Ticker

6/recent/ticker-posts

Ad Code

Responsive Advertisement

ದೀನದಯಾಳ್ ಉಪಾಧ್ಯಾಯರ ಜನ್ಮದಿನ ಆಚರಣೆ: ಪೌರಕಾರ್ಮಿಕರಿಗೆ ಸನ್ಮಾನ

 ಬೆಂಗಳೂರು: ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಬ್ಯಾಟರಾಯನಪುರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೌರಕಾರ್ಮಿಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.





ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ.. ಸದಾನಂದ ಗೌಡ, ಸಚಿವರಾದ ಶ್ರೀ ಮುನಿರತ್ನ, ಶ್ರೀ ಗೋಪಾಲಯ್ಯ, ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ. ಸಂದೀಪ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಜಿತ್ ಹೆಗಡೆ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ವಸಂತ್ ಗೌಡ, ಬೆಂಗಳೂರು ಉತ್ತರ ಜಿಲ್ಲೆಯ ಶ್ರೀ ಪ್ರಶಾಂತ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದರ್ಶನ್ ದೇಸಾಯಿ, ಬ್ಯಾಟರಾಯನಪುರದ ಮುಖಂಡರಾದ ಶ್ರೀ ರವಿ, ಶ್ರೀ ಗೋಪಿನಾಥ ರೆಡ್ಡಿ, ಪ್ರಭಾರಿಗಳಾದ ಶ್ರೀ ರಾಜಣ್ಣ, ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ನಾರಾಯಣ್ ಅವರು ಭಾಗವಹಿಸಿದ್ದರು.

ಭಾರತೀಯ  ಜನಸಂಘದ ಸಂಸ್ಥಾಪಕರು ಮತ್ತು ಬಿಜೆಪಿ ಸಿದ್ಧಾಂತದ ಪ್ರವರ್ತಕರು ಆದ ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯರು ಅಪ್ರತಿಮ ಸಂಘಟಕರು, ದಾರ್ಶನಿಕರು,  ರಾಷ್ಟ್ರೀಯವಾದಿ ಮತ್ತು ಜನಸಂಘದ ಸಂಸ್ಥಾಪಕರು ಆಗಿದ್ದರು ಎಂದು ಅತಿಥಿಗಳು ತಿಳಿಸಿದರು.

ಅವರ ಸಿದ್ಧಾಂತದ ಮಾರ್ಗದರ್ಶನದಲ್ಲಿ ನಡೆದು ಬಂದ ಬಿಜೆಪಿಯು ಇಂದು ವಿಶ್ವದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಶ್ರೀ ನರೇಂದ್ರ ಮೋದಿ, ಶ್ರೀ ವಾಜಪೇಯಿ, ಶ್ರೀ ಅಡ್ವಾಣಿ ಅವರಂಥ ಸಮರ್ಥ ನಾಯಕರನ್ನು ದೇಶಕ್ಕೆ ನೀಡಿದೆ ಎಂದು ತಿಳಿಸಿದರು.

ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಈ ದಿನದಂದು ಪಕ್ಷಕ್ಕಾಗಿ ಹಾಗೂ ದೇಶಕ್ಕಾಗಿ ಅವರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತ ಅವರ ಜೀವನದ ಹಾದಿಯಲ್ಲಿ, ಪಕ್ಷದ ತತ್ವ ಸಿದ್ಧಾಂತಗಳನ್ನು ಕಾರ್ಯಕರ್ತರು ಮೈಗೂಡಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

Post a Comment

0 Comments

Ad Code

Responsive Advertisement