ಬಳ್ಳಾರಿ ಸೆ 15. ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ 54ನೇ ಇಂಜನರ‍್ಸ್ ಡೇ ದಿನಾಚರಣೆ ಕಾರ್ಯಕ್ರಮವು ನಡೆಯಿತು. ಬಳ್ಳಾರಿ ಮಹಾನಗರಪಾಲಿಕೆಯ ಕಮೀಷನರುಗಳಾದ ಶ್ರೀಮತಿ ಪ್ರೀತೀ ಗೆಹ್ಲೋಟ್ ಐ.ಏ.ಎಸ್, ಮುಖ್ಯಅತಿಥಿಗಳಾಗಿ ಆಗಮಿಸಿದರು, ಹಾಗು ಮಹಾನಗರಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರು- ವೃಷಭೇಂದ್ರ ಗೌಡರು, ಖಾಜಾಮೋಹಿಯುದ್ದೀನ್, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಸಿವಿಲ್ ಇಂಜನೀರಿ0ಗ್ ವಿಭಾಗದ ಮುಖ್ಯಸ್ತರಾದ ಡಾ|| ಹೆಚ್.ಎಂ.ಮಲ್ಲಿಕಾರ್ಜುನ, ಡೀನ್-ಅಕಾಡಮಿಕ್ ಡಾ|| ಹೆಚ್.ಗಿರೀಶ , ಡೀನ್-ಪರೀಕ್ಷಾ ಡಾ|| ಬಿ.ಶ್ರೀಪತಿ , ಎಲ್ಲಾವಿಭಾಗಗಳ ಮುಖ್ಯಸ್ತರುಗಳು, ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,
ಶ್ರೀಮತಿ ಪ್ರೀತೀ ಗೆಹ್ಲೋಟ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ನಾನು ಇಂಜನೀಯರ್ಸ ದಿನಾಚರಣೆಯ0ದು ಎಲ್ಲಾ ಇಂಜನೀರುಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಭಾರತದೇಶದಲ್ಲಿ ನಿರ್ಮಾಣಕ್ಕೆ ಬೇಕಾಗಿರುವ ಸಿವಿಲ್ ಕಟ್ಟಡUಳು, ನೀರಿನ ಸರಬರಾಜು, ಓಳಚರಂಡಿ ಕಾಮಗಾರಿ ಕೆಲಸಗಳು, ವಿದ್ಯುತ್, ವಿದ್ಯುನ್ಮಾನ, ಕಂಪ್ಯೂಟರ್, ಇನ್ನಿತರೇ ಇಂಜಿನೀರಿAಗ್ ಕ್ಷೇತ್ರಗಳಲ್ಲಿ ಇನ್ನು ಸಾಕಷ್ಟು ಬದಲಾವಣೆಗಳು ಮಾಡಬೇಕಾಗಿದೆ. ಸ್ವತಂತ್ರ ನಂತರ ದಶಕಗಳಲ್ಲಿ ಜನ ನಿವಾಸಕ್ಕೆ ಅತಿ ಹೆಚ್ಚು ಅಪಾರ್ಟ್ಮೆಂಟ್ ಗಳು ಬೆಳೆದು ಬಂದಿವೆ. ದೇಶದ ಜನಸಂಖ್ಯೆ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ನೂತನ ತಂತ್ರಜ್ಞಾನ ಬಳಸಲು ಅವಶ್ಯಕವಾಗುತ್ತದೆ, ಮುಖ್ಯವಾಗಿ ಯುವಶಕ್ತಿ - ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳು ಮಾಡಲು ಶಿಕ್ಷಕರು ಪ್ರೇರಣೆ ನೀಡಬೇಕು" ಎಂದು ಕರೆನೀಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಸ್ವಾಗತಿಸಿದರು, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ ಮುಖ್ಯಅತಿಥಿಗಳನ್ನು ಪರಿಚಯಿಸಿದರು, ಡಾ|| ಹೆಚ್.ಎಂ.ಮಲ್ಲಿಕಾರ್ಜುನ, ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆಗಳನ್ನು ವಿವರಿಸಿದರು, ಡಾ|| ಶೋಭಾ.ಎಸ್ , ಶ್ರೀಮತಿ ರೋಹಿಣಿ ಹೆಚ್.ಎಂ ನಿರೂಪಿಸಿದರು.
ಕಾಲೇಜಿನ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಅಭಿನಂದಿಸಿದರು. ವೀ.ವಿ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು ಶುಭಹಾರೈಸಿದರು.

0 Comments