ಜಯನಗರ ,ಸಾರಕ್ಕಿ ಸಿಂಧೂರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಸೇವಕ್ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ 500ಮಹಿಳೆಯರಿಗೆ ಬಾಗಿನ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಜನಜಾಗೃತಿ ಅಭಿಯಾನ.
ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕರು ,ಕೆ.ಪಿ.ಸಿ.ಸಿ.ಕಾ ರ್ಯಾಧ್ಯಕ್ಷರೂ ಆದ ರಾಮಲಿಂಗಾರೆಡ್ಡಿರವರು ಮತ್ತು ಶಾಸಕಸೌಮ್ಯರೆಡ್ಡಿರವರು ಹಾಗೂ ಕಾಂಗ್ರೆಸ್ ನ ಮುಖಂಡ ಅರುಣ್ ಕುಮಾರ್ ಸೇವಕ್ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಶ್ರೀಮತಿ ಮಂಜುಳ ಅರುಣ್ ಕುಮಾರ್ ರವರು ಚಲನಚಿತ್ರ ನಟಿ ರಾಧ ಮತ್ತು ಡಾ||ಗೀತಾರವರು ಉದ್ಘಾಟನೆ ನೇರವೆರಿಸಿದರು.
ಇದೇ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿರವರು ಮಾತನಾಡಿ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಮಹಿಳಾ ಸಬಲೀರರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗೆ ಸಹಕಾರ ನೀಡಿತು.
ಇಂದು ಸ್ವಸಹಾಯ ಗುಂಪುನಿಂದ ಮಹಿಳೆಯರಿಗೆ ಸಾಲ ಸೌಲಭ್ಯ ,ಸ್ವಯಂ ಉದ್ಯೋಗ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನ ಮಹಿಳೆಯರಿಗೆ ತಲುಪಿಸಲು ಸ್ವಸಹಾಯ ಸಂಘ ಸಹಕಾರಿಯಾಗಿದೆ. ಬಾಗಿನ ನೀಡುವುದು ಶುಭಕರದ ಸಂಕೇತ .ಮಹಿಳೆಯರಿಗೆ ಪ್ರಮುಖ ಹಬ್ಬಗಳಲ್ಲಿ ಸಂಪ್ರಾದಯ ಪ್ರಕಾರ ಹರಿಶಿನ ,ಕುಂಕುಮ ,ಹಸಿರು ಗಾಜಿನ ಬಳೆ ವಿವಿಧ ಶುಭಕರವಾದ ವಸ್ತುಗಳ ಕೊಟ್ಟು ,ಶುಭಾಶಯ ಕೋರುವುದು ವಿಶೇಷವಾಗಿದೆ .
ಜೆ.ಪಿ.ನಗರದಲ್ಲಿ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಒಂದೇ ಕುಟುಂಬದವರಂತೆ ಸಹಬಾಳ್ಮೆ ಮೂಲಕ ಬದುಕೋಣ ಎಂಬ ಸಂದೇಶ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ .
ಕೊರೋನ ಸಾಂಕ್ರಮಿಕ ರೋಗ ಇನ್ನು ಮುಕ್ತವಾಗಿಲ್ಲ ಜನರು ಜಾಗೃತಿಯಿಂದ ಗಣೇಶ ಹಬ್ಬ ವನ್ನು ಮನೆಯಲ್ಲಿ ಅಚರಣೆ ಮಾಡಿ .ಸಾಮೂಹಿಕ ಗಣೇಶ ಹಬ್ಬ ಅಚರಣೆ ಅಚರಣೆಗೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ತನ್ನಿ
ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯುತ್ತಾನೆ .ಈ ಬಾರಿ ಗಣೇಶ ಪ್ರತಿಷ್ಟಾಪನೆ ಮಾಡುವ ಮನೆಗಳಲ್ಲಿ ಬಣ್ಣದ ರಾಸಯನಿಕ ಗಣೇಶ ಮೂರ್ತಿಗಳು ಬೇಡ ಅದರ ಬದಲು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತನ್ನಿ.
ಮಣ್ಣಿನ ಗಣೇಶ ನೀರಿನಲ್ಲಿ ಕರಗಿದರೆ ಯಾವುದೇ ಹಾನಿಯಿಲ್ಲ ,ಪರಿಸರವು ಉಳಿಯುತ್ತದೆ ಎಂದು ಹೇಳಿದರು.



0 Comments