ನವದೆಹಲಿ, ಅಕ್ಟೋಬರ್ 01: ಇಂಧನ ಬೆಲೆಯ ಏರಿಕೆಯ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ, ಅಕ್ಟೋಬರ್ 1 ರಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದಾಖಲೆಯ ಹಣದುಬ್ಬರಕ್ಕೆ ಪೆಟ್ರೋಲ್ ಬೆಲೆ ಕಾರಣವಾಗಿದೆ. ದಾಖಲೆಯ ಪೆಟ್ರೋಲ್ ಬೆಲೆಗೆ ಕೇಂದ್ರ ಸರ್ಕಾರವೇ ಹೊಣೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ ₹ 100 ಮತ್ತು ₹ 90 ದಾಟಿದೆ ಎಂದೂ ಅವರು ತಿಳಿಸಿದರು.
ಏತನ್ಮಧ್ಯೆ, ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ "ಮೋದಿ ಸರ್ಕಾರವು ಸಾಮಾನ್ಯ ಜನರ ಜೀವನವನ್ನು ಕಷ್ಟಕರವಾಗಿಸಿದೆ" ಎಂದು ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದು, "ಸರ್ಕಾರ ರಚನೆಯಾದ್ದಾಗಿನಿಂದಲೂ ಬೆಲೆಗಳು ಹೆಚ್ಚಾಗುತ್ತಿವೆ." ಇಂಧನ ಬೆಲೆಗಳು ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ, ಪೆಟ್ರೋಲ್ ಬೆಲೆ 25 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 101.64 ರಿಂದ 101.89 ಮತ್ತು ಡೀಸೆಲ್ 30 ಪೈಸೆ, ಪ್ರತಿ ಲೀಟರ್‌ಗೆ ₹ 89.87 ರಿಂದ 90.17 ಕ್ಕೆ ಏರಿಕೆಯಾಗಿದೆ.
0 Comments