ಕನ್ನಡದ ವೀರಕೇಸರಿ ಗಾನಗಂಧರ್ವ ಡಾಕ್ಟರ್ ರಾಜಕುಮಾರ್ ತೃತೀಯ ಪುತ್ರರಾದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪುನೀತ್ ರಾಜಕುಮಾರ್ ರವರು ನೆನ್ನೆ ಮಧ್ಯಾಹ್ನ 12 ಗಂಟೆಗೆ ದೈವಾಧೀನ ರಾಗಿರುತ್ತಾರೆ.ಇಂತಹ ನೆಚ್ಚಿನ ನಟನನ್ನು ಕಳೆದುಕೊಂಡ ನಮ್ಮ ನಾಡಿನ ಜನತೆಯ ದುರ್ದೈವ 46ರ ಕಿರಿಯ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ರಾಜ್ಯ ಬರಿಸಲಾಗದ ನಷ್ಟವುಂಟಾಗಿದೆ.
ಬೆಟ್ಟದ ಹೂವು,ಯಾರಿವನು, ಚಲಿಸುವ ಮೋಡಗಳು ಇನ್ನೂ ಅನೇಕ ಸಿನಿಮಾಗಳ ಮುಖಾಂತರ ಜನ ಪ್ರೇಕ್ಷಕರ ಅಭಿಮಾನಿಗಳಲ್ಲಿ ದೊಡ್ಡ ನಟನಾಗಿ ಬೆಳೆದುನಿಂತು ಇಡೀ ಚಿತ್ರರಂಗ ಗರ್ವ ಪಡುವ ಹಾಗೆ ನಟನೆಯ ನಟಸಾರ್ವಭೌಮ ನಾಗಿ ಬೆಳೆದು ನಿಂತು ಇವತ್ತು ನಮ್ಮನ್ನು ಬಿಟ್ಟು ಆಗಲಿದ್ದಾರೆ ಇಂತಹ ನೆಚ್ಚಿನ ನಟನನ್ನು ಕಳೆದುಕೊಂಡು ಪುನೀತ್ ರಾಜಕುಮಾರ್ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಆ ಭಗವಂತನು ಕೊಡಬೇಕೆಂದು ಚಿಂತಾಮಣಿ ನಗರದ ಪುನೀತ್ ಅಭಿಮಾನಿಗಳ ವೇದಿಕೆ ಇಂದು ಮುನೀಸಿಪಲ್ ಕಂಪ್ಲೆಕ್ಸ್ ನಲ್ಲಿ ಶ್ರೀ ಲೋಕಿ ರವರ ಆದ್ಯತೆಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು ಶ್ರದ್ದಾಂಜಲಿ ಸಭೆಯ ಉಪಸ್ಥಿತಿಯಲ್ಲಿ ದೇವನಹಳ್ಳಿ ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕರಾದ ಮತ್ತು ಪತ್ರಕರ್ತರ ರಾಷ್ಟ್ರೀಯ ಸಂಘಟನೆಯಾದIFMS ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿಗಳಾದ N. ಮಧುಕುಮಾರ್ ಹಿರಿಯ ಮುಖಂಡರುಗಳಾದ ದಾಸರಿ ವೆಂಕಟೇಶ್, ನಡೆಯುವ ನಡೆಯುವ ಕಾರ್ಮಿಕರ ಘಟಕದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಕೊನಪ್ಪಲ್ಲಿ ಕೋದಂಡ ಚಿಕನ್ ಮರ್ಚೆಂಟ್ ವಸಂತ್ ಕುಮಾರ್ ಹಾಗೂ ಇನ್ನು ಅಭಿಮಾನಿಗಳು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿರುತ್ತಾರೆ.
0 Comments