( ಅಂತಾರಾಷ್ಟಿಯ ಕ್ರೀಡೆ) ಹಾಗು ಎಸ್.ಬಿ. ಸಿದ್ದಲಿಂಗಯ್ಯ ವೀರಭದ್ರಯ್ಯ ಸಂಕ್ಲಾಪುರ ( ಅಂತಾರಾಷ್ಟಿಯ ಕ್ರೀಢೆ) ಇವರು ಆಯ್ಕೆಗೊಂಡಿದ್ದಾರೆ.ಆಯ್ಕೆಗೊ0ಡ ಸಾಧಕರಿಗೆ ಬೆಳ್ಳಿ ಪದಕ, ಕಲ್ಲಿನ ರಥ ಮತ್ತು ಪ್ರಶಸ್ತಿ ಪ್ರತ್ರ ನಿಡಲಾಗುವುದು, ಸಾಧಕರಿಗೆ ಸ್ಪೂರ್ತಿ ನೀಡುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಇದೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಕಲೆ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೂ ಬಹುಮಾನ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.
0 Comments