Ticker

6/recent/ticker-posts

Ad Code

Responsive Advertisement

ಲಕ್ಷ್ಮಮ್ಮ ಮತ್ತು ಎ.ಬಿ. ಮಾರೇಗೌಡ ಸ್ಮರಣಾರ್ಥ ಶಿಕ್ಷಕರ ದಿನಾಚರಣೆ

ನಮ್ಮಲ್ಲಿ ಗುರುಗಳಿಗೆ ಗೌರವಿಸುವ ಪರಂಪರೆ ಇದೆ. ಗುರು ಇಲ್ಲದೆ ಗುರಿ ಇಲ್ಲ. ಗುರುಗಳ ಪಾತ್ರ ಬಹಳ ಮಹತ್ವದ್ದು. ಗುರು ಶಿಷ್ಯರ ಸಂಬಂಧ ವಿಶಿಷ್ಟವಾದದ್ದು. ಇತ್ತೀಚೆಗೆ ಗುರು ಶಿಷ್ಯರ ಸಂಬಂಧದ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ. ವಿಜಯಾ ಸುಬ್ಬರಾಜು ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಎಚ್.ಆರ್. ಲಕ್ಷ್ಮಮ್ಮ ಮತ್ತು ಎ.ಬಿ. ಮಾರೇಗೌಡ ಸ್ಮರಣಾರ್ಥ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

ಸರ್ವಪಲ್ಲಿ ರಾಧಾಕೃಷ್ಣ ಅವರು ತತ್ವಜ್ಞಾನಿಯಾಗಿದ್ದ ಆದರ್ಶ ಶಿಕ್ಷಕರಾಗಿದ್ದರು. ಇಂದು ಅವರ ಆದರ್ಶಗಳನ್ನು ಗುರುಗಳು ಅನುಸರಿಸುವ ಅಗತ್ಯವಿದೆ. ಅಂತಹ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ನಿವೃತ್ತ ಶಿಕ್ಷಕಿ ಗಾಯತ್ರಿ ರಾಮಣ್ಣ ಅವರನ್ನು ಸನ್ಮಾನಿಸುತ್ತಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

 

ಅಭಿನಂದನಾ ನುಡಿ ನುಡಿದ ಕನ್ನಡ ಪ್ರಾಧ್ಯಾಪಕ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಸರ್ವಪಲ್ಲಿ ರಾಧಾಕೃಷ್ಣ ಅವರು ಕೇವಲ ಶಿಕ್ಷಕರಷ್ಟೇ ಅಲ್ಲ. ಅದರಾಚೆಗೆ ಬೆಳೆದವರು. ಅಕ್ಷರಗಳನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವ ಶಿಕ್ಷಕ ಮಾತ್ರ ಆದರ್ಶ ಗುರುವಾಗಬಲ್ಲರು. ಅಂತೆಯೇ ಅಕ್ಷರಗಳನ್ನು ಧಿಕ್ಕರಿಸುವ ಶಿಷ್ಯರ ಭವಿಷ್ಯ ಕತ್ತಲೆಯಡೆಗೆ ಸಾಗುವುದು. ಶಿಕ್ಷಕ ವೃತ್ತಿಯ ಜೊತೆಗೆ ಗಾಯನ, ಕನ್ನಡ ಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಗಾಯತ್ರಿ ರಾಮಣ್ನ ಅವರನ್ನು ಸನ್ಮಾನಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.

 

ಸನ್ಮಾನ ಸ್ವೀಕರಿಸಿದ ಗಾಯತ್ರಿ ರಾಮಣ್ಣ ಅವರು ಮಾಡನಾಡಿ, ಶಾಲೆಯಲ್ಲಿ ಮಕ್ಕಳನ್ನು ಗಾಯನದಿಂದ ಆಕರ್ಷಿಸಲು ಸಾಧ್ಯ. ನಾನು ಆ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕಾಗಿ ಕನ್ನಡ ಸಂಘರ್ಷ ಸಮಿತಿಗೆ ಕೃತಜ್ಞಳಾಗಿದ್ದೇನೆ ಎಂದರು.

 

ಕನ್ನಡ ಸಂಘರ್ಷ ಸಮಿತಿಯ ನೂನತ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಆದರ್ಶ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಮುಂದುವರಿಸುವುದಾಗಿ ಅಧ್ಯಕ್ಷ ಭಾಷಣದಲ್ಲಿ ತಿಳಿಸಿದರು.

 

ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪ್ರಕಾಶಮೂರ್ತಿ ಅವರು ಎಲ್ಲರನ್ನು ಸ್ವಾಗತಿಸಿದರು. ಪತ್ತಂಗಿ ಎಸ್. ಮುರಳಿ ಕಾರ್ಯಕ್ರಮ ನಿರೂಪಿಸಿದರು. ಇಂದಿರಾ ಶರಣ್ ಜಂಬಲದಿನ್ನಿ ವಂದನೆ ಸಲ್ಲಿಸಿದರು.


Post a Comment

0 Comments

Ad Code

Responsive Advertisement