ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಅನುದಾನ ಬಿಡುಗಡೆ ಕುರಿತು ವಿಧಾನ ಪರಿಷತ್ತಿನ ಐದು ಜನ ಸದಸ್ಯರ ಸಮಿತಿಯ ಅಂತಿಮ ಸಭೆ ಸಭಾಪತಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ನಾಳೆ ನಡೆಯಲಿದೆ.
ಈ ಹಿಂದೆ ನಡೆದ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರ ಸಭೆಯಲ್ಲಿ ಅನುದಾನ ನೀಡಿಕೆ ಕುರಿತು ಸಭಾಪತಿ ಶ್ರೀ ಬಸವರಾಜ ಹೊರಟ್ಟಿಯವರು ಸರಕಾರದ ಹಿರಿಯ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹೇರಿದ್ದ ಪರಿಣಾಮವಾಗಿ ಕಳೆದ ಮೂರು ರ‍್ಷಗಳ ಅವಧಿಯ ಶಾಸಕರ ಪ್ರದೇಶಾವೃದ್ಧಿ ನಿಧಿ ಬಿಡುಗಡೆಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ತಿಳಿಸಲಾಯಿತು. ತನ್ಮೂಲಕ ಮಾನ್ಯ ಸಭಾಪತಿಗಳ ಒತ್ತಾಸೆ ಹಾಗೂ ವಿಶೇಷ ಮುತುರ‍್ಜಿಯಿಂದ ಬಾಕಿಯಿದ್ದ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಕುರಿತಂತೆ ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದು ಎಲ್ಲಾ ವಿಧಾನ ಪರಿಷತ್ ಸದಸ್ಯರಲ್ಲಿ ಸಂತಸ ಮೂಡಿಸಿದೆ.
ಈ ಕುರಿತಂತೆ ನಾಳೆ ದಿನಾಂಕ: 04-09-2021 ರಂದು ಬೆಂಗಳೂರಿನ ವಿಧಾನ ಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ: 106ರಲ್ಲಿ ಮಧ್ಯಾಹ್ನ 03-00 ಗಂಟೆಗೆ ಅಂತಿಮ ಸಭೆ ನಡೆಯಲಿದ್ದು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆ ಕುರಿತಂತೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ADVERTISEMENT

0 Comments