ಬಳ್ಳಾರಿ ಸೆ 15. ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ 10 ದಿನಗಳ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಈ ಸಮಾರಂಭದ ಮುಖ್ಯ ಅಥಿತಿಗಳಾದ ಡಾ!! ಶಶಿಧರ ಮುಖ್ಯ ಪಶುಸಂಗೋಪನಾಧಿಕಾರಿಗಳು ಬಳ್ಳಾರಿ, ಇವರು ಕಾರ್ಯಕ್ರಮವನ್ನು ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಈಗಿನ ಕಾಲದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ತುಂಬಾ ಬೇಡಿಕೆಯಿದ್ದು. ತಾವೂಗಳು ಆಸಕ್ತಿಯಿಂದ ತರಬೇತಿ ಪಡೆದುಕೊಂಡು. ಹೈನುಗಾರಿಕೆ ಪ್ರಾರಂಭಿಸಿದರೆ ಉತ್ತಮ ಜೀವನ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಡಾ!! ಬಿ. ಕೆ. ರಮೇಶ ಹಿರಿಯ ವಿಜ್ಞಾನಿಗಳು ಕೆವಿಕೆ ಹಗರಿ ಇವರು ಹೈನುಗಾರಿಕೆ ಮಾಡುವಲ್ಲಿ ಉತ್ತಮ ಹಸುಗಳ ಆಯ್ಕೆ ಮತ್ತು ವಿವಿಧ ತಳಿಯ ಬಗ್ಗೆ ಮಾಹಿತಿ ನೀಡಿದರು. ಶರಣಬಸವ ರೆಡ್ಡಿ ಡಿ, ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬಳ್ಳಾರಿ, ನಾವೂ ಆರ್ಥಿಕವಾಗಿ ಸಬಲರಾದರೆ ಕೌಟುಂಬಿಕ ಜೀವನ ಸುಗಮವಾಗಿರುತ್ತದೆ.
ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಹೈನುಗಾರಿಕೆ ತರಬೇತಿ ನಿಮಗೆ ಸಹಕಾರಿಯಾಗಲಿ ಎಂದು ಹಾರೈಸಿದರು.
ಜಡೇಪ್ಪ, ಮಹಮ್ಮದ ನಿಸಾರ, ಉಪನ್ಯಸಕರು. ಶ್ರೀಮತಿ ಸಿದ್ದಲಿಂಗಮ್ಮ, ಸಂತೋಷ ಕುಮಾರ್, ಕಿರಣ ಕುಮಾರ ಹಾಗೂ 34 ಜನ ಶಿಭಿರಾರ್ಥಿಗಳು ಭಾಗವಹಿಸಿದ್ದರು.


0 Comments