ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವೂ ಚಾಂಪಿಯನ್ ಎಂದು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೂಟ್ ಪ್ರಶಂಸೆ ವ್ಯಕ್ತಪಡಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಭವನದಲ್ಲಿ ಆಯೋಜಿಸಲಾಗಿದ್ದ ‘ಟೋಕಿಯೋ ಒಲಂಪಿಕ್ಸ್-2020 ರಲ್ಲಿ ಭಾಗವಹಿಸಿದ್ದ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭ’ದಲ್ಲಿ ಅವರು ಮಾತನಾಡಿದ ರಾಜ್ಯಪಾಲರು, ಭಾರತದ ಕ್ರೀಡಾಪಟುಗಳು ಟೋಕಿಯೋ ಒಲಂಪಿಕ್ಸ್‍ನಲ್ಲಿ ಉತ್ತಮ ಪ್ರರ‍್ಶನ ನೀಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ 125 ಆಟಗಾರರ ಅತಿ ದೊಡ್ಡ ತಂಡವನ್ನು ಒಲಂಪಿಕ್ಸ್‍ಗೆ ಕಳುಹಿಸಲಾಗಿದೆ. ಅತ್ಯುತ್ತಮ ಪ್ರರ‍್ಶನ ನೀಡುವ ಮೂಲಕ ಆಟಗಾರರು 7 ಪದಕಗಳನ್ನು ಗೆದ್ದಿದ್ದಾರೆ. ಇನ್ನು ಕೆಲವರು ಕಡಿಮೆ ಅಂತರದಿಂದ ಪದಕಗಳಿಂದ ವಂಚಿತರಾಗಿದ್ದಾರೆ. ಆಟಗಾರರು ಅದ್ಭುತ ಪ್ರರ‍್ಶನಗಳನ್ನು ನೀಡುವ ಮೂಲಕ ಅನೇಕ ಹೊಸ ದಾಖಲೆಗಳನ್ನು ಬರೆಯುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಭಾರತೀಯ ಆಟಗಾರರ ಈ ಸಾಧನೆ ಶ್ಲಾಘನೀಯ ಮತ್ತು ಯುವ ಆಟಗಾರರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
1900ರಲ್ಲಿ ಮೊದಲ ಬಾರಿಗೆ ಭಾರತವು ಒಲಂಪಿಕ್ಸ್‍ನಲ್ಲಿ ಭಾಗವಹಿಸಿತು. ಒಲಂಪಿಕ್ಸ್-2020ರ ಆರಂಭದವರೆವಿಗೂ ಭಾರತವು ಒಟ್ಟು 28 ಪದಕಗಳನ್ನು ಗೆದ್ದಿದೆ. 1928ರಿಂದ 1980ರವರೆವಿಗೂ ಭಾರತೀಯ ರಾಷ್ಟ್ರೀಯ ಹಾಕಿ ತಂಡವು ಪ್ರಾಬಲ್ಯವನ್ನು ಸಾಧಿಸಿತ್ತು. 2012 ರಲ್ಲಿ 83 ಸದಸ್ಯರ ಭಾರತೀಯ ತಂಡವು ಗರಿಷ್ಟ 6 ಪದಕಗಳಳನ್ನು ಗೆದ್ದಿತ್ತು. 2012ರಿಂದೀಚೆಗೆ ಅಂದರೆ ಪದಕಗಳನ್ನು ಗೆಲ್ಲುತ್ತಾ ಬಂದಿದ್ದು, 2021ರಲ್ಲಿ 7 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಆಟಗಾರರು ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೀರಜ್ ಚೋಪ್ಡಾ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ, ಮೀರಾಬಾಯಿ ಚಾನು ವೇಟ್ ಲಿಪ್ಟಿಂಗ್‍ನ 49 ಕೆಜಿ ವಿಭಾಗದಲ್ಲಿ 202 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ, ಕುಸ್ತಿಪಟು ರವಿ ದಹಿಯಾ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ, ಬ್ಯಾಡ್ಮಿಂಟನ್ ಆಟಗರ‍್ತಿ ಪಿ.ವಿ.ಸಿಂಧು ಕಂಚಿನ ಪದಕ, 65 ಕೆಜಿ ತೂಕದ ಫ್ರೀಸ್ಟೈಲ್ ಕುಸ್ತಿಯಲ್ಲಿ ಬಜರಂಗ್ ಪುನಿಯಾ ಕಂಚಿನ ಪದಕ, ಲೋವ್ಲಿನಾ ಬರ‍್ಗೊಹೈನ್ ಬಾಕ್ಸಿಂಗ್‍ನಲ್ಲಿ ಕಂಚಿನ ಪದಕ ಮತ್ತು 41 ರ‍್ಷಗಳ ನಂತರ ಪುರುಷರ ಹಾಕಿ ತಂಡವು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಭಾರತೀಯ ಮಹಿಳಾ ಹಾಕಿ ತಂಡವು ಪ್ರಸ್ತುತ ಒಲಿಂಪಿಕ್ಸ್‍ನಲ್ಲಿ ಉತ್ತಮ ಪ್ರರ‍್ಶನ ನೀಡುವ ಮೂಲಕ ಭರವಸೆಯನ್ನು ಮೂಡಿಸಿದ್ದಾರೆ. ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಬಿ.ಎಸ್ ರವರ ಮರ‍್ಗರ‍್ಶನದಿಂದಾಗಿ ಭಾರತೀಯ ಮಹಿಳಾ ಹಾಕಿ ತಂಡ ಉತ್ತಮ ಪ್ರರ‍್ಶನ ನೀಡಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರರ‍್ಶನ ನೀಡುವ ಮೂಲಕ 11 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಹೊಸ ಇತಿಹಾಸ ನರ‍್ಮಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ರ‍್ನಾಟಕ ರಾಜ್ಯದಿಂದ ಗಾಲ್ಫ್‍ನಲ್ಲಿ ಅದಿತಿ ಅಶೋಕ್, ಈಜು ಸ್ರ‍್ಧೆಯಲ್ಲಿ ಶ್ರೀಹರಿ ನಟರಾಜನ್ ಮತ್ತು ಹರ‍್ಸ್ ರೈಡಿಂಗ್‍ನಲ್ಲಿ ಫವಾಜ್ ಮರ‍್ಜಾ ತಮ್ಮ ಅತ್ಯತ್ತಮ ಪ್ರರ‍್ಶನ ನೀಡುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಕರ‍್ತಿ ತಂದಿದ್ದಾರೆ.
ಭಾರತದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರವು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕರ‍್ಯ ನರ‍್ವಹಿಸುತ್ತಿದೆ. ಗೌರವಾನ್ವಿತ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕ್ರೀಡಾ ಚಟುವಟಿಕೆಗಳಿಗಾಗಿ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಿದೆ ಮತ್ತು ಜಾರಿಗೊಳಿಸಿದೆ. ಆ ಎಲ್ಲ ಯೋಜನೆಗಳ ಫಲದ ಫಲಿತಾಂಶಗಳೇ ಇಂದು ನಮ್ಮ ಮುಂದಿವೆ. ರ‍್ನಾಟಕ ರಾಜ್ಯ ರ‍್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಆಟಗಾರರಿಗೆ ಬಹುಮಾನ ನೀಡುವುದರ ಜೊತೆಗೆ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಸಹ ಆಟಗಾರರಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯವು ಅತ್ಯಾಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ‍್ಯಾಕ್‍ಗಳನ್ನು, 14 ಜಿಲ್ಲಾ ಕೇಂದ್ರ ಕ್ರೀಡಾಂಗಣಗಳು, 121 ತಾಲ್ಲೂಕು ಕ್ರೀಡಾಂಗಣಗಳು, 29 ಈಜುಕೊಳಗಳು ಮತ್ತು 44 ಒಳಾಂಗಣ ಕ್ರೀಡಾಂಗಣಗಳೊಂದಿಗೆ 14 ಸ್ಥಳಗಳಲ್ಲಿ 4 ಸಿಂಥೆಟಿಕ್ ಹಾಕಿ ರ‍್ಫ್ ಕರ‍್ಟ್‍ಗಳನ್ನು ಹೊಂದಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಸ್ತುತ ಸಮಾರಂಭದಲ್ಲಿ ಟೋಕಿಯೋ 2020ರಲ್ಲಿ ಭಾಗವಹಿಸಿದ ರಾಜ್ಯದ ಮೂವರು ಪ್ರತಿಭಾವಂತ ಆಟಗಾರರನ್ನು ಪ್ರೋತ್ಸಾಹಕವಾಗಿ ರಾಜ್ಯಪಾಲರ ವಿವೇಚನಾ ನಿಧಿಯಿಂದ ಒಂದು ಲಕ್ಷ ರೂಪಾಯಿ ಮತ್ತು ಸಹಾಯಕ ತರಬೇತುದಾರರಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಿ ಗೌರವಿಸಲಾಯಿತು.
ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇನ ನೀಡಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ರ‍್ನಾಟಕದ ಕ್ರೀಡಾಪಟುಗಳು ಹೆಚ್ಚಾಗಿ ಗುರುತಿಸಿಕೊಳ್ಳಬೇಕು. ಬಾಲ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಬೇಕು. ಈ ನಿಟ್ಟಿನಲ್ಲಿ ರ‍್ಕಾರಕ್ಕೆ ಸಂಪರ‍್ಣ ಸಹಕಾರ ನೀಡಲಾಗುವುದು ಹಾಗೂ ಇದು ಪ್ರತಿಯೊಬ್ಬ ನಾಗರೀಕನು ಈ ಕರ‍್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮಾತನಾಡಿ, ಟೋಕಿಯೋ ಒಲಂಪಿಕ್ಸ್‍ನಲ್ಲಿ ಭಾರತದ ಮತ್ತು ರ‍್ನಾಟಕದ ಕ್ರೀಡಾ ಪಟುಗಳ ಸಾಧನೆ ಗಮನರ‍್ಹವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯವು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ, ಅಮೃತ್ ಕ್ರೀಡಾ ದತ್ತು ಯೋಜನೆಯನ್ನು ರೂಪಿಸಿದ್ದು, 2024ರಲ್ಲಿ ಪ್ಯಾರೀಸ್‍ನಲ್ಲಿ ನಡೆಯುವ ಒಲಂಪಿಕ್ಸ್‍ನಲ್ಲಿ ಭಾಗವಹಿಸುವ 75 ಕ್ರೀಡಾಪಟುಗಳಿಗೆ ಅಗತ್ಯ ತರಬೇತಿ ಹಾಗೂ ಪ್ರೋತ್ಸಾಹ ನೀಡಲು ತಲಾ 5 ಲಕ್ಷ ರೂ.ಗಳ ಅನುದಾನ ನೀಡಿ, ಅವರಲ್ಲಿ ಶಕ್ತಿ ತುಂಬಲಾಗುವುದು ಎಂದರು.
ಪ್ರತಿ ಜಿಲ್ಲಾ ಮಟ್ಟದಲ್ಲಿ ಆಧುನಿಕ ಕ್ರೀಡಾಂಗಣಗಳನ್ನು ನರ‍್ಮಾಣ ಮಾಡಲು ಕ್ರಮವಹಿಸುವುದರ ಜೊತೆಗೆ ಈಗಿರುವ ಕ್ರೀಡಾಂಗಣಗಳನ್ನು ಉನ್ನತೀಕರಿಸುವ ಉನ್ನತೀಕರಿಸಲಾಗುವುದು. ಮುಂದಿನ ಆಯವ್ಯಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದ ಮುಖ್ಯಮಂತ್ರಿಗಳು, ರಾಷ್ಟ್ರೀಯ, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾಪಟುಗಳನ್ನು ತಯಾರು ಮಾಡಲು ಉತ್ತಮ ತರಬೇತುದಾರರ ಅವಶ್ಯಕತೆ ಇದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಕ್ರೀಡಾಪಟುಗಳಿಗೆ ರಾಜಭವನದಿಂದ ಪ್ರೋತ್ಸಾಹ ಸಿಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೊಸ ಪರಂಪರೆ ಪ್ರಾರಂಭಿಸಿರುವುದರಿಂದ, ಕ್ರೀಡಾಪಟುಗಳಿಗೆ ಇದು ದೊಡ್ಡ ಪ್ರೇರಣೆಯಾಗಲಿದೆ ಎಂದು ರಾಜ್ಯಪಾಲರನ್ನು ಅಭಿನಂದಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ರೇಷ್ಮೆ ಇಲಾಖೆ ಸಚಿವ ಡಾ: ಕೆ.ಸಿ. ನಾರಾಯಣಗೌಡ ಮಾತನಾಡಿ, ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ಶೇ.2 ರಷ್ಟು ಹುದ್ದೆಗಳನ್ನು ನೀಡಲು ತರ‍್ಮಾನಿಸಲಾಗಿದ್ದು, ಇತರೆ ಇಲಾಖೆಯಲ್ಲಿಯೂ ಸಹ ಶೇ. 2ರಷ್ಟು ಹುದ್ದೆಗಳನ್ನು ಮೀಸಲಿಡಲು ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ, ಮನವಿಗೆ ಸಕರಾತ್ಮಕವಾಗಿ ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸಿದ್ದು, ತರ‍್ಮಾನದ ಹಂತದಲ್ಲಿದೆ ಎಂದರು.
ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಲು 750 ಹಳ್ಳಿಗಳಲ್ಲಿ ಎನ್‍ಎಸ್‍ಎಸ್ ಮೂಲಕ ಕರ‍್ಯಕ್ರಮಗಳನ್ನು ರ‍್ಪಡಿಸಲಾಗುವುದು. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣದ ಜೊತೆ ಜೊತೆಗೆ ಒಂದು ಗಂಟೆಗಳ ಕಾಲ ಕ್ರೀಡೆಗಳನ್ನು ನಡೆಸಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಲಾಗುವುದು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ರೀಡೆಗೆ ಹೆಚ್ಚಿನ ಪ್ರೊತ್ಸಾಹ ನೀಡಿದ್ದು, ನಮ್ಮ ಮುಖ್ಯಮಂತ್ರಿಗಳು ಸಹ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದ ಸಚಿವರು, ಭಾರತಕ್ಕೆ 7 ಪದಕಗಳನ್ನು ತಂದು ಕೊಟ್ಟ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.
ಸನ್ಮಾನ ಹಾಗೂ ಪ್ರೋತ್ಸಾಹ ಧನ ಸ್ವೀಕರಿಸಿದ ಈಜು ಪಟು ಶ್ರೀಹರಿ ನಟರಾಜನ್ ಮಾತನಾಡಿ, ರಾಜ್ಯದ ಕ್ರೀಡಾಪಟುವಾಗಿ ಒಲಂಪಿಕ್ಸ್‍ನಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯವಾಗಿದೆ, ಪ್ರೋತ್ಸಾಹ ನೀಡಿ ಸ್ಪರ‍್ತಿ ತುಂಬಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಹಾಕಿ ತಂಡದ ತರಬೇತುದಾರರಾದ ಶ್ರೀಮತಿ ಬಿ.ಎಸ್. ಅಂಕಿತ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಲು ಪೋಷಕರು ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನನಗೆ ನನ್ನ ತಂದೆ, ತಾಯಿ, ಅತ್ತೆ, ಮಾವ ಹಾಗೂ ಪತಿ ನೀಡಿರುವ ಪ್ರೋತ್ಸಾಹದಿಂದ ಕ್ರೀಡೆಯಲ್ಲಿ ಉನ್ನತಿ ಸಾಧಿಸಲು ಅವಕಾಶ ಸಿಕ್ಕಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕರ‍್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ರ‍್ಕಾರದ ಅಪರ ಮುಖ್ಯ ಕರ‍್ಯರ‍್ಶಿಗಳಾದ ಶ್ರೀಮತಿ ಡಾ: ಶಾಲಿನಿ ರಜನೀಶ್ ಅವರು ಸ್ವಾಗತಿಸಿದರು.
ಕರ‍್ಯಕ್ರಮದಲ್ಲಿ ಶಾಸಕರು ಹಾಗೂ ರ‍್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಡಾ: ಕೆ. ಗೋವಿಂದರಾಜು, ಉಪಾಧ್ಯಕ್ಷರಾದ ಪುರುಷೋತ್ತಮ್ ಹಾಗೂ ಕ್ರೀಡಾಪಟುಗಳ ಕುಟುಂಬದವರು ಭಾಗವಹಿಸಿದ್ದರು.




0 Comments