Ticker

6/recent/ticker-posts

Ad Code

Responsive Advertisement

ಮಹಾದಾಸೋಹಿ ಶ್ರೀ ಶರಣ ಸಕ್ಕರೆ ಕರಡೀಶ ಚಲನಚಿತ್ರ ಪ್ರಾರಂಭೋತ್ಸವ

ಬಳ್ಳಾರಿ, ಅ 18: ದಿನಾಂಕ 17ರ ಭಾನುವಾರ ಬೆ.11 ಘಂಟೆಯ ಶುಭಮುಹೂರ್ತದಲ್ಲಿ ಬಳ್ಳಾರಿಯ ಮರಿಸ್ವಾಮಿ ಮಠದಲ್ಲಿ ಶ್ರೀ ಶರಣ ಸಕ್ಕರೆ ಕರಡೀಶರವರ ಚಲನಚಿತ್ರದ ಪ್ರಾರಂಭೋತ್ಸವವು ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಕಲ್ಯಾಣ ಮಹಾ ಸ್ವಾಮಿಗಳು ಬಳ್ಳಾರಿ ಹಾಗೂ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಮಹಾಂತ ಸ್ವಾಮಿಗಳ ಸೌದತ್ತಿ ಇವರ ಸಮ್ಮುಖದಲ್ಲಿ ಶ್ರೀಮಾನ್ ಹಾವಿನಳ್ ಬಸವರಾಜ್ ಅಧ್ಯಕ್ಷರು, ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬಳ್ಳಾರಿ ಅವರ ಕ್ಲಾಪ್ ಮೂಲಕ ಪ್ರಾರಂಭವಾಯಿತು.

ಈ ಸಮಾರಂಭಕ್ಕೆ ಮಾಜಿ ಮಂತ್ರಿಗಳಾದ ಅಲ್ಲಂ ವೀರಭದ್ರಪ್ಪನವರು, ಸಹಕಾರಿಯ ಉಪಾಧ್ಯಕ್ಷರಾದ ಗುಡೆಕೋಟೆ ನಾಗರಾಜ್, ನಿರ್ದೇಶಕರುಗಳಾದ ಡಾ. ಸೋಮೇಶ್ವರ ಗಡ್ಡಿ, ಕಲ್ಗುಡಿ ಮಂಜುನಾಥ್ ಬಿ.ಎರಿಸ್ವಾಮಿ, ಚಂದ್ರೇಗೌಡ, ವೀರೇಶಪ್ಪ,ಅಮರೇಶಪ್ಪ, ಫಂಕ್ಷನಲ್ ಡೈರೆಕ್ಟರ್ ಕೆ.ವಾಮಣ್ಣ, ಸಿ ಇ ಒ ಶಂಭುಲಿ0ಗಪ್ಪ ಅದಲ್ಲದೆ ಮೃತ್ಯುಂಜಯ ರುಮಾಲೆ, ಟಿ. ಸಿ. ಗೌಡ, ಟಿ.ವಿರುಪಾಕ್ಷಗೌಡ, ಶ್ರೀದೇವಿ, ರಾಮನ ಗೌಡ ಪಾಟೀಲ್, ರೇವತಿ ಪಾಟೀಲ್ ಮತ್ತು ಮಕ್ಕಳು, ಬಿ. ಎಂ. ಬಸವರಾಜ್, ಬಾದಾಮಿ ಕರಿಬಸವರಾಜ, ಕೆ. ಚನ್ನಪ್ಪ ಅಧ್ಯಕ್ಷರು, ರಾಘವ ಕಲಾಮಂದಿರ, ನಾಗನಗೌಡ, ಕೇಣಿ ಬಸಪ್ಪ, ಕಲ್ ಕಂಬ ಮಲ್ಲಿಕಾರ್ಜುನ ಗೌಡ, ಮೆಟ್ರಿ ಮೃತ್ಯುಂಜಯ, ಹಾವಿನಳ್ ಶರಣಬಸಪ್ಪ, ಪಲ್ಲೇದ ಪಂಪಾಪತಿ, ಎನ್ ಬಸವರಾಜ್, ಪಲ್ಲೇದ್ ದೊಡ್ಡಪ್ಪ, ಜೀರ್ ಗುರುಮೂರ್ತಿ, ಮರಿಸ್ವಾಮಿ ಮಠದ ರೇಣುಕಸ್ವಾಮಿ, ಮಟಮ್ ನಂದೀಶಸ್ವಾಮಿ, ಮರೀದೇವ ಸ್ವಾಮಿ, ವಾಗೀಶ ಸ್ವಾಮಿ, ಡಿ. ಚಂದ್ರಮೌಳಿ, ಕೋರಿ ವಿರುಪಾಕ್ಷ, ಗುತ್ತಿಗನೂರು ವಿರುಪಾಕ್ಷಿ ಗೌಡ, ಮಸೂದೆ ಪುರ ಸಿದ್ದರಾಮನಗೌಡ, ರೂಪನಗುಡಿ ಬಸವರಾಜ್, ವೀರಶೈವ ತರುಣ ಸಂಘ, ಕರಡೀಶ ಕಲ್ಯಾಣ ಟ್ರಸ್ಟ್, ಸ್ಥಳೀಯ ಕಲಾವಿದರಾದ ರಾಮೇಶ್ವರಸ್ವಾಮಿ, ರಘು, ಲಾಲಾರೆಡ್ಡಿ, ವೀಣಾ ಕುಮಾರಿ, ರಾಜು, ಮಠಮ್ ಶಿವಲಿಂಗ ಶಾಸ್ತ್ರಿಗಳು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಶ್ರೀ ರಮೇಶ್ ಗೌಡ ಪಾಟೀಲ್ ಕರಡೀಶ ಪಾತ್ರದಲ್ಲಿ, ಶ್ರೀಪುರುಷೋತ್ತಮ ನಿರ್ದೇಶಕರು, ಮುತ್ತುರಾಜ್ ಹಾಗೂ ಸಂಗಡಿಗರು ಮತ್ತು ನಿರ್ಮಾಪಕಿಯರಾದ ಉಷಾ, ಶ್ರೀಮತಿ ಗಂಗಮ್ಮ ಪಾಟೀಲ್ ಅನೇಕ ಗಣ್ಯಮಾನ್ಯರು, ಮಹಿಳೆಯರು, ಮಾತೆಯರು ಕರಡೀಶರವರು ನಿರ್ಮಿಸಿದ ವಿಭೂತಿ ಕಣಜಕ್ಕೆ ಪೂಜೆ ಸಲ್ಲಿಸಿದರು.

Varthajala, Malleshwaram, Bengaluru

Post a Comment

0 Comments

Ad Code

Responsive Advertisement