Ticker

6/recent/ticker-posts

Ad Code

Responsive Advertisement

ಕಬ್ಬು ನುರಿಸುವ ಹಂಗಾಮ ಪ್ರಾರಂಭಿಸಲುತೀರ್ಮಾನ

ಕಬ್ಬು ಬೆಳವಣಿಗೆ ನಿಸರ್ಗದ ನೀರು, ಹವಾಮಾನದ ಮತ್ತುರೈತರ ಶ್ರಮದ ಹಾಗೂ ಕಾರ್ಖಾನೆಗಳು ಸಹಕಾರದ ಮೇಲೆ ಅವಲಂಬಿತವಾಗಿದೆ.ಅದರಲ್ಲಿಯೂಉತ್ತರಕರ್ನಾಟಕದಲ್ಲಿಕಬ್ಬಿನಿAದ ಹೆಚ್ಚಾಗಿ ಸಕ್ಕರೆ ಹಾಗೂ ನಾರಿನ ಅಂಶ ಇಳುವರಿ ನೈಸರ್ಗಿಕವಾಗಿ“ಡಿಸೆಂಬರ್ ನಿಂದ ಮಾರ್ಚ್” ತಿಂಗಳಲ್ಲಿ ಮಾತ್ರದೊರೆಯುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭ ಮಾಡುವುದರಿಂದಕಬ್ಬು ಸಂಪೂರ್ಣ ಮಾಗದೆ (ಒಚಿಣuಡಿeಜ) ಇದ್ದು ನೀರಿನ ಪ್ರಮಾಣ ಹೆಚ್ಚುಗಿದ್ದು , ಸಕ್ಕರೆ ಅಂಶ ಅತೀಕಡಿಮೆಇದ್ದು, ಕೇವಲ 8% ರಿಕವರಿ ಬರುತ್ತದೆ. ನಾರಿನ (ಫೈಬರ್) ಅಂಶ ಕಡಿಮೆಇರುವಕಾರಣ ವಿದ್ಯುತ್ ಸಹ ಕಡಿಮೆ ಮ್ರಮಾಣದಲ್ಲಿಉತ್ಪಾದನೆಯಾಗುತ್ತದೆ.ಎಥೆನಾಲ್‌ದ್ವವ್ಯ ಹೊರಡುವಿಕೆಯುಕಡಿಮೆಯಾಗಿದೇಶಕ್ಕೆ ಹಾನಿಯಾಗುತ್ತದೆ ಮತ್ತುಕಬ್ಬಿನ ಬೆಲೆ ಸಕ್ಕರೆಅಂಶದಆಧಾರದ ಮೇಲೆ ಇರುವುದರಿಂದ ಮತ್ತು ಬೇಗನೆ ಪ್ರಾರಂಭ ಮಾಡುವುದರಿಂದ ಪ್ರತಿಎಕರೆಗೆ 8 ರಿಂದ 10 ಟನ್‌ಕಬ್ಬಿನ ಉಪಲಬ್ದ ಕಡಿಮೆಯಾಗಿರೈತರಿಗೆಎಲ್ಲದೃಷ್ಥಿಯಿಂದ ಹಾನಿಯಾಗುತ್ತದೆ ಹಾಗೂ ಕಾರ್ಖಾನೆಗಳಿಗೂ ದೊಡ್ಡ ಪ್ರಮಾಣದಲ್ಲಿ ಹಾನಿ ಆಗುತ್ತದೆ.

ಈ ಎಲ್ಲಾ ಅಂಶಗಳನ್ನ  ಮನದಟ್ಟಾಗಿ ಮನವರಿಕೆ ಮಾಡಿಕೊಡಲು ಹಾಗೂ ಸಕ್ಕರೆ ಉದ್ದಿಮೆ ಸಂಕಷ್ಟದಿ0ದ ಹೊರತರಲು“ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಕರ್ನಾಟಕ)”ಉತ್ತರಕರ್ನಾಟಕದಎಲ್ಲಾ ಸಹಕಾರಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ, ಅಧ್ಯಕ್ಷರ, ನಿರ್ದೇಶಕರ ಸಭೆಯನ್ನುಇತ್ತೀಚೆಗೆ ಬೆಳಗಾವಿಯಲ್ಲಿ ನಡೆಸಿ  ಆಗಬಹುದಾದ ಹಾನಿ ಗಳ ಬಗ್ಗೆ ಚರ್ಚಿಸಿ ರೈತರ ಹಿತದೃಷ್ಠಿಯಿಂದ ಸಕ್ಕರೆಕಾರ್ಖಾನೆಗಲು ಪ್ರಸ್ತುತ ವರ್ಷದಲ್ಲಿಅಕ್ಟೋಬರ್ ತಿಂಗಳಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭ ಮಾಡದೆ ನವಂಬರ್‌ ಒ0ದರಿ0ದ ಪ್ರಾರಂಭ ಮಾಡುವುದು ಸೋಕ್ತ ಎಂದು ತಿರ್ಮಾನಿಸಿದೆ.

ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಶ್ರೀ ಶಿವಶಕ್ತಿ ಸಕ್ಕರೆಕಾರ್ಖಾನೆಯ ಶ್ರೀ ಪ್ರಭಾಕರಕೋರೆ, ನಿರಾಣಿ ಸಮೂಹ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷ ಮುರುಗೇಶ ನಿರಾಣಿ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಜಗದೀಶಗುಡಗುಂಟಿ, ಸತೀಶ ಶುಗರ‍್ಸ್ ಕಾರ್ಖಾನೆಗಳ ಶ್ರೀ ಸತೀಶ ಜಾರಕಿಹೊಳಿ, ಗೋದಾವರಿ ಸಕ್ಕರೆಕಾರ್ಖಾನೆಯ ಸಮೀರ ಸೋಮಯ್ಯ, ಶ್ರೀ ರೇಣುಕಾ ಶುಗರ‍್ಸ್ ಸಮೂಹ ಕಾರ್ಖಾನೆಗಳು ಕಾರ್ಯ ನಿರ್ವಾಹಕ ನಿರ್ದೇಶಕ ವಿಜಯೇಂದ್ರ ಸಿಂಗ್, ವಿಶ್ವರಾಜ್ ಶುಗರ‍್ಸ್ ಕಾರ್ಖಾನೆಯ ಮುಖೇಶ್, ಜೆಮ್ಸ್ ರ್ಖಾನೆಯ ಶ್ರೀ ಜವಾಹರಲಾಲ್‌ ದೊಡ್ಡಣ್ಣನವರ, ಐಸಿಪಿಎಲ್ ಕಾರ್ಖಾನೆಯ  ಜೋಶಿ, ಎಂ.ಕೆ.ಹುಬ್ಬಳ್ಳಿ ಕಾರ್ಖಾನೆಯ ನಿರ್ದೇಶಕರು, ಚಿಕ್ಕೋಡಿದೂಧ್‌ಗಂಗಾಕಾರ್ಖಾನೆಯ ಶ್ರೀ ದೇಸಾಯಿ, ಅಥಣಿ ಶುರ‍್ಸ್ ನಿರ್ದೇಶಕರಾದಯೋಗೇಶ್ ಪಾಟೀಲ್, ಶಿರಗುಪ್ಪಿ ಶುಗರ‍್ಸ್ ನ ಡಾ. ರಮೇಶ್‌ದೊಡ್ಡಣ್ಣನವರ, ಉಗಾರ್ ಶುಗರ‍್ಸ್ ನ ಶ್ರೀ ಅವಿನಾಶ್ ಶಿರಗಾಂವಕರ್ ಹಾಗು ಅನೇಕ ಸಕ್ಕರೆ ಕಾರ್ಖಾನೆಗಳ  ಮಾಲೀಕರುಗಳು, ಅಧ್ಯಕ್ಷರುಗಳು ಹಾಗೂ ನಿರ್ದೇಶಕರುಗಳು ಭಾಗವಹಿಸಿ, ವಿಷಯವನ್ನು ಕೂಲಂಕುಷವಾಗಿ ಚರ್ಚಿಸಿದ ನಂತರ 2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮವನ್ನುಅಕ್ಟೋಬರ್ ತಿಂಗಳಲ್ಲಿ ಯಾರೂ ಪ್ರಾರಂಭಿಸಬಾರದೆ0ದು ಮತ್ತು 1-11-2021ರ ನಂತರ ಪ್ರಾರಂಭಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ವಿಷಯವನ್ನು ಮುಖ್ಯ ಮಂತ್ರಿಗಳಿಗೆ ಹಾಗೂ ಮಾನ್ಯ ಸಕ್ಕರೆ ಸಚಿವರಿಗೆ ಮನದಟ್ಟು ಮಾಡಿಕೊಟ್ಟುಉತ್ತರಕರ್ನಾಟಕದ ಸಕ್ಕರೆ ಕಾರ್ಖಾನೆಗಳನ್ನು ದಿನಾಂಕ 01-11-2021ರ ನಂತರ ಪ್ರಾರಂಭಿಸಲುರಾಜ್ಯ ಸರಕಾರದಿಂದಆದೇಶವನ್ನು ಹೊರಡಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮಾನ್ಯ ಮುಖ್ಯ ಮಂತ್ರಿಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಈ ಸಂಬAಧಆದಷ್ಟು ಬೇಗನೆ ಸರ್ಕಾರಿಆದೇಶವನ್ನು ಹೊರಡಿಸುವುದಾಗಿ ಭರವಸೆಯನ್ನು ನೀಡಿರುತ್ತಾರೆ.

ಆದ್ದರಿಂದ ದೇಶದ ಹಿತಕ್ಕಾಗಿ, ರೈತರ ಹಿತಾಸಕ್ತಿಗಾಗಿ, ಕಾರ್ಖಾನೆಗಳ ಉಳಿವಿಗಾಗಿ ಉತ್ತರ ಕರ್ನಾಟಕದ ಎಲ್ಲಾ ಸಹಕಾರಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳು ಬರುವಕಬ್ಬು ನುರಿಸುವ 2021-22ನೇ ಹಂಗಾಮವನ್ನು ದಿನಾಂಕ 01-11-2021ರ ನಂತರ ಪ್ರಾರಂಭಿಸಬೇಕೆ0ದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಕರ್ನಾಟಕ) ಅಧ್ಯಕ್ಷ ಜಗದೀಶ ಗುಡಗುಂಟಿಯವರು ತಿಳಿಸಿದರು. 

Post a Comment

0 Comments

Ad Code

Responsive Advertisement