ಮಧುಗಿರಿ : ಕೋವಿಡ್-19 ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಈ ಭಾರಿ ವಿಶೇಷವಾಗಿ ರಾಜ್ಯೋತ್ಸವ ಆಚರಣೆ ಮಾಡಲು ತಾಲೂಕು ಆಡಳಿತ ಸಿದ್ಧವಾಗಿದೆ ಎಂದು ತಹಶೀಲ್ದಾರ್ ವೈ.ರವಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ 66ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು. ನೂತನವಾಗಿ ಸರ್ಕಾರದ ಆದೇಶದಂತೆ ಅ.24 ರಿಂದ 30 ರವರೆಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅ.28 ರಂದು ಬೆಳಿಗ್ಗೆ 11 ಗಂಟೆಗೆ ವರಕವಿ ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವ, ಕೆ.ಎಸ್.ನಿಸಾರ್ ಅಹ್ಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಗೀತ ರಚನೆಗಾರ ಡಾ.ಹಂಸಲೇಖ ರಚಿತ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಏಕಕಾಲದಲ್ಲಿ ಹಾಡಲಾಗುವುದು. ಆಡುವ ಮಾತುಗಳು, ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಬಳಕೆ, 5 ನಿಮಿಷಗಳ ಕಾಲ ಕನ್ನಡ ಹೊರತು ಇತರೆ ಭಾಷೆ ಬಳಸದೆ ಮಾತಾಡುವ ಸ್ಪರ್ಧೆ ಆಯೋಜನೆ ಮಾಡಿ ಗಡಿಭಾಗದಲ್ಲಿನ ಕಲೆ, ಸಂಸ್ಕøತಿ ಹಾಗೂ ಭಾಷೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುವುದು ಎಂದರು
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 18 ವರ್ಷದÉೂಳಗಿನ ಮಕ್ಕಳಿಗೆ ಅವಕಾಶ ನೀಡುತ್ತಿಲ್ಲ. ಎಲ್ಲರಿಗೂ ಲಸಿಕೆ ಕಡ್ಡಾಯವಾಗಿದೆ. ಇದರೊಂದಿಗೆ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡುವವರು ನಮ್ಮ ಕಚೇರಿಗೆ ಬಂದು ಸಹಾಯ ಮಾಡಬಹುದು ಎಂದಾಗ ಸಭೆಯಲ್ಲಿದ್ದ ಕನ್ನಡ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಕೇಬಲ್ ಸುಬ್ಬು 1 ಸಾವಿರ ನೀಡಿದ್ದು, ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಹೆಚ್ಚಿನ ನೆರವು ನೀಡಲಾಗುವುದು ಎಂದು ಅಧ್ಯಕ್ಷ ತಿಮ್ಮರಾಜು ತಿಳಿಸಿದರು.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸಿಂಹಪಾಲು ನೀಡಲು ಸಮಿತಿ ತೀರ್ಮಾನಿಸಿದ್ದು, ಇದರೊಂದಿಗೆ 10 ಚಿನ್ನದ ಪದಕ ಪಡೆದ ತಾಲೂಕಿನ ಪ್ರತಿಭೆ ಜಿ.ಮೋನಿಕಾ, ಕರೊನಾ ಶವಸಂಸ್ಕಾರ ಮಾಡಿದ ಸಿಕಂದರ್, ಕರೊನಾ ಸಮಯದಲ್ಲೂ ಕೀಳು ಮೂಳೆಗೆ ನಾಟಿ ವೈದ್ಯ ಚಿಕಿತ್ಸೆ ನೀಡಿದ ಜನಾರ್ದನ್, ಕೋವಿಡ್ ಕೇಂದ್ರದಲ್ಲಿನ ಶೌಚ ಸ್ವಚ್ಚತೆಗಾರರಾದ ಮಂಜುಳಾ, ಮಾರಪ್ಪ, ತಾಲೂಕು ಆಡಳಿತಕ್ಕೆ ಕರೊನಾ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನೆರವಾದ ವಾಸು, ಕರೊನಾ ಸಮಯದಲ್ಲಿ ಉಚಿತ ಅಂಬ್ಯೂಲೆನ್ಸ್ ಸೇವೆ ಮಾಡಿದ ಡ್ರೈವರ್ ಬಾಬು ರವರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪೆಬೆಷನರಿ ಡಿವೈಎಸ್ಪಿ ಮಂಜುನಾಥ್, ಸಿಡಿಪಿಓ ಅನಿತಾ, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಕನ್ನಡಪರ, ಮಹಿಳಾ ಹಾಗೂ ದಲಿತಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
0 Comments