ಮಧುಗಿರಿ - ಪ್ರತಿಯೊಬ್ಬರು ನಮ್ಮ ದೇಶದ ಕಾನೂನಿನ ಚೌಕಟ್ಟಿನೊಳಗೆ ಜೀವಿಸಿ ಕಾನೂನು ಪಾಲಿಸಿ ರಾಷ್ಟ್ರ ರಕ್ಷಿಸಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾದೀಶರಾದ ಎಚ್.ಎ.ಶಿಲ್ಪ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗರೀಕರೆಲ್ಲರಿಗೂ ಕಾನೂನಿನ ಅರಿವು ತಿಳಿದಾಗ ಮಾತ್ರ ಅಪರಾದ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ಪೆÇೀಕ್ಸೋ ಕಾಯ್ದೆಯಡಿ 18 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌಜರ್Àನ್ಯ,ಕಿರುಕುಳ ನೀಡುವುದು ಅಕ್ಷಮ್ಯ ಅಪರಾದ, ಸಂಬಂಕರಿಂದಲೇ ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಜರುಗುತ್ತಿವೆ. ನಮಗೆ ಅರಿವಿಲ್ಲದಂತೆ ಮಗುವಿಗೆ ಚಾಕಲೇಟ್, ಬಿಸ್ಕೆಟ್ ಕೊಡುವ ನೆಪದಲ್ಲಿ ಹೆಣ್ಮುಮಗುವಿನ ಮನಸ್ಸನನ್ನು ಸಳೆದು ಲೈಂಗಿಕ ದೌಜರ್Àನ್ಯ, ಸಾಗಾಟನಡೆಯುತ್ತಿವೆ. ಆದ್ದರಿಂದ ಇಂತಹ ಕೃತ್ಯಗಳನ್ನು ತಡೆಗಟ್ಟಲು ಪೆÇೀಷಕರು ಮುತುವರ್ಜಿ ವಹಿಸಿ ಅಪರಾದ ತಪ್ಪಿಸಬೇಕು ಎಂದರು.
ಅಧಿಕ ಹಿರಿಯ ಸಿವಿಲ್ ನ್ಯಾಯಾೀಶ ಸಾಗರ್ ಗುರುಗೌಡ ಪಾಟೀಲ್ ಮಾತನಾಡಿ, ರಾಷ್ಟ್ರಪಿತ ಗಾಂಜಿ ಅವರ ವಿಚಾರ -ಧಾರೆಗಳು ಎಂದೆಂದಿಗೂ ಜೀವಂತ, ಅವರ ಆದರ್ಶ-ತತ್ವಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಗೋಹತ್ಯ, ಭ್ರೂಣ ಹತ್ಯೆ, ಬಾಲ್ಯ ವಿವಾವದಂತಹ ಅಪರಾದಗಳನ್ನು ತಡೆಯಬೇಕು. ಬಾಲ್ಯದಲ್ಲಿ ಮಕ್ಕಳಿಂದ ದುಡಿಸಿಕೊಳ್ಳುವುದು ಅಪರಾದ ಎಂದ ಅವರು, 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು ಎಂದರು.
ಮಧುಗಿರಿ ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ವಕೀಲರಾಗಿದ್ದ ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಈ ದೇಶಕ್ಕೆ ತನ್ನದೇ ಆದ ಸ್ವಾತಂತ್ರ್ಯವಿದ್ದರೂ ಸದ್ಬಳಕೆಯಾಗುತ್ತಿಲ್ಲ, ಸಂವಿಧಾನ ಹೊಂದಿದ್ದರೂ ಸಹ ದುರಾಡಳಿತ, ಅನ್ಯಾಯ, ಆರಾಜಕತೆ ನಡೆಯುತ್ತಿರುವುದು ವಿಷಾದ ಎಂದರು.
ಪ್ರಧಾನ ಸಿವಿಲ್ ನ್ಯಾಯಾೀಶೆ ಹವಳದ ಸೌಮ್ಯಶ್ರೀ, ಸಾಹಿತಿ ಪೆÇ್ರ.ಮ.ಲ.ನ.ಮೂರ್ತಿ, ಪುರಸಭೆ ಮುಖ್ಯಾಕಾರಿ ಎ.ನಜ್ಮಾ, ವಕೀಲರ ಸಂಘದ ಉಪಾಧ್ಯಕ್ಷ ಎಂ.ಮಹೇಶ್, ನೋಟರಿ ಲಕ್ಷ್ಮೀನಾರಾಯಣಪ್ಪ, ಎಸ್.ರಂಘುನಾಥ್ ರೆಡ್ಡಿ, ಪುರಸಭೆ ಅಧಿಕಾರಿ ವರಲಕ್ಷ್ಮೀ ಹಾಗೂ ಮುಂತಾದವರು ಇದ್ದರು.

0 Comments