Ticker

6/recent/ticker-posts

Ad Code

Responsive Advertisement

ತೂಬಗೆರೆ ಯೂಥ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ

 ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ತೂಬಗೆರೆ ಯೂಥ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಸಲುವಾಗಿ 10  ಕಿಲೋಮೀಟರ್ ಓಟ ತೂಬಗೆರೆ ಯಲ್ಲಿ ಆಯೋಜಿಸಲಾಗಿತ್ತು



ಯುವಕರಿಗೆ 10 ಕಿ.ಮೀ ಹಾಗೂ ಯುವತಿಯರಿಗೆ 5 ಕಿ.ಮೀ ಓಟಕ್ಕೆ ಮಾನ್ಯ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ರವರು ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಹತ್ತು ಕಿಲೋ ಮೀಟರ್ ಓಟದಲ್ಲಿ ನೂರಕ್ಕೂ ಹೆಚ್ಚು ಯುವಕರು ಹಾಗೂ ಐದು ಕಿಲೋಮೀಟರ್ ಓಟದಲ್ಲಿ ಮೂವತ್ತಕ್ಕೂ ಹೆಚ್ಚು ಯುವತಿಯರು ಭಾಗವಹಿಸಿದ್ದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಮ್ಯಾರಥಾನ್ ಪರಿಚಯದ ಸಲುವಾಗಿ ನಡೆಯುತ್ತಿರುವ ಕಾರ್ಯಕ್ರಮ ಸದುದ್ದೇಶದಿಂದ ಕೂಡಿದೆ ಎಂದು ಶಾಸಕರು ತೂಬಗೆರೆ  ಯೂಥ್ ಸ್ಪೋರ್ಟ್ಸ್ ಸಂಘಟನೆಯನ್ನು ಅಭಿನಂದಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ  ಅಪ್ಪಯ್ಯ,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಗೀತಾರವರು, ಕೆಪಿಸಿಸಿ ಸದಸ್ಯರಾದ ಮುನಿರಾಜುರವರ   ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ್ ಬಾಬು  ರವರು ಸದಸ್ಯರಾದ ರವಿಸಿದ್ದಪ್ಪ , ಕೃಷ್ಣಪ್ಪ, ಮುನಿ ಕೃಷ್ಣಪ್ಪ, ವೆಂಕಟೇಶ್. 

ಮುಖಂಡರಾದ ಗೌರೀಶ್, ಮಂಜುನಾಥ್, ಸಂದೀಪ್ ಹಾಗೂ ಮುಖಂಡರುಗಳು ಭಾಗ ವಹಿಸಿದ್ದರು.

ಮಾಜಿ ದೈಹಿಕ ನಿರ್ದೇಶಕರಾದ ಅಂತ ಅಮರನಾಥ ರವರು

ತೂಬಗೆರೆ ಯೂಥ್ ಸ್ಪೋರ್ಟ್ಸ್ ಕ್ಲಬ್ ಸಂಘಟಕರಾದ ಉದಯ್ ಆರಾಧ್ಯ ಹಾಗೂ ಯೋಧರಾದ ಗೋಪಾಲ್ ರವರು ಭಾಗವಹಿಸಿದ್ದರು.

ವರದಿ  ಜೆ ಮಂಜುನಾಥ


Post a Comment

0 Comments

Ad Code

Responsive Advertisement